ಮುಖ್ಯ ಸುದ್ದಿ
ತೊಗರಿಗೆ 8 ಸಾವಿರ ನಿಗಧಿ | ಚಿತ್ರದುರ್ಗದಲ್ಲೂ ಖರೀಧಿ
CHITRADURGA NEWS | 09 FERBUARY 2025
ಚಿತ್ರದುರ್ಗ: 2024-25ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ತೊಗರಿ ಖರೀದಿಗೆ ಸಂಬಂಧಿಸಿದಂತೆ, ತಕ್ಷಣದಿಂದಲೇ ಖರೀದಿ ಪ್ರಕ್ರಿಯೆ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ.
Also Read: ವೆಂಕಟೇಶ್ವರ ಶಿಕ್ಷಣ ಸಂಸ್ಥೆ ವಿದ್ಯಾರ್ಥಿ ಸಯಿದಾ ಸಾನಿಯಾ ಮೆಹಕ್ ಗೆ 3ನೇ ರ್ಯಾಂಕ್
ಕೇಂದ್ರ ಸರ್ಕಾರದ ಬೆಂಬಲ ಬೆಲೆ ರೂ.7,550 ರ ಜೊತೆಗೆ ರಾಜ್ಯ ಸರ್ಕಾರದ ಪ್ರೋತಾಹ ಧನ ರೂ.450 ಪ್ರತಿ ಕ್ವಿಂಟಾಲ್ ಗೆ, ಸೇರಿ ಒಟ್ಟು ರೂ.8,000 ಪ್ರತಿ ಕ್ವಿಂಟಾಲ್ ರಂತೆ ತೊಗರಿ ಖರೀದಿಸಲು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಅವರು ಕಳೆದ ಜನವರಿ ಮಾಹೆಯಲ್ಲಿ ಭರವಸೆ ನೀಡಿದ್ದರು.
ಅದರಂತೆ ಮುಖ್ಯ ಮಂತ್ರಿಗಳು ಅನುಮೋದನೆ ನೀಡಿದ್ದು ಹಾಗೂ ಇಂದು ಆರ್ಥಿಕ ಇಲಾಖೆ ಸಹಮತಿ ನೀಡಲಾಗಿರುತ್ತದೆ. ಈ ಕುರಿತು ಸಂಬಂಧಿಸಿದ ಇಲಾಖೆಗೆ ತಕ್ಷಣದಿಂದ ಅಷ್ಠಾನಗೊಳಿಸಲು ಸೂಕ್ತ ನಿರ್ದೇಶನ ನೀಡಲಾಗಿದೆ.
ರಾಜ್ಯದ ಪ್ರಮುಖ ತೊಗರಿ ಬೆಳೆಯುವ ಜಿಲ್ಲೆಗಳಾದ ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ವಿಜಯಪುರ, ಕೊಪ್ಪಳ, ಬಳ್ಳಾರಿ, ವಿಜಯನಗರ, ಬಾಗಲಕೋಟೆ, ಬೆಳಗಾವಿ, ಚಿತ್ರದುರ್ಗ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ಅಂದಾಜು 330 ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲು ಕ್ರಮ ವಹಿಸಲಾಗಿದೆ.
Also Read: SJM ಕಾಲೇಜಿನ ವಿದ್ಯಾರ್ಥಿನಿಗೆ 5ನೇ ರ್ಯಾಂಕ್
ರೈತ ಬಾಂಧವರು ತಮ್ಮ ಹತ್ತಿರದ ಪಿಎಸಿಎಸ್, ಎಫ್ ಪಿ ಒ, ಟಿಎಪಿಸಿಎಂಎಸ್ ಗಳಿಗೆ ಭೇಟಿ ನೀಡಿ ನೊಂದಣಿ ಮಾಡಿಕೊಂಡು ಬೆಂಬಲ ಬೆಲೆ ಯೋಜನೆಯ ಹಾಗೂ ರಾಜ್ಯ ಸರ್ಕಾರದ ಪ್ರೋತ್ಸಾಹ ಧನದ ಸದುಪಯೋಗ ಪಡೆದುಕೊಳ್ಳಲು ಕೋರಿದೆ.