ಮುಖ್ಯ ಸುದ್ದಿ
SJM ಕಾಲೇಜಿನ ವಿದ್ಯಾರ್ಥಿನಿಗೆ 5ನೇ ರ್ಯಾಂಕ್
CHITRADURGA NEWS | 08 FEBRUARY 2025
ಚಿತ್ರದುರ್ಗ: ದಾವಣಗೆರೆ ವಿಶ್ವವಿದ್ಯಾಲಯವು ನಡೆಸಿದ 2023-24ನೇ ಸಾಲಿನ ಬಿ.ಕಾಂ. ಅಂತಿಮ ಪದವಿ ಪರೀಕ್ಷೆಯಲ್ಲಿ ನಗರದ ಚಂದ್ರವಳ್ಳಿಯ ಎಸ್.ಜೆ.ಎಂ. ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಟಿ.ಮಹಾಲಕ್ಷ್ಮೀ 5ನೇ ರ‍್ಯಾಂಕ್ ಪಡೆದಿದ್ದಾರೆ ಎಂದು ಪ್ರಾಂಶುಪಾಲ ಡಾ.ಎಸ್.ಹೆಚ್. ಪಂಚಾಕ್ಷರಿ ತಿಳಿಸಿದ್ದಾರೆ.
Also Read: ದೆಹಲಿಯಲ್ಲಿ ಭರ್ಜರಿ ಗೆಲುವು | ಚಿತ್ರದುರ್ಗದಲ್ಲಿ ಪಟಾಕಿ ಸಿಡಿಸಿದ ಬಿಜೆಪಿ ಕಾರ್ಯಕರ್ತರು
ಕಲಾ ವಿಭಾಗದಲ್ಲಿ ಉಜ್ಮಾ ಮರಿಯಂ, ಜಿ.ಎಂ.ಲೀಲಾ, ಟಿ.ಸಹನ, ವಿಜ್ಞಾನ ವಿಭಾಗದಲ್ಲಿ ವಿ.ತೇಜಸ್ವಿನಿ, ಸಾರಿಯ ತೆಹರಿಂ, ವಿ.ಮೇಘನ, ವಾಣಿಜ್ಯ ವಿಭಾಗದಲ್ಲಿ ಟಿ.ಬಿಂದುಶ್ರೀ, ರಿಯಾ ಎಂ. ಬಾಫ್ನ, ಎಂ.ಅಮೃತ ಶೇ.80ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದು, ಕಾಲೇಜಿಗೆ ಉತ್ತಮ ಫಲಿತಾಂಶ ಲಭಿಸಿದೆ ಎಂದು ತಿಳಿಸಿದ್ದಾರೆ.
5ನೇ ರ‍್ಯಾಂಕ್ ಗಳಿಸಿ ಕಾಲೇಜಿಗೆ ಕೀರ್ತಿ ತಂದಿರುವ ಟಿ. ಮಹಾಲಕ್ಷ್ಮೀ ಅವರನ್ನು ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ ಕಳಸದ, ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಜಿ, ಕಾಲೇಜಿನ ಪ್ರಾಚಾರ್ಯರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.
Also Read: ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಚುನಾವಣೆ | ಕಾರೇಹಳ್ಳಿ ಉಲ್ಲಾಸ್ ಪುನರಾಯ್ಕೆ