ಮುಖ್ಯ ಸುದ್ದಿ
ವಿವಿ ಸಾಗರ ಜಲಾಶಯದ ಇಂದಿನ ಮಟ್ಟ | ಮೂರೇ ದಿನದಲ್ಲಿ 1 ಟಿಎಂಸಿಗಿಂತ ಹೆಚ್ಚು ನೀರು ಸಂಗ್ರಹ
CHITRADURGA NEWS | 22 MAY 2024
ಚಿತ್ರದುರ್ಗ: ಕೃತಿಕಾ ಮಳೆಯ ಆರ್ಭಟಕ್ಕೆ ಪೂರ್ವ ಮುಂಗಾರಿನಲ್ಲೇ ಚಿತ್ರದುರ್ಗ ಜಿಲ್ಲೆಯ ಜೀವನಾಡಿ ವಾಣಿವಿಲಾಸ ಸಾಗರ ಜಲಾಶಯಕ್ಕೆ ನೀರು ಹರಿದು ಬಂದಿದೆ.
ಕಡೂರು, ಚಿಕ್ಕಮಗಳೂರು, ಹೊಸದುರ್ಗ ಭಾಗದಲ್ಲಿ ಸುರಿದ ವ್ಯಾಪಕ ಮಳೆಯ ಪರಿಣಾಮ ವೇದಾವತಿ ನದಿಗೆ ಜೀವಕಳೆ ಬಂದಿದೆ.
ಇದನ್ನೂ ಓದಿ: ಸೂಗೂರಿನಲ್ಲಿ 108 ಮಿ.ಮೀ ಮಳೆ | 34 ಮನೆಗಳಿಗೆ ಹಾನಿ | 28 ಎಕರೆ ತೋಟಗಾರಿಕೆ ಬೆಳೆ ಹಾನಿ
ಇದರಿಂದಾಗಿ ವಿವಿ ಸಾಗರಕ್ಕೆ ಕಳೆದ ಮೂರು ದಿನಗಳಿಂದ ದೊಡ್ಡ ಪ್ರಮಾಣದಲ್ಲಿ ನೀರು ಹರಿದು ಬಂದಿದೆ.
ಮೇ.22 ಬೆಳಗ್ಗೆ 8 ಗಂಟೆಗೆ ನಡೆಸಿದ ಮಾಪನದ ವೇಳೆ ಜಲಾಶಯಕ್ಕೆ 4800 ಕ್ಯೂಸೆಕ್ ನೀರು ಹರಿದು ಬಂದಿರುವುದು ಗೊತ್ತಾಗಿದೆ.
ಇದನ್ನೂ ಓದಿ: ಅಡಿಕೆ ಧಾರಣೆ | ರಾಜ್ಯದ ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟಿದೆ
ಮೇ.20 ರಂದು 3800 ಕ್ಯೂಸೆಕ್ ನೀರು ಹರಿದಿದ್ದರೆ, ಮೇ.21 ರಂದು 5100 ಕ್ಯೂಸೆಕ್ ನೀರು ಬಂದಿತ್ತು. ಮೇ.22 ರಂದು 4800 ಕ್ಯೂಸೆಕ್ ಪ್ರಮಾನದಲ್ಲಿ ನೀರು ಬಂದು ಜಲಾಶಯ ಸೇರಿದೆ.
ಮೂರು ದಿನದ ಒಟ್ಟು ಲೆಕ್ಕಾಚಾರ ಸೇರಿದರೆ 13700 ಕ್ಯೂಸೆಕ್ ನೀರು ಹರಿದು ಬಂದಿದೆ. ಈಗಾಗಲೇ 1 ಟಿಎಂಸಿಗಿಂತಲೂ ಅಧಿಕ ಪ್ರಮಾಣದ ನೀರು ಜಲಾಶಯಕ್ಕೆ ಬಂದು ಸೇರಿರುವುದು ರೈತರರಲ್ಲಿ ಸಂತಸ ಮೂಡಿಸಿದೆ.
ಇದನ್ನೂ ಓದಿ: ಮಾನವೀಯತೆ ಮರೆತು ಶುಲ್ಕ ವಸೂಲಿ ಮಾಡಿದರೆ ಕ್ರಮ ಅನಿವಾರ್ಯ | ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಚ್ಚರಿಕೆ
ಒಟ್ಟು 30 ಟಿಎಂಸಿ ನೀರು ಸಂಗ್ರಹ ಸಾಮಥ್ರ್ಯದ ಜಲಾಶಯದಲ್ಲಿ 130 ಅಡಿ ಎತ್ತರದ ಜಲಾಶಯದಲ್ಲಿ 2022ರಲ್ಲಿ ಕೋಡಿ ಬಿದ್ದು ನೀರು ಹರಿದಿತ್ತು.
ಸದ್ಯ 113.35 ಅಡಿ ನೀರು ಸಂಗ್ರಹವಿದೆ. ಅಂದರೆ, ಡೆಡ್ ಸ್ಟೋರೇಜ್ ಸೇರಿ 17.85 ಟಿಎಂಸಿ ನೀರು ವಿವಿ ಸಾಗರದಲ್ಲಿ ಲಭ್ಯವಿದೆ.