Connect with us

    ನಿಮ್ಮೂರಲ್ಲಿ ಕುಡಿಯುವ ನೀರಿನ ಸಮಸ್ಯೆಯೇ | ಇಲ್ಲಿದೆ ನೋಡಿ ಸಹಾಯವಾಣಿ

    ಮುಖ್ಯ ಸುದ್ದಿ

    ನಿಮ್ಮೂರಲ್ಲಿ ಕುಡಿಯುವ ನೀರಿನ ಸಮಸ್ಯೆಯೇ | ಇಲ್ಲಿದೆ ನೋಡಿ ಸಹಾಯವಾಣಿ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 18 FEBRUARY 2024

    ಚಿತ್ರದುರ್ಗ: ಮಳೆಯ ಅಭಾವದ ಕಾರಣಕ್ಕೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸುತ್ತಿದೆ. ಫೆಬ್ರವರಿ ತಿಂಗಳಲ್ಲೇ ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗಿದೆ. ಅಂತರ್ಜಲ ಪಾತಾಳ ಸೇರಿದ್ದು, ರೈತರು ಎಷ್ಟು ಆಳದವರೆಗೆ ಬೋರ್‍ವೆಲ್ ಹಾಕಿಸಿದರೂ ನೀರು ಸಿಗದಂತಾಗುತ್ತಿದೆ.

    ಈ ಪರಿಸ್ಥಿತಿಯಲ್ಲಿ ಜಿಲ್ಲೆಯ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

    ಇದನ್ನೂ ಓದಿ: ಅಡಿಕೆ ಸಿಪ್ಪೆಯನ್ನು ಗೊಬ್ಬರ ಮಾಡುವುದು ಹೇಗೆ ಗೊತ್ತಾ

    ಈಗಾಗಲೇ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಿಲ್ಲೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆದಿದ್ದು, ಜಿಲ್ಲೆಯ 289 ಸಮಸ್ಯಾತ್ಮಕ ಗ್ರಾಮಗಳ ಕಡೆಗೆ ಗಮನಹರಿಸಿದೆ.

    ಇದರೊಟ್ಟಿಗೆ ಪ್ರತಿ ತಾಲೂಕಿನಲ್ಲೂ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್‍ಫೋರ್ಸ್ ಸಮಿತಿ ರಚನೆಯಾಗಿದ್ದು, ತುರ್ತು ಸಂದರ್ಭ ನಿರ್ವಹಣೆಗಾಗಿ ಪ್ರತಿ ತಾಲೂಕಿಗೆ 40 ಲಕ್ಷ ರೂ.ಗಳನ್ನು ಮೀಸಲಿಡಲಾಗಿದೆ.

    ಇದನ್ನೂ ಓದಿ: ಮೈತ್ರಿ ಅಭ್ಯರ್ಥಿ ಗೆಲುವಿಗೆ ಜೆಡಿಎಸ್ ಕಾರ್ಯಕರ್ತರ ಪಣ

    ಖಾಸಗಿ ಬೋರ್‍ವೆಲ್‍ಗಳಿಂದ ನೀರು ಪಡೆಯುವುದಾದರೆ, ಪೈಪ್‍ಲೈನ್ ಇತ್ಯಾದಿ ಕೆಲಸಗಳಿಗೆ ಪ್ರತ್ಯೇಕವಾಗಿ 25 ಲಕ್ಷ ರೂ.ಗಳನ್ನು ಪ್ರತಿ ತಾಲೂಕಿಗೆ ಕೊಡಲಾಗಿದೆ.

    ಇನ್ನೂ ಜಿಲ್ಲೆಯ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಾದರೆ ತಕ್ಷಣ ಸಮಸ್ಯೆ ದಾಖಲಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯವಾಣಿಯನ್ನೂ ಆರಂಭಿಸಲಾಗಿದೆ.

    ಇದನ್ನೂ ಓದಿ: ಮಠಗಳಲ್ಲಿ ಹೋಮ-ಹವನ ನಾಚಿಕೆಗೇಡಿನ ಸಂಗತಿ

    ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಲ್ಲಿ, ಸಾರ್ವಜನಿಕರು ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿನ ಸಾರ್ವಜನಿಕ ಕುಂದುಕೊರತೆ ಕೋಶದಲ್ಲಿ ಸ್ಥಾಪಿಸಲಾಗಿರುವ ಸಹಾಯವಾಣಿ 08194-222538 ಸಂಖ್ಯೆಗೆ ಕರೆ ಮಾಡಿ, ತಮ್ಮ ಸಮಸ್ಯೆಗಳನ್ನು ದಾಖಲಿಸಬಹುದಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಟಿ. ತಿಳಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top