Connect with us

Vedavathi rever; ವೇದಾವತಿ ನದಿ ಹರಿಯುವ ದೃಶ್ಯ ನಯನ ಮನೋಹರ

Vedavathi rever near kellodu

ಹೊಸದುರ್ಗ

Vedavathi rever; ವೇದಾವತಿ ನದಿ ಹರಿಯುವ ದೃಶ್ಯ ನಯನ ಮನೋಹರ

CHITRADURGA NEWS | 30 JULY 2024

ಚಿತ್ರದುರ್ಗ: ಹೊಸದುರ್ಗ ತಾಲೂಕಿನ ಕೆಲ್ಲೋಡು ಬಳಿ ವೇದಾವತಿ ನದಿ ಮೈದುಂಬಿ ಹರಿಯುತ್ತಿದ್ದು, ಜಲವೈಭವ ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ಧಾವಿಸುತ್ತಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗುತ್ತಿರುವ ಪರಿಣಾಮ ವೇದಾವತಿ ನದಿಗೆ ಜೀವಕಳೆ ಬಂದಿದೆ.

ಇದನ್ನೂ ಓದಿ: ಮೈದುಂಬಿದ ವೇದಾವತಿ | ವಿವಿ ಸಾಗರಕ್ಕೆ ಬರೋಬ್ಬರಿ 4737 ಕ್ಯೂಸೆಕ್ ನೀರು

ಚಿತ್ರದುರ್ಗ ಜಿಲ್ಲೆಯಲ್ಲಿ, ವಿಶೇಷವಾಗಿ ವೇದಾವತಿ ಹರಿಯುವ ಹೊಸದುರ್ಗ ತಾಲೂಕಿನಲ್ಲಿ ಹೆಚ್ಚು ಮಳೆಯಾಗದಿದ್ದರೂ ವೇದಾವತಿ ನದಿ ಹರಿಯುತ್ತಿರುವ ದೃಶ್ಯ ಸಂಭ್ರಮ ಮೂಡಿಸಿದೆ.

ವೀಡಿಯೋ ನೋಡಿ: https://www.facebook.com/share/v/ZAQvzm7WdacHH8R8/?mibextid=oFDknk

ಹೊಸದುರ್ಗ ಪಟ್ಟಣಕ್ಕೆ ನೀರು ಸರಬರಾಜು ಮಾಡಲು ಹೊಸದುರ್ಗ-ಹುಳಿಯಾರು ರಸ್ತೆಯಲ್ಲಿರುವ ಕೆಲ್ಲೋಡು ಬಳಿ ವೇದಾವತಿ ನದಿಗೆ ಬ್ಯಾರೇಜ್ ನಿರ್ಮಿಸಿದ್ದು, ಈ ಬ್ಯಾರೇಜ್ ಬಳಿ ವೇದಾವತಿ ವಿವಿ ಸಾಗರದತ್ತ ಧುಮ್ಮುಕ್ಕಿ ಹರಿಯುತ್ತಿರುವ ದೃಶ್ಯ ನಯನ ಮನೋಹರವಾಗಿದೆ.

Click to comment

Leave a Reply

Your email address will not be published. Required fields are marked *

More in ಹೊಸದುರ್ಗ

To Top
Exit mobile version