ಕ್ರೈಂ ಸುದ್ದಿ
Police: ಕಳ್ಳತನವಾಗಿದ್ದ ಟಿಪ್ಪರ್ ಪತ್ತೆ | ಅಂತಾರಾಜ್ಯ ಕಳ್ಳರ ಎಡೆಮುರಿ ಕಟ್ಟಿದ ಮೊಳಕಾಲ್ಮೂರು ಪೊಲೀಸರು
CHITRADURGA NEWS | 22 SEPTEMBER 2024
ಚಿತ್ರದುರ್ಗ: ಮೊಳಕಾಲ್ಮೂರು ಪಟ್ಟಣದ ಕೋನಸಾಗರ ರಸ್ತೆಯ ರೇಷ್ಮೆ ಇಲಾಖೆ ಪಕ್ಕದಲ್ಲಿ ನಿಲ್ಲಿಸಿದ್ದ ಸುಮಾರು 12 ಲಕ್ಷ ರೂ. ಮೌಲ್ಯದ ಟಿಪ್ಪರ್ ಸೆ.12 ರಂದು ಕಳ್ಳತನವಾಗಿತ್ತು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಮೊಳಕಾಲ್ಮೂರು ಪೊಲೀಸರು (police), ಟಿಪ್ಪರ್ ಪತ್ತೆಗಾಗಿ ತಂಡ ರಚಿಸಿಕೊಂಡು ಕಾರ್ಯಾಚರಣೆ ನಡೆಸಿ ಕೇವಲ ಹತ್ತು ದಿನಗಳಲ್ಲಿ ಪತ್ತೆ ಹಚ್ಚಿದ್ದಾರೆ.
ಇದನ್ನೂ ಓದಿ: ಘೋಷಣೆಯಾಯ್ತು ದಸರಾ ರಜೆ | ಯಾವಗಿಂದ ಆರಂಭ, ಎಷ್ಟು ದಿನ
ಅಂತಾರಾಜ್ಯ ಕಳ್ಳರಾದ ವಿ.ಮಹೇಶ್ ಹಾಗೂ ವಿ.ಪ್ರಭಾಕರ್ ಅವರನ್ನು ಬಂದಿಸಿದ್ದು, ಬಂಧಿತರಿಂದ ಮೊಳಕಾಲ್ಮೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನವಾದ ಟಿಪ್ಪರ್ ಜೊತೆಗೆ, ಬಳ್ಳಾರಿ ಜಿಲ್ಲೆ ತೋರಣಗಲ್ಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ ಟಾಟಾ ಸುಮೋ ಗೋಲ್ಡ್ ಹಾಗೂ ಕೊಪ್ಪಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳುವಾಗಿದ್ದ ಬುಲೇಟ್ ಬೈಕ್ ವಶಪಡಿಸಿಕೊಳ್ಳಲಾಗಿದೆ.
ಬಂಧಿತರು ಸಹೋಧರರಾಗಿದ್ದು, ಇಬ್ಬರೂ ಲಾರಿ ಡ್ರೈವರ್ ವೃತ್ತಿ ಮಾಡಿಕೊಂಡಿದ್ದಾರೆ. ಈ ಹಿಂದೆ ವಿಜಯನಗರ, ಬಳ್ಳಾರಿ, ಹಾವೇರಿ, ದಾವಣಗೆರೆ, ಗದಗ, ಆಂಧ್ರಪ್ರದೇಶಗಳಲ್ಲಿ ಲಾರಿ, ಟಿಪ್ಪರ್ ಕಳ್ಳತನ ಮಾಡಿ ಜೈಲು ಶಿಕ್ಷೆಯನ್ನು ಅನುಭವಿಸಿದ್ದಾರೆ.
ಇದನ್ನೂ ಓದಿ: ಮೈಲಾರಲಿಂಗಸ್ವಾಮಿ ಗುಡಿ ನಿರ್ಮಾಣ | ಹಬ್ಬಿದಾ ಮಲೆ ಮಧ್ಯದೊಳಗೆ
ಜೈಲಿನಿಂದ ಬಿಡುಗಡೆಯಾದ ಐದಾರು ತಿಂಗಳಲ್ಲೇ ಮತ್ತೆ ಹಳೆ ಚಾಳಿ ಮುಂದುವರೆಸಿ, ಮೊಳಕಾಲ್ಮೂರು ವ್ಯಾಪ್ತಿಯಲ್ಲಿ ಟಿಪ್ಪರ್ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಹೆಚ್ಚುವರಿ ರಕ್ಷಣಾಧಿಕಾರಿ ಕುಮಾರಸ್ವಾಮಿ, ಡಿವೈಎಸ್‍ಪಿ ಟಿ.ರಾಜಣ್ಣ ಅವರ ಮಾರ್ಗದರ್ಶನದಲ್ಲಿ ಮೊಳಕಾಲ್ಮೂರು ಸಿಪಿಐ ವಸಂತ ವಿ ಆಸೋದೆ, ಪಿಎಸ್‍ಐ ಜಿ.ಪಾಂಡುರಂಗ, ಈರೇಶ್ ಸಿಬ್ಬಂದಿಗಳಾದ ರಾಘವೇಂದ್ರ, ಮಂಜುನಾಥ, ಹರೀಶ, ವೀರಣ್ಣ, ರಮೇಶ್, ಖಾದರ್ ಭಾಷಾ, ನಂದಪ್ಪ ಎಂ. ಪೂಜಾರ್, ಮಂಜುನಾಥ್, ಸುಧೀರ್, ಪ್ರಭುದೇವ, ಮಾರಣ್ಣ, ಶಶಿಧರ, ಮಹಾಂತೇಶ್ ಅವರ ತಂಡ ಈ ಪತ್ತೆ ಕಾರ್ಯ ಮಾಡಿದೆ.
ಇದನ್ನೂ ಓದಿ: ಏಕಾಏಕಿ ಕುಸಿದ ಕಲ್ಲಿನ ದ್ವಾರ
ಮೊಳಕಾಲ್ಮೂರು ಪೊಲೀಸರ ಈ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ಲಾಘಿಸಿದ್ದು, ತಂಡಕ್ಕೆ ಸೂಕ್ತ ಬಹುಮಾನ ಘೋಷಿಸಿದ್ದಾರೆ.