ಮುಖ್ಯ ಸುದ್ದಿ
ರಾಜ್ಯಕ್ಕೆ ‘ಬರ’ ತಂದ ಕಾಂಗ್ರೆಸ್ | ಲೋಕಸಭೆ ಚುನಾವಣೆ ಬಳಿಕ ರಾಜ್ಯ ಸರ್ಕಾರ ಪತನ
CHITRADURGA NEWS | 23 FEBRUARY 2024
| ಹರೀಶ್ ನಾಯಕನಹಟ್ಟಿ
ಚಿತ್ರದುರ್ಗ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮಳೆ, ಬೆಳೆ ದೂರವಾಗಿ ಭೀಕರ ಬರಗಾಲ ಆವರಿಸಿದೆ. ಈ ಸರ್ಕಾರಕ್ಕೆ ರೈತರ ಪರ ಒಂದಿಷ್ಟು ಕಾಳಜಿಯಿಲ್ಲ ಎಂದು ಮೊಳಕಾಲ್ಮುರು ಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯರ್ಥಿ ಟಿ.ವೀರಭದ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ನಾಯಕನಹಟ್ಟಿ ಪಟ್ಟಣದ ಒಳಮಠಕ್ಕೆ ಶುಕ್ರವಾರ ಆಗಮಿಸಿ ತಿಪ್ಪೇರುದ್ರಸ್ವಾಮಿಯ ದರ್ಶನ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ವಿಚಾರದಲ್ಲಿ ಸಂಪೂರ್ಣ ವಿಫಲವಾಗಿದೆ. ರಾಜ್ಯದ ಮತದಾರರು ಈ ಸರ್ಕಾರವನ್ನು ನೋಡಿ ಬೇಸತ್ತು ಹೋಗಿದ್ದಾರೆ. ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ಗೆ ಒಲವು ತೊರುತ್ತಿದ್ದಾರೆ’ ಎಂದರು.
ಇದನ್ನೂ ಓದಿ: ಜಗದೊಡೆಯ ತಿಪ್ಪೇಶನ ಮಹಾರಥೋತ್ಸವ ವೈಭವಕ್ಕೆ ದಿನಗಣನೆ | 24 ರಂದು ಪೂರ್ವಸಿದ್ಧತಾ ಸಭೆ
ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದೇನೆ. ಆದರೆ ಮುಂದೆ ಗೆಲ್ಲುವ ವಿಶ್ವಾಸ ನನಗಿದೆ. ರಾಜ್ಯ ಸರ್ಕಾರ ಲೋಕಸಭಾ ಚುನಾವಣೆಯ ಬಳಿಕ ಪತನವಾಗಲಿದೆ. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಕಿಡಿಕಾರಿದರು.
ಚಳ್ಳಕೆರೆ ತಾಲ್ಲೂಕು ಅಧ್ಯಕ್ಷ ಡಿ.ಬಿ.ಚೌಳಕೆರೆ ಕರಿಬಸಪ್ಪ, ಹನುಮಂತನಹಳ್ಳಿ ನಾಗರಾಜ್, ಅಬ್ಬೇನಹಳ್ಳಿ ಚನ್ನಬಸಪ್ಪ, ಓಬಯ್ಯನಹಟ್ಟಿ ಕುಮಾರ್, ಚನ್ನಪ್ಪ, ಧನಂಜಯ್ ಇದ್ದರು.