Connect with us

NAC Committee; ಶಿಕ್ಷಣ ಸಂಸ್ಥೆ ಬೆಳವಣಿಗೆಗೆ ನ್ಯಾಕ್ ಕಮಿಟಿಯ ಪಾತ್ರ ದೊಡ್ಡದು | ರಘುಚಂದನ್

ರಾಷ್ಟ್ರೀಯ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿದ ಮುಖ್ಯ ಕಾರ್ಯನಿರ್ವಾಹನಾಧಿಕಾರಿ ಎಂ.ಸಿ. ರಘುಚಂದನ್

ಮುಖ್ಯ ಸುದ್ದಿ

NAC Committee; ಶಿಕ್ಷಣ ಸಂಸ್ಥೆ ಬೆಳವಣಿಗೆಗೆ ನ್ಯಾಕ್ ಕಮಿಟಿಯ ಪಾತ್ರ ದೊಡ್ಡದು | ರಘುಚಂದನ್

CHITRADURGA NEWS | 19 OCTOBER 2024

ಚಿತ್ರದುರ್ಗ: ಶಿಕ್ಷಣ ಸಂಸ್ಥೆಗಳು ಯಾವ ಮಟ್ಟದಲ್ಲಿ ಹಾಳಾಗುತ್ತಿದೆ. ಹೇಗೆ ಬೆಳೆಯುತ್ತಿದೆ ಎನ್ನುವುದರ ಕಡೆ ನಿಗಾ ಇಡಲು ನ್ಯಾಕ್ ಕಮಿಟಿ(NAC Committee)ಯ ಪಾತ್ರ ದೊಡ್ಡದು ಎಂದು ದೇವರಾಜ ಅರಸ್ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸಿ.ರಘುಚಂದನ್ ಹೇಳಿದರು.

ಕ್ಲಿಕ್ ಮಾಡಿ ಓದಿ: APMC; ಚಿತ್ರದುರ್ಗ ಮಾರುಕಟ್ಟೆ ಧಾರಣೆ | ಅಕ್ಟೋಬರ್ 19 | ಇಂದಿನ ಹತ್ತಿ ರೇಟ್

ನ್ಯಾಕ್-ಬೈನರಿ ಅಕ್ರಿಡೇಷನ್ ಫ್ರೇಂ ವರ್ಕ್ ಅಂಡ್ ರಿಫಾರಮ್ಸ್-2024 ಕುರಿತು ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ ರಾಷ್ಟ್ರೀಯ ಸಮ್ಮೇಳನ ಉದ್ಗಾಟಿಸಿ ಮಾತನಾಡಿದರು.

1983-84 ರಲ್ಲಿ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ಆರಂಭಗೊಂಡಿತು. 42 ವರ್ಷಗಳಿಂದ ಶಿಕ್ಷಣ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗುತ್ತಿರುವುದರ ಹಿಂದೆ ಸಂಸ್ಥೆಯ ಸಂಸ್ಥಾಪಕರಾದ ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪನವರ ಪರಿಶ್ರಮ ಅಪಾರ.

ಐದು ಸಾವಿರ ವಿದ್ಯಾರ್ಥಿಗಳು ನಮ್ಮ ಸಂಸ್ಥೆಯಲ್ಲಿದ್ದಾರೆ. ಬಿ.ಎ. ಬಿ.ಕಾಂ, ಬಿಸಿಎ. ಬಿಬಿಎ. ಫಾರ್ಮಸಿ, ಎಂ.ಫಾರ್ಮ, ನರ್ಸಿಂಗ್ ಆಯುರ್ವೇದಿಕ್ ಕಾಲೇಜು ನಮ್ಮ ಸಂಸ್ಥೆಯಡಿಯಲ್ಲಿ ನಡೆಸುತ್ತಿರುವುದು ಸುಲಭವಲ್ಲ ಎಂದರು.

ಕ್ಲಿಕ್ ಮಾಡಿ ಓದಿ: Bsc Student: ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ | ಇಡೀ ದಿನ ಏನೇನಾಯ್ತು | ಪೋಷಕರು ಹೇಳಿದ್ದೇನು

ಕಾನೂನು ಸುಲಭವಾಗಿರಬೇಕು. ಕಠಿಣ, ದುರ್ಬಲವಾಗಿರಬಾರದು. 3600 ಶಿಕ್ಷಕರುಗಳನ್ನು ಸಮಾಜಕ್ಕೆ ಕೊಡುಗೆಯಾಗಿ ಕೊಟ್ಟಿರುವ ಕೀರ್ತಿ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಗಿದೆ.

ಇದಕ್ಕೆ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳ ಪರಿಶ್ರಮ ಕಾರಣವೆಂದು ಸ್ಮರಿಸಿಕೊಂಡ ಎಂ.ಸಿ.ರಘುಚಂದನ್ ಇಲ್ಲಿ ಓದಿದವರಲ್ಲಿ ಕೆಲವರು ಜಿಲ್ಲಾಧಿಕಾರಿ, ತಹಶೀಲ್ದಾರ್, ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳಾಗಿದ್ದಾರೆಂದು ಸಂತಸ ಹಂಚಿಕೊಂಡರು.

ಶಿಕ್ಷಣದ ಜೊತೆ ಮಾನವೀಯತೆ, ಸಂಸ್ಕಾರ, ಸಂಸ್ಕøತಿಯನ್ನು ಮಕ್ಕಳಿಗೆ ಕಲಿಸುವ ಜವಾಬ್ದಾರಿ ಶಿಕ್ಷಕರುಗಳ ಮೇಲಿದೆ ಎಂದು ತಿಳಿಸಿದರು.

ನೋಡಲ್ ಅಧಿಕಾರಿ ಡಾ.ವಿಕ್ರಂ, ದಾವಣಗೆರೆ ವಿಶ್ವ ವಿದ್ಯಾನಿಲಯದ ರಿಜಿಸ್ಟರ್ ಡಾ.ರಮೇಶ್ ಸಿ.ಕೆ. ಸಮ್ಮೇಳನದ ಸಂಯೋಜಕ ಪ್ರೊ.ಆರ್.ಎಸ್.ರಾಜು, ಐ.ಕ್ಯೂ.ಎ.ಸಿ.ಸಂಯೋಜಕರಾದ ಡಾ.ಹೆಚ್.ಎಸ್.ಬದ್ರಿ, ನ್ಯಾಕ್‍ನ್ ಫಾರ್ಮರ್ ಡೆಪ್ಯೂಟಿ ಸೆಕ್ರೆಟರಿ ಡಾ.ಎಸ್.ಶ್ರೀನಿವಾಸ್ ಇವರುಗಳು ಮಾತನಾಡಿದರು.

ಕ್ಲಿಕ್ ಮಾಡಿ ಓದಿ: ತಡರಾತ್ರಿ ಭಾರೀ ಮಳೆ | ತುಂಬಿ ಹರಿದ ಕೆರೆ, ಕಟ್ಟೆ | ತಳುಕು ಶಾಲೆ ಜಲಾವೃತ

ಸಂಸ್ಥೆಯ ಪ್ರಾಂಶುಪಾಲರಾದ ಡಾ.ಬಿ.ಸಿ.ಅನಂತರಾಮು ಅಧ್ಯಕ್ಷತೆ ವಹಿಸಿದ್ದರು.

ಸಮ್ಮೇಳನದ ಸಂಯೋಜಕರುಗಳಾದ ಡಾ.ಜಿ.ಇ.ಭೈರಸಿದ್ದಪ್ಪ, ವಿವಿಧ ಕಾಲೇಜುಗಳು ಪ್ರಾಂಶುಪಾಲರು, ಐ.ಕ್ಯೂ.ಎ.ಸಿ. ಕೋ-ಆರ್ಡಿನೇಟರ್‍ಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version