ಮುಖ್ಯ ಸುದ್ದಿ
ನಾಳೆ ಚಿತ್ರದುರ್ಗದಲ್ಲಿ RSS ಪಥಸಂಚಲನ
CHITRADURGA NEWS | 19 OCTOBER 2024
ಚಿತ್ರದುರ್ಗ: ವಿಜಯದಶಮಿ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಚಿತ್ರದುರ್ಗ ನಗರ ಘಟಕದಿಂದ ಅ.20 ಭಾನುವಾರ ಸಂಜೆ ನಗರದಲ್ಲಿ ಪಥ ಸಂಚಲನ ಕಾರ್ಯಕ್ರಮ ಆಯೋಜಿಸಲಾಗಿದೆ.
ಸಂಜೆ 4.15ಕ್ಕೆ ನಗರದ ಬಿ.ಡಿ.ರಸ್ತೆ ಜೈನಧಾಮದಿಂದ ಪ್ರಾರಂಭವಾಗುವ ಪಥಸಂಚಲನ ಸಿ.ಕೆ.ಪುರ ಮಾರ್ಗವಾಗಿ ಬಂದು ಚನ್ನಕೇಶವ ದೇವಸ್ಥಾನದಿಂದ ಆಕಾಶವಾಣಿ ಮುಂಭಾಗದಲ್ಲಿ ಸಂಚರಿಸಿ,KSRTC ಡಿಪೋ ರಸ್ತೆಯ ಮೂಲಕ ಮತ್ತೆ ಮುಖ್ಯರಸ್ತೆ ತಲುಪಿ ಜೈನಧಾಮದಲ್ಲಿ ಸಮಾರೋಪವಾಗಲಿದೆ.
ಇದನ್ನೂ ಓದಿ: ಕೆಂಗುಂಟೆ ಕೆರೆ ಭರ್ತಿ | ಬಾಗೀನ ಅರ್ಪಣೆ
ಜೈನಧಾಮದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಆರೆಸ್ಸೆಸ್ಸ್ ಕರ್ನಾಟಕ ದಕ್ಷಿಣ ಪ್ರಾಂತದ ಸಹ ಸಂಪರ್ಕ ಪ್ರಮುಖ್ ಯಾದವ ಕೃಷ್ಣ ಸ್ವಯಂಸೇವಕರನ್ನು ಉದ್ದೇಶಿಸಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರಾರಂಭವಾಗಿ ನೂರನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ವಿಜಯದಶಮಿ ನಡಿಗೆ ವಿಜಯದ ಕಡೆಗೆ ಎನ್ನುವ ಘೋಷ ವಾಖ್ಯದೊಂದಿಗೆ ಪಥಸಂಚಲನ ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ: ತಡರಾತ್ರಿ ಭಾರೀ ಮಳೆ | ತುಂಬಿ ಹರಿದ ಕೆರೆ, ಕಟ್ಟೆ | ತಳುಕು ಶಾಲೆ ಜಲಾವೃತ
ಸುಮಾರು 500 ಜನ ಆರೆಸ್ಸೆಸ್ಸ್ ಗಣವೇಶ (ಸಮವಸ್ತ್ರ) ಧರಿಸಿದ ಸ್ವಯಂಸೇವಕರು ಈ ಪಥ ಸಂಚಲನದಲ್ಲಿ ಭಾಗವಹಿಸಲಿದ್ದಾರೆ.
ಪಥಸಂಚಲನ ಆಗಮಿಸುವ ಮಾರ್ಗದಲ್ಲಿ ನೀರು ಹಾಕಿ, ರಂಗವಲ್ಲಿ ಹಾಕಿ, ಭಾರತಮಾತೆಯ ಭಾವಚಿತ್ರ ಹಾಗೂ ಭಗವಾಧ್ವಜವನ್ನು ಪುಷ್ಪಾರ್ಚನೆಯೊಂದಿಗೆ ಸ್ವಾಗತಿಸಲು ಸಂಘದ ಪ್ರಮುಖರು ಸ್ಥಳೀಯರಲ್ಲಿ ಮನವಿ ಮಾಡಿದ್ದಾರೆ.