ಮುಖ್ಯ ಸುದ್ದಿ
ತಾಲೂಕು ಮಟ್ಟದ ಪ್ರತಿಭಾಕಾರಂಜಿ ಸ್ಪರ್ಧೆ | ವಿದ್ಯಾ ವಿಕಾಸ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ | ಜಿಲ್ಲಾ ಮಟ್ಟಕ್ಕೆ ಆಯ್ಕೆ
CHITRADURGA NEWS | 09 JANUARY 2025
ಚಿತ್ರದುರ್ಗ: ತಾಲೂಕು ಮಟ್ಟದಲ್ಲಿ ಆಯೋಜಿಸಿದ್ದ ಪ್ರತಿಭಾಕಾರಂಜಿ ಸ್ಪರ್ಧೆಯಲ್ಲಿ ನಗರದ ವಿದ್ಯಾ ವಿಕಾಸ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿ ಪಡೆಯುವುದರ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ಪಡೆದ ವಿದ್ಯಾರ್ಥಿಗಳ ವಿವರ :
ಬಿ.ಎನ್.ವಿನ್ಮಯಿ 4ನೇ ತರಗತಿ ಭಕ್ತಿಗೀತೆ ಪ್ರಥಮ ಸ್ಥಾನ. 10ನೇ ತರಗತಿ ವಿದ್ಯಾರ್ಥಿಗಳಾದ ಸೈಯೆದಾ ಅಫೀಪಾ ಹಿಂದಿ ಭಾಷಣ ಪ್ರಥಮ ಸ್ಥಾನ. ಜಿ.ಆರ್.ತೃಷಾ ಜಾನಪದಗೀತೆ ಪ್ರಥಮ ಸ್ಥಾನ. ಡಿ.ವಿ. ನವಮಿ ಚರ್ಚಾಸ್ಪರ್ಧೆ ದ್ವಿತೀಯ ಸ್ಥಾನ. ಸನಿಹಾ, ಸಿಂಚನ ಆಶುಭಾಷಣ ಪ್ರಥಮ ಸ್ಥಾನ, ಜಾಹ್ನವಿ ಮತ್ತು ಐಮಾನ್ ರಸಪ್ರಶ್ನೆ ಸ್ಪರ್ಧೆ ಪ್ರಥಮ ಸ್ಥಾನ ಪಡೆದಿದ್ದಾರೆ.
Also Read: ವಿವಿ ಸಾಗರ ಜಲಾಶಯ ಭರ್ತಿ | ಸಾರ್ವಜನಿಕರಿಗೆ ಮುನ್ನೆಚ್ಚರಿಕೆ
ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಶಾಲೆಯಿಂದ ಅಭಿನಂದನೆ ತಿಳಿಸಲಾಗಿದೆ.