ಮುಖ್ಯ ಸುದ್ದಿ
ABVPಯಿಂದ ಅರಳುವ ಪ್ರತಿಭೆ ರಾಜ್ಯಮಟ್ಟದ ಬರಹಗಾರರ ಸಮಾವೇಶ
CHITRADURGA NEWS | 25 FEBRUARY 2025
ಚಿತ್ರದುರ್ಗ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ABVP) ಕರ್ನಾಟಕ ವತಿಯಿಂದ ಕೋಟೆನಾಡು ಚಿತ್ರದುರ್ಗದಲ್ಲಿ ರಾಜ್ಯ ಮಟ್ಟದ ವಿದ್ಯಾರ್ಥಿ ಬರಹಗಾರರ ಶಿಬಿರ-2025 ‘ಅರಳುವ ಪ್ರತಿಭೆ’ ಹಮ್ಮಿಕೊಳ್ಳಲಾಗಿದೆ.
ನಗರದ ಐತಿಹಾಸಿಕ ಮುರುಘಾ ಮಠದಲ್ಲಿ ಮಾರ್ಚ್ 7,8 ಮತ್ತು 9 ರಂದು ಮೂರು ದಿನಗಳ ಕಾಲ ಈ ಶಿಬಿರ ನಡೆಯಲಿದೆ.
ಇದನ್ನೂ ಓದಿ: ತಹಶೀಲ್ದಾರ್ ಡಾ.ನಾಗವೇಣಿ ವರ್ಗಾವಣೆ | ಚಿತ್ರದುರ್ಗಕ್ಕೆ ನೂತನ ತಹಶೀಲ್ದಾರ್
- ಶಿಬಿರದಲ್ಲಿ ಕಥೆ, ಕವನ, ಕಾದಂಬರಿ, ಪ್ರಬಂಧ, ಲೇಖನಗಳ ಕುರಿತು ತರಬೇತಿ ನೀಡಲಾಗುತ್ತದೆ.
- ಸಾಹಿತ್ಯ, ಪತ್ರಿಕೋದ್ಯಮ, ಬ್ಲಾಗಿಂಗ್ ಕುರಿತು ಪ್ರಾಯೋಗಿಕ ವಿವರಣ, ಈ ಶಿಬಿರಕ್ಕೆ 18 ರಿಂದ 30 ವಯೋಮಾನದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಬಹುದಾಗಿದೆ.
ಇದನ್ನೂ ಓದಿ: ನಿರುದ್ಯೋಗಿಗಳಿಗೆ ಶುಭ ಸುದ್ದಿ | ಚಿತ್ರದುರ್ಗದಲ್ಲಿ ಬೃಹತ್ ಉದ್ಯೋಗ ಮೇಳ
- ಶಿಬಿರದಲ್ಲಿ ಅನುಭವಿ, ಖ್ಯಾತ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ ಕಾರ್ಯಾಗಾರ ನಡೆಸಿಕೊಡಲಿದ್ದಾರೆ.
- ಮೂರು ದಿನಗಳ ಕಾಲ ನಡೆಯುವ ಈ ಶಿಬಿರಕ್ಕೆ 100 ಶುಲ್ಕ ನಿಗಧಿ ಮಾಡಲಾಗಿದೆ.
- 2025 ಮಾರ್ಚ್ 7 ರಂದು ಮಧ್ಯಾಹ್ನ 12 ಗಂಟೆಗೆ ಶಿಬಿರಾರ್ಥಿಗಳು ಆಗಮಿಸಬೇಕು. ಅಂದು ಸಂಜೆ 4 ಗಂಟೆಗೆ ಉದ್ಘಾಟನೆಯಾಗಲಿದೆ.
- ಶಿಬಿರಕ್ಕೆ 75 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದ್ದು, ಮೊದಲು ನೊಂದಣಿ ಮಾಡಿಸಿಕೊಂಡವರಿಗೆ ಆಧ್ಯತೆ ನೀಡಲಾಗುತ್ತದೆ.
ಮಾರ್ಚ್ 4 ನೊಂದಣಿಗೆ ಕೊನೆಯ ದಿನವಾಗಿದ್ದು, ನೊಂದಣಿಯನ್ನು ಆನ್‍ಲೈನ್ ಅಥವಾ ದೂರವಾಣಿ ಕರೆ ಮೂಲಕವೂ ಮಾಡಬಹುದಾಗಿದೆ ಎಂದು ಎಬಿವಿಪಿ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಮುಖ್ಯಮಂತ್ರಿಗೆ ಪತ್ರ ಬರೆದ ಸಚಿವ ಡಿ.ಸುಧಾಕರ್ | ಪತ್ರದ ಪೂರ್ಣ ವಿವರ ಇಲ್ಲಿದೆ
ಹೆಚ್ಚಿನ ಮಾಹಿತಿಗೆ 6363044610/7760515161/7337669656/9986572664 ಸಂಪರ್ಕಿಸಬಹುದಾಗಿದೆ.