ಮುಖ್ಯ ಸುದ್ದಿ
ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ
CHITRADURGA NEWS | 11 MARCH 2025
ಚಿತ್ರದುರ್ಗ: ತಾಲ್ಲೂಕು ಭರಮಸಾಗರ ಶಿಶು ಅಭಿವೃದ್ಧಿ ಯೋಜನೆಯ ಹುಣಸೇಕಟ್ಟೆ-ಬಿ ಕೇಂದ್ರದ ಅಂಗನವಾಡಿ ಕಾರ್ಯಕರ್ತೆ ಎಂ.ಬಿ.ಭಾರತಮ್ಮ ಅವರು ಅತ್ಯುತ್ತಮ ಅಂಗನವಾಡಿ ಕಾರ್ಯಕರ್ತೆ ಎಂಬ ಪ್ರಶಸ್ತಿಗೆ ಭಾಜನರಾಗಿದ್ದಾರೆ.
Also Read: ತುರ್ತು ಪಶು ಚಿಕಿತ್ಸೆಗೆ 1962ಗೆ ಕರೆ ಮಾಡಿ | ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿ
ಹೊಸದುರ್ಗ ತಾಲ್ಲೂಕು ಜಾನಕಲ್ ಶ್ರೀ ಪಾರ್ವತಿ ಸ್ತ್ರೀ ಶಕ್ತಿ ಗುಂಪು ಅತ್ಯುತ್ತಮ ಸ್ತ್ರೀಶಕ್ತಿ ಗುಂಪು ಪ್ರಶಸ್ತಿಗೆ ಆಯ್ಕೆಯಾಗಿದೆ.
ಬೆಂಗಳೂರಿನ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಎಂ.ಬಿ.ಭಾರತಮ್ಮ, ಶ್ರೀ ಪಾರ್ವತಿ, ಸ್ತ್ರೀ ಶಕ್ತಿ ಗುಂಪಿನ ಸಂಘದ ಪ್ರತಿನಿಧಿ ಜಿ.ಎಸ್.ನೀಲಮ್ಮ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿದರು.