Connect with us

    ತಕ್ಷಣದಿಂದ ಇಂಗ್ಲಿಷ್ ಮಾಧ್ಯಮ ತರಗತಿ ಆರಂಭಿಸಿ | ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ

    school

    ಮುಖ್ಯ ಸುದ್ದಿ

    ತಕ್ಷಣದಿಂದ ಇಂಗ್ಲಿಷ್ ಮಾಧ್ಯಮ ತರಗತಿ ಆರಂಭಿಸಿ | ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 20 JUNE 2024
    ಚಿತ್ರದುರ್ಗ:‌ ಖಾಸಗಿ ಶಾಲೆಗಳಿಗೆ ಸ್ಪರ್ಧೆ ನೀಡಲು ಸರ್ಕಾರ ಇಂಗ್ಷೀಷ್‌ ಮಾಧ್ಯಮ ಶಾಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಹಿರಿಯೂರು ತಾಲ್ಲೂಕಿನಲ್ಲಿ ಈ ವರ್ಷ 10 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿ ಪ್ರಾರಂಭಕ್ಕೆ ಶಿಕ್ಷಣ ಇಲಾಖೆ ಅನುಮತಿ ನೀಡಿದೆ.

    ಈ ಕುರಿತು ಶಾಲಾ ಮುಖ್ಯಸ್ಥರ ಸಭೆ ನಡೆಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ, ‘ಹಿರಿಯೂರು ತಾಲ್ಲೂಕಿನಲ್ಲಿ ಈಗಾಗಲೇ 12 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಗಳು ನಡೆಯುತ್ತಿವೆ. ಈ ವರ್ಷದಿಂದ ಮತ್ತೆ ಹೆಚ್ಚುವರಿಯಾಗಿ 10 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿ ಪ್ರಾರಂಭಿಸಲು ಇಲಾಖೆ ಅನುಮತಿ ನೀಡಿದೆ. ಇಂಗ್ಲಿಷ್ ಮಾಧ್ಯಮ ಆರಂಭವಾಗಿರುವ ಬಗ್ಗೆ ಹೆಚ್ಚಿನ ಪ್ರಚಾರ ಮಾಡಬೇಕು’ ಎಂದು ಸೂಚಿಸಿದರು.

    ಕ್ಲಿಕ್ ಮಾಡಿ ಓದಿ: ಮುಚ್ಚುವ ಹಂತದ ಸರ್ಕಾರಿ ಶಾಲೆ ಉಳಿಸಿದ್ದೇನೆ | ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ

    ಕಳೆದ ವರ್ಷ ಮರಡಿಹಳ್ಳಿ, ಹೊಸ ಯಳನಾಡು, ಯರಬಳ್ಳಿ, ಹಿರಿಯೂರು ನಗರದ ಬಸ್ ನಿಲ್ದಾಣ ಶಾಲೆ, ನೆಹರು ಮೈದಾನ ಮತ್ತು ಆಜಾದ್ ನಗರ, ಹರಿಯಬ್ಬೆ, ಆದಿವಾಲ, ಮಸ್ಕಲ್, ಮ್ಯಾಕ್ಲೂರಹಳ್ಳಿ, ಧರ್ಮಪುರ, ರಂಗೇನಹಳ್ಳಿಗಳಿಗೆ ಇಂಗ್ಲಿಷ್ ಮಾಧ್ಯಮ ಮಂಜೂರಾಗಿತ್ತು.
    ಈ ಬಾರಿ ಜವನಗೊಂಡನಹಳ್ಳಿ, ಸೂರಪ್ಪನಹಟ್ಟಿ, ಬಡ ಗೊಲ್ಲರಹಟ್ಟಿ, ವೇಣುಕಲ್ಲುಗುಡ್ಡ, ಕೋಡಿಹಳ್ಳಿ, ಭರಂಪುರ, ಹಿರಿಯೂರು ಪಟ್ಟಣದ ಗೋಪಾಲಪುರ ಬಡಾವಣೆಯ ಶಾಲೆ, ಸೊಂಡೆಕೆರೆ ಮತ್ತು ಹೂವಿನ ಹೊಳೆ ಗ್ರಾಮಗಳಲ್ಲಿ ಇಂಗ್ಲಿಷ್ ಮಾಧ್ಯಮಕ್ಕೆ ಅನುಮತಿ ದೊರೆತಿದೆ.

    ಕ್ಲಿಕ್ ಮಾಡಿ ಓದಿ: ಸೋರುತ್ತಿದೆ ನನ್ನಿವಾಳ ಕೆರೆ | ಏರಿ ಆವರಿಸಿದ ಸೀಮೆಜಾಲಿ

    ಈ ಶಾಲೆಗಳಲ್ಲಿ ತಕ್ಷಣದಿಂದ ಒಂದನೇ ತರಗತಿಯಲ್ಲಿ ಮಾತ್ರ ಈ ವರ್ಷಕ್ಕೆ ಇಂಗ್ಲಿಷ್ ಮಾಧ್ಯಮ ತರಗತಿ ಪ್ರಾರಂಭಿಸಬೇಕು. ಈ ಸಂಬಂಧ ಇಲಾಖೆ ಸೂಚನೆಯಂತೆ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

    10 ಶಾಲೆಗಳ ಮುಖ್ಯ ಶಿಕ್ಷಕರ ಸಭೆಯಲ್ಲಿ ಭಾಗವಹಿಸಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top