ಹೊಳಲ್ಕೆರೆ
ಎಚ್.ಡಿ.ಪುರ | ಮಾರ್ಚ್ 13 ರಂದು ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಬ್ರಹ್ಮ ರಥೋತ್ಸವ

CHITRADURGA NEWS | 21 FEBRUARY 2025
ಹೊಳಲ್ಕೆರೆ: ತಾಲೂಕಿನ ಎಚ್.ಡಿ.ಪುರದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಜಾತ್ರಾ ಮಹೋತ್ಸವ ಮಾರ್ಚ್ 6 ರಿಂದ 16 ರವರೆಗೆ ನಡೆಯಲಿದೆ. ಮಾರ್ಚ್ 13 ರಂದು ಬ್ರಹ್ಮ ರಥೋತ್ಸವ ಜರುಗಲಿದೆ.
Also Read: ನಂದಿ ರಥಯಾತ್ರೆ | ಹಸು ಇದ್ದ ಮನೆಗೆ ವಾಸ್ತು ಬೇಕಾಗಿಲ್ಲ | ಕುಮಾರಸ್ವಾಮಿ

ಜಾತ್ರಾ ಪೂರ್ವಭಾವಿ ಸಭೆ ಇಂದು ದೇವಸ್ಥಾನದಲ್ಲಿ ಹೊಳಲ್ಕೆರೆ ತಹಸಿಲ್ದಾರ್ ಬಿ.ಬಿ.ಫಾತಿಮಾ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಬ್ರಹ್ಮ ರಥೋತ್ಸವ ಜರುಗುವ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ, ಎಲ್ ಸಿ.ಡಿ ಟಿವಿಗಳನ್ನು ಆಯೋಜಿಸಬೇಕು. ದೇವಸ್ಥಾನದ ಒಳ ಆವರಣದಲ್ಲಿ ಸ್ವಚ್ಛತೆಗಾಗಿ ಕಸದ ಬುಟ್ಟಿ, ಸುತ್ತಲೂ ಶಾಮಿಯಾನ, ಲೈಟಿಂಗ್ ವ್ಯವಸ್ಥೆ ಮಾಡಬೇಕು ಎಂದು ತಹಸಿಲ್ದಾರ್ ಬಿ.ಬಿ.ಫಾತಿಮಾ ತಿಳಿಸಿದರು.
ದೇವರ ದರ್ಶನಕ್ಕಾಗಿ ಬ್ಯಾರಿಗೇಡ್, ಕೆಇಬಿ ಇಲಾಖೆಯವರು ಉತ್ಸವದ ಬೀದಿಗಳಲ್ಲಿ ಅಡ್ಡ ಇರುವ ಲೈನ್ ಗಳನ್ನು ಸ್ಥಳಾಂತರ ಮಾಡಿ, ಹೆಚ್ಚುವರಿ ಯಾಗಿ ಒಂದು ಟಿಸಿ ಇರಬೇಕು.
Also Read: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ ರೇಟ್ ಎಷ್ಟಿದೆ?
ಜಾತ್ರಾ ಸಂದರ್ಭದಲ್ಲಿ ಭಕ್ತಾದಿಗಳಿಗೆ ತೊಂದರೆಯಾಗದಂತೆ ವಿದ್ಯುತ್ ನೀಡಬೇಕು. ಭಕ್ತರು ಬಿಡಾರದ ಹತ್ತಿರ ವಿದ್ಯುತ್ ಸಮಸ್ಯೆ ಉಂಟಾಗದಂತೆ ಅಲ್ಲಿ ಲೈನ್ ಮ್ಯಾನ್ ಗಳನ್ನು ನಿಯೋಜಿಸಬೇಕು. ಗ್ರಾಮವನ್ನು ಸಂಪೂರ್ಣವಾಗಿ ಸ್ವಚ್ಛವಾಗಿರುವಂತೆ ಗ್ರಾಮ ಪಂಚಾಯಿತಿಯವರು ನೋಡಿಕೊಳ್ಳಬೇಕು.
ನೀರಿನ ವ್ಯವಸ್ಥೆಗಾಗಿ ಟ್ಯಾಂಕರ್ ಗಳ ವ್ಯವಸ್ಥೆ ಮಾಡಿಕೊಳ್ಳಬೇಕು, ಉತ್ಸವದ ಬೀದಿಗಳನ್ನು ಸ್ವಚ್ಛಗೊಳಿಸಬೇಕು. ಎಲ್ಲಾ ಬೀದಿ ದೀಪಗಳನ್ನು ಸರಿಪಡಿಸಿ ಸುಸಜ್ಜಿತವಾದ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿದರು.
ಆರೋಗ್ಯ ಅಧಿಕಾರಿಗಳು ಹೆಚ್ಚುವರಿಯಾಗಿ ಸಿಬ್ಬಂದಿಗಳು ಹಾಗೂ ಔಷಧಿಗಳು, ವೈದ್ಯರನ್ನು ಆಯೋಜಿಸಬೇಕು. ಪೊಲೀಸ್ ಇಲಾಖೆಯವರು ಹೆಚ್ಚಿನ ಜಾಗೃತಿ ವಹಿಸಿ ಬ್ಯಾರಿಗೇಡ್ ಗಳನ್ನು ಹಾಕಬೇಕು ಎಂದು ತಿಳಿಸಿದರು.
Also Read: ಚನ್ನಗಿರಿ, ಯಲ್ಲಾಪುರದಲ್ಲಿ ಅಡಿಕೆ ಬೆಲೆ ಏರಿಕೆ | ರೈತರಲ್ಲಿ ಸಂತಸ
ಭಕ್ತಾದಿಗಳಿಗೆ ಯಾವುದೇ ತೊಂದರೆ ಆಗಬಾರದು. ಅಂಗವಿಕಲರು ಮತ್ತು ವೃದ್ಧರಿಗೆ ನೇರದರ್ಶನಕ್ಕೆ ಅವಕಾಶ ಕಲ್ಪಿಸಬೇಕು. ವ್ಯಾಪಾರಿಗಳು ಎಲ್ಲೆಂದರಲ್ಲಿ ಅಂಗಡಿಗಳನ್ನು ಹಾಕದಂತೆ ಎಚ್ಚರ ವಹಿಸಬೇಕು. ಇದಕ್ಕಾಗಿಯೇ ಗ್ರಾಮದಲ್ಲಿ 20 ರಿಂದ 25 ಜನರ ಜನರ ಸ್ವಯಂ ಸೇವಕರ ಗುಂಪುಗಳನ್ನು ರಚನೆ ಮಾಡಿಕೊಳ್ಳಲು ತಿಳಿಸಿದರು.
ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಆದಷ್ಟು ಬೇಗ ರಸ್ತೆಗಳನ್ನು ಸಿದ್ಧಪಡಿಸಬೇಕು. ಬರುವ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು. ಅಗ್ನಿಶಾಮಕ ದಳದವರು ರಥೋತ್ಸವದ ದಿನ ಪೂರ್ತಿಯಾಗಿ ತಮ್ಮ ವಾಹನವನ್ನು ಗ್ರಾಮದಲ್ಲೇಯೇ ಇರಿಸಬೇಕು ಎಂದು ತಿಳಿಸಿದರು.
Also Read: ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಿಂದ ಮಕ್ಕಳ ಸ್ನೇಹಿ ಗ್ರಂಥಾಲಯ
ಸಭೆಯಲ್ಲಿ ಎಸ್ಎಲ್ಎನ್ ಟ್ರಸ್ಟ್ ಅಧ್ಯಕ್ಷ ಎಚ್.ಡಿ.ರಂಗಯ್ಯ, ಉಪತಾಸಿಲ್ದಾರ್ ಡಿ.ಟಿ.ಅಶೋಕ್, ಕಾರ್ಯದರ್ಶಿ ಜಿ.ಎನ್ ಶೇಷಾದ್ರಿ, ದೇವಸ್ಥಾನದ ಅಧ್ಯಕ್ಷ ಬಿ.ಎನ್. ರವೀಂದ್ರ, ಅರ್ಚಕ ಕೃಷ್ಣಭಟ್ಟರು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಿತ್ರಮ್ಮ, ಪಿಡಿಒ ಅಂಜಿನಪ್ಪ, ವೈದ್ಯಾಧಿಕಾರಿಗಳು ಡಾ.ಜ್ಯೋತಿ, ಚಿತ್ರಹಳ್ಳಿ ಪಿಎಸ್ಐ ಕಾಂತರಾಜು, ಲಕ್ಷ್ಮಿಕಾಂತಯ್ಯ, ವೆಂಕಟೇಶ್, ರಂಗಯ್ಯ, ಅಂಜಿನಮ್ಮ, ವಿವೇಕಾನಂದ, ಉದಯ್ ಕುಮಾರ್, ರಂಗನಾಥ್, ಎಚ್.ಆನಂದ, ಪಾಂಡುರಂಗಯ್ಯ, ಈಶ್ವರಪ್ಪ, ಕೆ.ಟಿ.ಅಜ್ಜಣ್ಣ, ರಮೇಶ್, ಟಿ.ರಮೇಶ್, ಗುಂಡಿನದಾಸಯ್ಯ, ಜಗದೀಶ್, ದೇವಣ್ಣ ಸೇರಿದಂತೆ ಕೆಇಬಿ ಲೈನ್ ಮ್ಯಾನ್ಗಳು, ಅಗ್ನಿಶಾಮಕ ದಳ ಸಿಬ್ಬಂದಿಗಳು, ಗ್ರಾಮಸ್ಥರು ಇದ್ದರು.
