Connect with us

    32 ವರ್ಷಗಳ ನಂತರ ತಾಳಿಕಟ್ಟೆ ಶ್ರೀ ಬೀರಲಿಂಗೇಶ್ವರ ಸ್ವಾಮಿಯ ತೋಪು ಜಾತ್ರಾ ಮಹೋತ್ಸವ

    ಮುಖ್ಯ ಸುದ್ದಿ

    32 ವರ್ಷಗಳ ನಂತರ ತಾಳಿಕಟ್ಟೆ ಶ್ರೀ ಬೀರಲಿಂಗೇಶ್ವರ ಸ್ವಾಮಿಯ ತೋಪು ಜಾತ್ರಾ ಮಹೋತ್ಸವ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 15 MARCH 2025

    ಚಿತ್ರದುರ್ಗ: ಹೊಳಲ್ಕೆರೆ ತಾಲ್ಲೂಕಿನ ತಾಳಿಕಟ್ಟೆ ಗ್ರಾಮದಲ್ಲಿ 32 ವರ್ಷಗಳ ನಂತರ ಶ್ರೀ ಬೀರಲಿಂಗೇಶ್ವರ ಸ್ವಾಮಿಯ ತೋಪು ಜಾತ್ರಾ ಮಹೋತ್ಸವ ಮಾ.16 ರಿಂದ 23ರವರೆಗೆ ನಡೆಯಲಿದೆ ಎಂದು ಜಾತ್ರಾ ಮಹೋತ್ಸವದ ಸ್ವಾಗತ ಸಮಿತಿಯ ಅಧ್ಯಕ್ಷ ಬಿ.ಗಂಗಾಧರ್ ತಿಳಿಸಿದರು.

    Also Read: ನಾಳೆ ವಿದ್ಯುತ್ ವ್ಯತ್ಯಯ | ಬೆಳಿಗ್ಗೆ 10 ರಿಂದ ಸಂಜೆ 5ರ ವರೆಗೆ ಕರೆಂಟ್ ಇರಲ್ಲ..

    ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಜಾತ್ರಾ ಮಹೋತ್ಸವದ ಬಗ್ಗೆ ಮಾಹಿತಿ ನೀಡಿದ ಅವರು, ಗುಡಿಗೌಡರು, ಬುದ್ದಿವಂತರು, ಕೋಲುಕಾರರು ಸಾವಿದವರು, ಏಳೂರು ಗುಡಿಕಟ್ಟಿನ, ಸೇರಿದಂತೆ ಎಲ್ಲಾ ಸಮಾಜದವರು ಸೇರಿ ನಡೆಸಲಿದ್ದಾರೆ. ಜಾತ್ರಾ ಮಹೋತ್ಸವಕ್ಕೆ ತನ್ನದೆ ಆದ ಇತಿಹಾಸ ಇದೆ.

    ಮಾ.16 ರಿಂದ ಪ್ರತಿ ದಿನ ಸಭಾ ಕಾರ್ಯಕ್ರಮಗಳು, ವಿಚಾರ ಸಂಕಿರಣಗಳು ನಡೆಯಲಿದ್ದು, ಇದರಲ್ಲಿ ವಿವಿಧ ಮಠಾಧೀಶರು ಸಂಸದರು, ಸಚಿವರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ವಿವಿಧ ಚುನಾಯಿತ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

    ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ. ಸಮಾಜದಲ್ಲಿ ವಿವಿಧ ರೀತಿಯಲ್ಲಿ ಸೇವೆಯನ್ನು ಮಾಡಿದವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.

    Also Read: ಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿ..!!?

    ಜಾತ್ರೆಯನ್ನು ಯಶಸ್ವಿಯಾಗಿ ಮಾಡಲು ವಿವಿಧ ರೀತಿಯ ಸಮಿತಿಗಳನ್ನು ರಚನೆ ಮಾಡಲಾಗಿದೆ. ಜಾತ್ರಾ ಮಹೋತ್ಸವಕ್ಕಾಗಿ ಶಾಸಕರಾದ ಚಂದ್ರಪ್ಪ ಅವರು ಸುಮಾರು 30 ಕೋಟಿ ವೆಚ್ಚದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದಾರೆ ಎಂದರು.

    ಮಾ.16ರಂದು ಮಧ್ಯಾಹ್ನ 3 ಗಂಟೆಗೆ ಧ್ವಜಾರೋಹಣ ನಡೆಯಲಿದ್ದು, ಕಾರ್ಯಕ್ರಮವನ್ನು ಸಚಿವರಾದ ಡಿ.ಸುಧಾಕರ್ ಉದ್ಘಾಟನೆ ಮಾಡಲಿದ್ದಾರೆ. ಶಾಸಕರಾದ ಚಂದ್ರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಟಗರಿನ ಕಾಳಗ ನಡೆಯಲಿದೆ.

    ಮಾ.18ರಂದು ತೋಪು ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಬೀರಲೀಂಗೇಶ್ವರ ಸ್ವಾಮಿಗೆ ವಿವಿಧ ಒಕ್ಕಲುಗಳಿಂದ ಮೀಸಲು ಸೇವೆ ನಡೆಯಲಿದೆ.

    ಮಾ.20 ರಂದು ಪೂಜಾರಿ ಮತ್ತು ವೀರಗಾರರುಗಳಿಗೆ ಕುಲ ಗುರುಗಳಿಂದ ದೀಕ್ಷೆ ಕೊಡುವ ಕಾರ್ಯಕ್ರಮ ನಡೆಯಲಿದ್ದು, ಮಾ.21 ರಂದು ದೇವರುಗಳಿಗೆ ಉಯ್ಯಾಲೆ ಸೇವೆ, ಗಂಗೆ ತರುವುದು ಮತ್ತು ಓಕಳಿ ಸೇವೆ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ನಡೆಯುವ ಧಾರ್ಮಿಕ ಸಭೆಗೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರು ಆಗಮಿಸಲಿದ್ದಾರೆ.

    Also Read: PSI ಗಾದಿಲಿಂಗಪ್ಪ – ಬಿಜೆಪಿ ಜಿಲ್ಲಾಧ್ಯಕ್ಷ ಹನುಮಂತೇಗೌಡ ಹಲ್ಲೇ ಪ್ರಕರಣ | ಪಿಎಸ್ಐ ವಿರುದ್ಧ FIR ದಾಖಲಿಸಲು ಪಟ್ಟು

    ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಭವನ, ಪಶು ಆಸ್ಪತ್ರೆ, ಸಿ.ಸಿ.ರಸ್ತೆಗಳ ಉದ್ಘಾಟನೆ ನಡೆಯಲಿದೆ.

    ಸಮಾರಂಭಕ್ಕೆ ವಿವಿಧ ಇಲಾಖೆಯ ಸಚಿವರುಗಳು, ಚಲನಚಿತ್ರ ನಟ ದುನಿಯಾ ವಿಜಯ್, ಲೂಸ್ ಮಾದ (ಯೋಗೇಶ್) ಆಗಮಿಸಲಿದ್ದಾರೆ. ಮಾ.22 ರಂದು ಹಲ್ಕುರಿ ಪವಾಡ ಈರೂಟ ಕಾರ್ಯಕ್ರಮ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ನಾಡಿನ ವಿವಿಧ ಮಠಾಧೀಶರು ಭಾಗವಹಿಸಲಿದ್ದಾರೆ ಎಂದರು.

    ಸುದ್ದಿಗೋಷ್ಟಿಯಲ್ಲಿ ರಮೇಶ್, ಮಾಲತೇಶ್ ಅರಸ್ ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top