ಮುಖ್ಯ ಸುದ್ದಿ
ಮಹರ್ಷಿ ವಾಲ್ಮೀಕಿ ಜಯಂತಿ ವಿಶೇಷ | ಚುಕ್ಕೆ ಜಿಂಕೆ ದತ್ತು ಪಡೆದ ಸೋಮು
ಚಿತ್ರದುರ್ಗ ನ್ಯೂಸ್.ಕಾಂ: ಯುವ ಮುಖಂಡ ತಾಲೂಕಿನ ಬೆಳಗಟ್ಟ ಗ್ರಾಮದ ಸೋಮೇಂದ್ರ ಶನಿವಾರ ಮಹರ್ಷಿ ವಾಲ್ಮೀಕಿ ಜಯಂತಿಯಂದು ನಗರದ ಆಡುಮಲ್ಲೇಶ್ವರ ಕಿರು ಮೃಗಾಲಯದಲ್ಲಿ ಚುಕ್ಕೆ ಜಿಂಕೆಯೊಂದನ್ನು ದತ್ತು ತೆಗೆದುಕೊಂಡಿದ್ದಾರೆ.
ಮೃಗಾಲಯದ ನಿಯಮಾನುಸಾರ ಚುಕ್ಕೆ ಜಿಂಕೆಯನ್ನು ಒಂದು ವರ್ಷದ ಅವಧಿಗೆ ದತ್ತು ಪಡೆದುಕೊಂಡಿದ್ದು, ಇದರ ಬಾಬ್ತು ಒಂದು ವರ್ಷಕ್ಕೆ 15 ಸಾವಿರ ರೂ.ಗಳ ಚೆಕ್ ಅನ್ನು ಅರಣ್ಯಾಧಿಕಾರಿಗಳಿಗೆ ನೀಡಿದ್ದಾರೆ.
ಇದನ್ನೂ ಓದಿ: ಆಡುಮಲ್ಲೇಶ್ವರ ಮೃಗಾಲಯದಲ್ಲಿ ಕರಡಿ ಮರಿಗಳ ಕಲರವ
ಆಡುಮಲ್ಲೇಶ್ವರ ಕಿರು ಮೃಗಾಲಯದ ಆರ್‍ಎಫ್‍ಓ ಎನ್.ವಾಸುದೇವ ಚುಕ್ಕೆ ಜಿಂಕೆ ದತ್ತು ಪಡೆದಿರುವ ಸೋಮೇಂದ್ರ ಅವರನ್ನು ಅಭಿನಂದಿಸಿದ್ದಾರೆ.
ಈ ಕುರಿತು ಚಿತ್ರದುರ್ಗ ನ್ಯೂಸ್ ಜೊತೆ ಮಾತನಾಡಿದ ಸೋಮೇಂದ್ರ, ಮಹರ್ಷಿ ವಾಲ್ಮೀಕಿ ಅವರ ಆಶ್ರಮದಲ್ಲಿ ಮೊಲ, ಜಿಂಕೆ ಸೇರಿದಂತೆ ಅನೇಕ ಪ್ರಾಣಿ ಪಕ್ಷಿಗಳಿದ್ದವು. ನಾವು ಮನೆಯಲ್ಲಿ ತಂದು ಸಾಕಲು ಅವಕಾಶವಿಲ್ಲ. ಹೀಗಾಗಿ ಮೃಗಾಲಯದಲ್ಲೇ ದತ್ತಯ ತೆಗೆದುಕೊಂಡಿದ್ದೇನೆ. ವಾಲ್ಮೀಕಿ ಮಹರ್ಷಿಗಳ ಜಯಂತಿಯ ನೆನಪಿಗಾಗಿ ನಾನು ಕೂಡಾ ಒಂದು ಜಿಂಕೆಯನ್ನು ದತ್ತು ತೆಗೆದುಕೊಂಡಿದ್ದೇನೆ. ಈ ಮೂಲಕ ಅವರ ಆದರ್ಶಳನ್ನು ಪಾಲಿಸುವ ಪ್ರಯತ್ನ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಹುಲಿಯನ್ನು ದತ್ತು ತೆಗೆದುಕೊಳ್ಳುವ ಯೋಚನೆ ಮಾಡುತ್ತಿದ್ದೇನೆ.