ಮುಖ್ಯ ಸುದ್ದಿ
ಆಗ್ನೇಯ ಶಿಕ್ಷಕರ ಕ್ಷೇತ್ರ ಚುನಾವಣೆ | ಬಿರುಸಿನಿಂದ ಸಾಗಿದ ಮತದಾನ
ಟೋನಿ ಚಿತ್ರದುರ್ಗ | Updated By: ಕರ್ಣ Updated on: Jun 03, 2024 | 03:15 PM
CHITRADURGA NEWS | 03 JUNE 2024
ಚಿತ್ರದುರ್ಗ: ವಿಧಾನ ಪರಿಷತ್ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನ ಸೋಮವಾರ ಬಿರುಸಿನಿಂದ ಸಾಗಿದೆ. ಜಿಲ್ಲೆಯ 7 ಮತಗಟ್ಟೆಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.
ಬೆಳಿಗ್ಗೆ 8 ಗಂಟೆಯಿಂದ ಮತದಾನ ಆರಂಭವಾಯಿತು. 10 ಗಂಟೆಯವರೆಗೂ ನಿರಾಸವಾಗಿ ಸಾಗಿತು. ಬಳಿಕ ನಿಧಾನಗತಿಯಲ್ಲಿ ವೇಗ ಪಡೆಯಿತು. ಮಧ್ಯಾಹ್ಮ 2 ಗಂಟೆ ವೇಳೆಗೆ 2609 ಮತದಾರರು ಹಕ್ಕು ಚಲಾಯಿಸಿದ್ದು ಶೇ.53.10 ಮತದಾನ ಪ್ರಮಾಣ ದಾಖಲಾಗಿದೆ.
ಜಿಲ್ಲೆಯಲ್ಲಿ ಮೊಳಕಾಲ್ಮೂರು 268, ಚಳ್ಳಕೆರೆ 1019, ಚಿತ್ರದುರ್ಗ 1604, ಹಿರಿಯೂರು 865, ಹೊಸದುರ್ಗ 680, ಹೊಳಲ್ಕೆರೆ 477ಮತದಾರರಿದ್ದಾರೆ. ಇದರಲ್ಲಿ ಮೊಳಕಾಲ್ಮುರು 190, ಚಳ್ಳಕೆರೆ 505, ಚಿತ್ರದುರ್ಗ 941, ಹಿರಿಯೂರು 377, ಹೊಸದುರ್ಗ 310 ಹಾಗೂ ಹೊಳಲ್ಕೆರೆಯಲ್ಲಿ 286 ಮತದಾರರು ಹಕ್ಕು ಚಲಾಯಿಸಿದ್ದಾರೆ. ಅದರಲ್ಲಿ 1786 ಪುರುಷರು, 823 ಮಹಿಳಾ ಮತದಾರರಿದ್ದಾರೆ.
ಕ್ಲಿಕ್ ಮಾಡಿ ಓದಿ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ | ಮೌಲ್ವಿ ಬಂಧನ
ಜಿಲ್ಲೆಯಲ್ಲಿ ಒಟ್ಟು 3,442 ಪುರುಷರು ಮತ್ತು 1,471 ಮಹಿಳಾ ಮತದಾರರಿದ್ದಾರೆ. ಶಿಕ್ಷಕರು ಮತದಾನ ಮಾಡಲು ಅನುಕೂಲವಾಗುವಂತೆ ಮತ ಚಲಾಯಿಸಲಿರುವ ಅರ್ಹ ಮತದಾರರಿಗೆ ನಿಯಮಾನುಸಾರ ಸಾಂದರ್ಭಿಕ ರಜೆಯನ್ನು ಶಾಲೆಗಳು ಮಂಜೂರು ಮಾಡಿವೆ. ಕಣದಲ್ಲಿ ಒಟ್ಟು 78 ಅಭ್ಯರ್ಥಿಗಳಿದ್ದಾರೆ. ಜೂನ್ 6 ರಂದು ಫಲಿತಾಂಶ ಹೊರಬೀಳಲಿದೆ.
ಚಿತ್ರದುರ್ಗ ನಗರದ ಬಾಲಕಿಯರ ಸರ್ಕಾರಿ ಪದವಿ ಕಾಲೇಜಿನ ಮತಗಟ್ಟೆ ಬಳಿ ಬಿಜೆಪಿ. ಕಾಂಗ್ರೆಸ್ ನಾಯಕರು ಜಮಾಯಿಸಿದ್ದಾರೆ. ತಮ್ಮ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡುತ್ತಿರುವುದು ಸಾಮಾನ್ಯವಾಗಿದೆ.