Connect with us

    Sirigere mata: ದಾವಣಗೆರೆ ಸಭೆಯಲ್ಲಿದ್ದ ಸ್ವಾರ್ಥಿಗಳನ್ನು ಮಠದಿಂದ ಬಹಿಷ್ಕರಿಸಿ | ಸಿರಿಗೆರೆ ಮಠದ ಭಕ್ತರ ಒಕ್ಕೊರಲ ಒತ್ತಾಯ

    srigere matta

    ಮುಖ್ಯ ಸುದ್ದಿ

    Sirigere mata: ದಾವಣಗೆರೆ ಸಭೆಯಲ್ಲಿದ್ದ ಸ್ವಾರ್ಥಿಗಳನ್ನು ಮಠದಿಂದ ಬಹಿಷ್ಕರಿಸಿ | ಸಿರಿಗೆರೆ ಮಠದ ಭಕ್ತರ ಒಕ್ಕೊರಲ ಒತ್ತಾಯ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 06 AUGUST 2024
    ಚಿತ್ರದುರ್ಗ: ದಾವಣಗೆರೆಯ ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರು ಹಾಗೂ ಸಮಾಜ ಒಡೆಯಲು ಯತ್ನಿಸುತ್ತಿರುವ ಸ್ವಾರ್ಥಿಗಳನ್ನು ಮಠದಿಂದ ಬಹಿಷ್ಕರಿಸಬೇಕು ಎಂದು ಸಿರಿಗೆರೆ ಮಠದ ಭಕ್ತರ ಒಕ್ಕೊರಲ ಒತ್ತಾಯ ಮಾಡಿದರು.

    ಸಿರಿಗೆರೆ ಮಠದಲ್ಲಿ ನಡೆದ ಭಕ್ತರ ಸಭೆಯಲ್ಲಿ ದಾವಣಗೆರೆಯಲ್ಲಿ ಭಾನುವಾರ ನಡೆದಿದ್ದ ಸಾಧು ಲಿಂಗಾಯತ ಮುಖಂಡರ ಸಭೆ ವಿಚಾರಕ್ಕೆ ಆಕ್ರೋಶ ವ್ಯಕ್ತವಾಯಿತು. ಆ ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರ ವಿರುದ್ಧ ಘೋಷಣೆ ಕೂಗಿದರು. ಸಮಾಜ ಒಡೆಯಲು ಯತ್ನಿಸುತ್ತಿರುವ ಸ್ವಾರ್ಥಿಗಳನ್ನು ಮಠದಿಂದ ಬಹಿಷ್ಕರಿಸಬೇಕು ಎಂದು ಆಗ್ರಹಿಸಿದರು.

    ಕೊನೆ ಉಸಿರು ಇರುವವರೆಗೂ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯೇ ಸಿರಿಗೆರೆ ತರಳಬಾಳು ಬೃಹನ್ಮಠದ ಪೀಠಾಧಿಪತಿಯಾಗಿ ಮುಂದುವರಿಯಬೇಕು. ಶ್ರೀಗಳ ನಿವೃತ್ತಿ ಘೋಷಣೆಗೆ ಒತ್ತಾಯಿಸಿ ಶಾಸಕ ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ದಾವಣಗೆರೆಯಲ್ಲಿ ನಡೆದ ಸಭೆ ಅನಧಿಕೃತ. ನಿವೃತ್ತಿಗೆ ಒತ್ತಾಯಿಸಿದವರು ಕೂಡಲೇ ಶ್ರೀಗಳ ಪದತಲಕ್ಕೆ ಬಂದು ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.‌

    ಇದನ್ನು ಓದಿ: ದುಂದು ವೆಚ್ಚಕ್ಕೆ ಕಡಿವಾಣ ಹಾಕಿ | ಡಾ.ಬಸವಕುಮಾರ ಸ್ವಾಮೀಜಿ

    ಶ್ರೀಗಳಿಗೆ ಆರೋಗ್ಯ ಕೆಟ್ಟಿಲ್ಲ, ದೃಷ್ಟಿ ದೋಷವಿಲ್ಲ, ಅವರು ಆರೋಗ್ಯವಂತರಾಗಿದ್ದಾರೆ. ಅವರನ್ನು ಪೀಠ ತ್ಯಾಗ ಮಾಡುವಂತೆ ಯಾರೂ ಕೇಳಕೂಡದು. ಏನೇ ಅಸಮಾಧಾನಗಳಿದ್ದರೂ ಮಠದ ಆವರಣಕ್ಕೆ ಬಂದು ಕೇಳಲಿ. ಅದನ್ನು ಬಿಟ್ಟು ಖಾಸಗಿ ರೆಸಾರ್ಟ್‌ನಲ್ಲಿ ಕುಳಿತು ಪ್ರಶ್ನಿಸಿದರೆ ನಾವು ಸುಮ್ಮನಿರಬೇಕಾ ಎಂದು ಕಿಡಿಕಾರಿದರು.

    TARABALU 2

    ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

    ಶಾಸಕ ಶಾಮನೂರು ಶಿವಶಂಕರಪ್ಪ ಬಾಪೂಜಿ ವಿದ್ಯಾಸಂಸ್ಥೆ ಹೇಗೆ ಪಡೆದರು ಎಂಬುದು ಗೊತ್ತಿದೆ. ಹಲವು ಬಾರಿ ಶಾಸಕ, ಸಚಿವರಾಗಿದ್ದಾರೆ. ಅವರೇಕೆ ನಿವೃತ್ತಿ ಘೋಷಣೆ ಮಾಡುವುದಿಲ್ಲ? ಶಾಸಕರು, ಸಚಿವರೇ ಶೈಕ್ಷಣಿಕ ಸಂಸ್ಥೆ ಮಾಡಿಕೊಂಡು ಸೀಟುಗಳನ್ನು ಮಾರಾಟಕ್ಕಿಟ್ಟಿದ್ದಾರೆ. ಹೀಗಿರುವಾಗ ಮಠದ ಶಾಲೆಗಳು ಸೊರಗುತ್ತಿವೆ ಎಂದು ಪ್ರಶ್ನಿಸು ವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

    ಇದನ್ನು ಓದಿ: ವಿವಿ ಸಾಗರದತ್ತ ಭದ್ರೆ ಪಯಣ | ಬೆಟ್ಟದಾವರೆ ಮೋಟರ್‌ ಪಂಪ್‌ ಚಾಲನೆ

    ಸ್ವಾಮೀಜಿ ವಿರುದ್ಧ ಮತ್ತೆ ಹಗುರವಾಗಿ ಮಾತನಾಡಿದರೆ ಅವರೆಲ್ಲರ ಮನೆ ಮುಂದೆ ಪ್ರತಿಭಟನೆ ನಡೆಸುತ್ತೇವೆ. ಈ ಸಭೆ ಕೇವಲ ಸಾಂಕೇತಿಕ. ಮುಂದೆ ದೊಡ್ಡ ಮಟ್ಟದಲ್ಲಿ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.

    ಸೂಟ್‌ಕೇಸ್‌ ರಾಜಕಾರಣ ಮಾಡುತ್ತಿರುವ ಬಿ.ಸಿ.ಪಾಟೀಲ್‌ ಪಕ್ಷದಿಂದ ಪಕ್ಷಕ್ಕೆ ಜಿಗಿಯುವ ಜಂಪಿಂಗ್‌ ಸ್ಟಾರ್‌. ಮಠದ ವಿರುದ್ಧ ಮಾತನಾಡಲು ಅವರಿಗೆ ಯಾವ ನೈತಿಕತೆ ಇದೆ. ಮಠದ ಕಟ್ಟಡವೊಂದರಲ್ಲಿ ಖಾನಾವಳಿ ನಡೆಸುತ್ತಿದ್ದ ರಾಜಣ್ಣ ಈಗ ರೆಸಾರ್ಟ್‌ ಮಾಡಿಕೊಂಡು ಅಲ್ಲಿಂದಲೇ ಶ್ರೀಗಳ ವಿರುದ್ಧ ಮುಖಂಡರನ್ನು ಎತ್ತಿಕಟ್ಟುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top