ಮುಖ್ಯ ಸುದ್ದಿ
ಮೊದಲ ದಿನವೇ ರಾಗಿ ಚೆಕ್‌ಗೆ ಸಹಿ | ಶೀಘ್ರ ರೈತರಿಗೆ ಹಸ್ತಾಂತರ
CHITRADURGA NEWS | 17 FEBRUARY 2024
ಚಿತ್ರದುರ್ಗ: ಹೊಸದುರ್ಗ ತಾಲ್ಲೂಕಿನ ರೈತರಿಗೆ ಬರಬೇಕಿದ್ದ ಬೆಂಬಲ ಬೆಲೆಯ ರಾಗಿ ಹಣದ ಚೆಕ್‌ಗಳಿಗೆ ಸಹಿ ಹಾಕಲಾಗಿದೆ. ಶೀಘ್ರ ಹಸ್ತಾಂತರ ಮಾಡಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ, ಶಾಸಕ ಬಿ.ಜಿ.ಗೋವಿಂದಪ್ಪ ತಿಳಿಸಿದರು.
ಇದನ್ನೂ ಓದಿ: ಲೋಕಸಭೆ ಚುನಾವಣೆ ಸ್ಪರ್ಧೆಗೆ ಭೋವಿ ಸಮುದಾಯಕ್ಕೆ ಟಿಕೆಟ್ ನೀಡಿ | ಕಾಂಗ್ರೆಸ್ ನಾಯಕರಿಗೆ ಮನವಿ
ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಚೆಕ್‌ಗಳಿಗೆ ಸಹಿ ಹಾಕಿದ್ದೇನೆ. ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದರು.
ಕಳೆದ ವರ್ಷ ತಾಲ್ಲೂಕಿನಲ್ಲಿ ತೆರೆಯಲಾಗಿದ್ದ ರಾಗಿ ಖರೀದಿ ಕೇಂದ್ರದಲ್ಲಿ 480 ಕ್ಕೂ ಹೆಚ್ಚು ರೈತರಿಗೆ ರಾಗಿ ಹಣ ಬಂದಿರಲಿಲ್ಲ. ಹಣ ನೀಡುವಲ್ಲಿ ಅಧಿಕಾರಿಗಳು ವಿಳಂಭ ಧೋರಣೆ ಮಾಡುತ್ತಿದ್ದರು. ಆದರೆ ನಿಗಮದ ಅಧ್ಯಕ್ಷನಾದ ಮೊದಲ ದಿನವೇ ಬ್ಯಾಂಕ್ ಖಾತೆಯ ದಾಖಲೆ ನೀಡಿದ 194 ರೈತರ ಹೆಸರಿಗೆ ಚೆಕ್ ಬರೆದು ಸಹಿ ಮಾಡಿದ್ದೇನೆ. ಉಳಿದ ರೈತರು ಶೀಘ್ರವಾಗಿ ದಾಖಲೆ ನೀಡಿದರೆ ಅವರಿಗೂ ಚೆಕ್ ಬರೆಯಲಾಗುತ್ತದೆ. ಹೊಸದುರ್ಗದಲ್ಲಿ ಕಾರ್ಯಕ್ರಮ ಆಯೋಜಿಸಿ ಚೆಕ್ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಶೀಘ್ರ ಮೊಳಕಾಲ್ಮುರು ಬಂದ್‌ಗೆ ದಿನಾಂಕ ಘೋಷಣೆ | ಭದ್ರಾ ಮೇಲ್ದಂಡೆ ಯೋಜನೆ ಶೀಘ್ರ ಅನುಷ್ಠಾನಕ್ಕೆ ಆಗ್ರಹ
ಮೊದಲು ರೈತರ ಬಾಕಿ ಪಾವತಿಸಲಾಗುತ್ತದೆ. ನಂತರ ರಾಗಿ ಖರೀದಿ ಕೇಂದ್ರ ತೆರೆಯುವ ಬಗ್ಗೆ ಚಿಂತನೆ ಮಾಡುತ್ತೇನೆ ಎಂದರು.