ಮುಖ್ಯ ಸುದ್ದಿ
Railway: ದಾವಣಗೆರೆ – ಚಿತ್ರದುರ್ಗ – ತುಮಕೂರು ನೇರ ರೈಲು ಮಾರ್ಗ | ಈವರೆಗೆ ಆಗಿರುವ ವೆಚ್ಚ ಎಷ್ಟು?
CHITRADURGA NEWS | 13 DECEMBER 2024
ಚಿತ್ರದುರ್ಗ: ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗ ಕಾಮಗಾರಿಗೆ 2024 ಮಾರ್ಚ್ ವೇಳೆಗೆ 359.32 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.
ಕ್ಲಿಕ್ ಮಾಡಿ ಓದಿ: ಅಡಿಕೆ ಧಾರಣೆ | ಡಿಸೆಂಬರ್ 12 | ಅಡಿಕೆ ಮಾರುಕಟ್ಟೆಗಳ ವರದಿ
ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಲೋಕಸಭೆ ಅಧಿವೇಶನದಲ್ಲಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ದಾವಣಗೆರೆಯಿಂದ ತುಮಕೂರು ವರೆಗಿನ ನೇರ ರೈಲು ಮಾರ್ಗ ಒಟ್ಟು 191 ಕಿ.ಮೀ ಇದ್ದು, 2024-25ನೇ ಸಾಲಿಗೆ 150 ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ಒದಗಿಸಲಾಗಿದೆ ಎಂದಿದ್ದಾರೆ.
ಸುಮಾರು 875 ಹೆಕ್ಟೇರ್ ಭೂ-ಸ್ವಾಧೀನವಾಗಿದ್ದು, ಭೂ-ಸ್ವಾದೀನವಾಗಿರುವ ಕಡೆ ಈಗಾಗಲೇ ಟೆಂಡೆರ್ ಕರೆದು ಕಾಮಗಾರಿ ಪ್ರಾರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
ಯಾವುದೇ ರೈಲ್ವೆ ಯೋಜನೆಗಳು ತ್ವರಿತ ಗತಿಯಲ್ಲಿ ಪೂರ್ಣಗೊಳ್ಳಲು ಶೀಘ್ರವಾಗಿ ಭೂ-ಸ್ವಾಧೀನ ಮಾಡುವುದು, ಶೀಘ್ರವಾಗಿ ಅರಣ್ಯ ತೀರುವಳಿ ಮಾಡಿಕೊಡುವದು, ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ಹಂಚಿಕೆಯನ್ನು ತ್ವರಿತವಾಗಿ ಜಮಾ ಮಾಡುವುದು, ಭೂ-ಸ್ವಾಧೀನಗೊಂಡ ಸ್ಥಳದಲ್ಲಿನ ಯುಟಿಲಿಟೀಸ್‌ಗಳ ಸ್ಥಳಾಂತರ ಮಾಡುವುದು, ಯೋಜನೆ ಅನುಷ್ಟಾನದ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಈ ಎಲ್ಲಾ ಅಂಶಗಳು ಯೋಜನೆಗಳು ಪೂರ್ಣಗೊಳ್ಳುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ವಿವರಣೆ ನೀಡಿದ್ದಾರೆ.
ಕ್ಲಿಕ್ ಮಾಡಿ ಓದಿ: ಡಿ.20 ರಂದು ಚಿತ್ರದುರ್ಗದಲ್ಲಿ ರೇಷ್ಮೆ ಕೃಷಿ ಮೇಳ
ಕರ್ನಾಟಕ ರಾಜ್ಯವು ನೈರುತ್ಯ ರೈಲ್ವೆ ವಲಯದಿಂದ ಆವರಿಸಿಕೊಂಡಿದ್ದು, 2024-25 ನೇ ಸಾಲು ಸೇರಿದಂತೆ ಕಳೆದ ಮೂರು ವರ್ಷಗಳಲ್ಲಿ ನೈರುತ್ಯ ರೈಲ್ವೆ ವಲಯಕ್ಕೆ 19 ಹೊಸ ಮಾರ್ಗ, 37 ಡಬ್ಲಿಂಗ್ ಯೋಜನೆಗಳನ್ನು ಸೇರಿದಂತೆ ಒಟ್ಟು 56 ಹೊಸ ಯೋಜನೆಗಳ 6159 ಕಿ.ಮೀ ಉದ್ದದ ಮಾರ್ಗಗಳನ್ನು ಮಂಜೂರು ಮಾಡಲಾಗಿದೆ ಎಂದು ಕಾರಜೋಳ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.
2024 ಮಾರ್ಚ್ ಅಂತ್ಯದ ವೇಳೆಗೆ 21 ಹೊಸ ಮಾರ್ಗ ಹಾಗೂ 10 ಡಬ್ಲಿಂಗ್ ಸೇರಿದಂತೆ 3840 ಕಿ.ಮೀ ಉದ್ದದ ರೂ.47,016 ಕೋಟಿ ಮೊತ್ತದ ವಿವಿಧ ಯೋಜನೆಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿವೆ. ಇದರಲ್ಲಿ ಈಗಾಗಲೇ 1302 ಕಿ.ಮೀ ಉದ್ದದ ಮಾರ್ಗವನ್ನು ಪೂರ್ಣಗೊಳಿಸಲು 17,383 ಕೋಟಿ ಹಣ ಖರ್ಚು ಮಾಡಲಾಗಿದೆ ಎಂದಿದ್ದಾರೆ.
ಕ್ಲಿಕ್ ಮಾಡಿ ಓದಿ: ದಿನ ಭವಿಷ್ಯ | 13 ಡಿಸೆಂಬರ್ | ಈ ದಿನ ಹೇಗಿದೆ ನಿಮ್ಮ ರಾಶಿ ಫಲ…
2009 ರಿಂದ 2014 ರವರೆಗಿನ ಯು.ಪಿ.ಎ. ಆಡಳಿತಾವಧಿಯಲ್ಲಿ 835 ಕೋಟಿ ಅನುದಾನ ನೈರುತ್ಯ ರೈಲ್ವೆ ವಲಯಕ್ಕೆ ಹಂಚಿಕೆಯಾಗಿದ್ದರೆ, 2024-25 ಒಂದೇ ವರ್ಷದಲ್ಲಿ ಮೋದಿಜಿ ನೇತೃತ್ವದ ಸರ್ಕಾರ ರೂ,7,559 ಕೋಟಿ ಅನುದಾನ ಹಂಚಿಕೆ ಮಾಡುವ ಮೂಲಕ ಹತ್ತು ಪಟ್ಟು ಅನುದಾನವನ್ನು ಹೆಚ್ಚು ಹಂಚಿಕೆ ಮಾಡಿದೆ ಎಂದು ಹೇಳಿದ್ದಾರೆ.