ಮುಖ್ಯ ಸುದ್ದಿ
Kabirananda math: ಕಬೀರಾನಂದ ಮಠದಲ್ಲಿ ಶಿವಲಿಂಗಾನಂದ ಸ್ವಾಮೀಜಿ ಜನ್ಮ ದಿನಾಚರಣೆ | ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಮಾದಾರ ಚನ್ನಯ್ಯ ಸ್ವಾಮೀಜಿ ಭಾಗೀ
CHITRADURGA NEWS | 10 NOVEMBER 2024
ಚಿತ್ರದುರ್ಗ: ಇಂದು ಮಠಗಳಿಗೆ ಉತ್ತಮವಾದ ಸ್ವಾಮೀಜಿಗಳು ಸಿಗುವುದು ಕಷ್ಟವಾಗಿದೆ. ಮಠ ಮತ್ತು ಭಕ್ತರ ಹಣೆಬರಹ ಚೆನ್ನಾಗಿದ್ದರೆ ಮಾತ್ರ ಉತ್ತಮ ಗುರುಗಳು ದೊರೆಯುತ್ತಾರೆ ಎಂದು ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಹೇಳಿದರು.
ಕ್ಲಿಕ್ ಮಾಡಿ ಓದಿ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ
ನಗರದ ಸದ್ಗುರು ಕಬೀರಾನಂದ ಮಠ(Kabirananda math)ದಲ್ಲಿ ಪೀಠಾಧಿಪತಿಗಳಾದ ಶ್ರೀ ಶಿವಲಿಂಗಾನಂದ ಸ್ವಾಮೀಜಿ(Shivalingananda Swamiji) ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಒಂದು ಕಾಲದಲ್ಲಿ ಹಾಳು ಕೊಂಪೆಯಂತಿದ್ದ ಮಠವನ್ನು ಶ್ರೀ ಶಿವಲಿಂಗಾನಂದ ಸ್ವಾಮೀಜಿ ಪರಿಶ್ರಮದಿಂದ ಉತ್ತಮ ವಾತಾವರಣ ಮೂಡಿಸಿ ಇಂದು ನೂರಾರು ಭಕ್ತರು ಬಂದು ಹೋಗುವಂತೆ ಮಾಡಿದ್ದಾರೆ. ನಾನು ಮುರುಘಾ ಮಠಕ್ಕೆ ಒಂದಾಗ ಕಬೀರಾನಂದ ಮಠದಲ್ಲಿ ಒಂದು ದಿನ ವಾಸ್ತವ್ಯ ಮಾಡಿದ್ದೆ. ಆಗ ಏನೂ ವ್ಯವಸ್ಥೆಗಳಿಲ್ಲದ ಮಠವನ್ನು ಇಂದು ಶ್ರೀಗಳು ಸುಂದರವಾಗಿ ಕಟ್ಟಿದ್ದಾರೆ. ಇಲ್ಲಿಗೆ ಸಾಕಷ್ಟು ಭಕ್ತರು ಬಂದು ತಮ್ಮ ದುಃಖ ದುಮ್ಮಾನ ಹೇಳಿಕೊಂಡು ಪರಿಹಾರ ಕಂಡುಕೊಳ್ಳುತ್ತಿದ್ದಾರೆ ಎಂದರು.
ಆದಿಚುಂಚನಗಿರಿಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಅವರನ್ನು ಕಬೀರಾನಂದ ಮಠಕ್ಕೆ ಕಳುಹಿಸುವ ಮೂಲಕ ಇಲ್ಲಿ ಗೋಶಾಲೆ, ವಿದ್ಯಾಸಂಸ್ಥೆ, ವೃದ್ಧಾಶ್ರಮ, ಅನ್ನದಾನದಂತಹ ಕಾರ್ಯಕ್ರಮಗಳು ನಿರಾತಂಕವಾಗಿ ನಡೆಯುವಂತಾಗಿದೆ ಎಂದು ಹೇಳಿದರು.
ಕ್ಲಿಕ್ ಮಾಡಿ ಓದಿ: ವಿವಿ ಸಾಗರಕ್ಕೆ ಹರಿದು ಬಂತು 1 ಸಾವಿರ ಕ್ಯೂಸೆಕ್ ನೀರು
ಸ್ವಾಮೀಜಿಗಳಾದವರು ಆರೋಗ್ಯ ಚೆನ್ನಾಗಿ ಕಾಪಾಡಿಕೊಂಡರೆ ಭಕ್ತರಿಗೆ ಉತ್ತಮ ಮಾರ್ಗದರ್ಶನ ಮಾಡಿ, ಸಮಾಜವನ್ನು ಸರಿದಾರಿಯಲ್ಲಿ ತೆಗೆದುಕೊಂಡು ಹೋಗಲು ಸಾಧ್ಯವಿದೆ. ಕೆಟ್ಟ ಆಲೋಚನೆ, ದುಶ್ಚಟಗಳಿಗೆ ಬಲಿಯಾದರೆ ದೈಹಿಕ ಆರೋಗ್ಯ ಹಾಗೂ ಮಾನಸಿಕ ಸಮತೋಲನ ಎರಡೂ ಹದಗೆಡುತ್ತದೆ. ಕಬೀರಾನಂದ ಶ್ರೀಗಳು ಆರೋಗ್ಯ, ಶರೀರ, ಮನಸ್ಸನ್ನು ಪರಿಶುದ್ಧವಾಗಿಟ್ಟುಕೊಂಡಿದ್ದಾರೆ ಎಂದರು.
ಮಠದಿಂದ ವ್ಯಕ್ತಿ ದೊಡ್ಡವನಾಗಬಾರದು. ವ್ಯಕ್ತಿಯಿಂದ ಮಠಕ್ಕೆ ಹೆಸರು ಬರುವಂತಾಗಬೇಕು. ಭಕ್ತರೇ ಇಲ್ಲದ ಮಠದಲ್ಲಿ ಸಾಕಷ್ಟು ಕೆಲಸ ಮಾಡಿರುವ ಶಿವಲಿಂಗಾನAದ ಸ್ಬಾಮೀಜಿ ಸಾಧಿಸಿ ತೋರಿಸಿದ್ದಾರೆ. ಸಾಕಷ್ಟು ಸಂಪತ್ತು ಸೃಷ್ಟಿಸಿದ್ದಾರೆ ಎಂದು ಬಣ್ಣಿಸಿದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಶ್ರೀ ಶಿವಲಿಂಗಾನಂದ ಸ್ವಾಮೀಜಿ ತಾಯಿ ಹೃದಯ ಹೊಂದಿದವರು. ಜಿಲ್ಲೆಯಲ್ಲಿ ಜಾತಿಗೊಂದು ಮಠವಿದ್ದರೂ, ಕಬೀರಾನಂದ ಮಠಕ್ಕೆ ಯಾವುದೇ ಜಾತಿಯಿಲ್ಲ. ಜಾತಿ, ಧರ್ಮಗಳ ಸೋಂಕಿಲ್ಲದೆ ಎಲ್ಲರನ್ನೂ ತನ್ನವರು ಎಂದು ಪ್ರೀತಿಸುವ ಮಠ ಇದಾಗಿದೆ ಎಂದರು.
ಕಬೀರಾನಂದ ಮಠ ಹಾಗೂ ಶ್ರೀಗಳು ಜಾತ್ಯಾತೀತ ತತ್ವಗಳ ಅಡಿಯಲ್ಲಿ ನಡೆಯುತ್ತಿದ್ದಾರೆ. ಇಲ್ಲಿ ನಡೆಯುವ ಶಿವರಾತ್ರಿ ಮಹೋತ್ಸವ ನಾಡ ಹಬ್ಬದಂತೆ ವಿಜೃಂಭಿಸುತ್ತಿದೆ. ಶ್ರೀಗಳು ಸಂಸ್ಕೃತದಲ್ಲಿ ಅಭ್ಯಾಸ ಮಾಡಿ ಬಂಗಾರದ ಪದಕ ಪಡೆದಿದ್ದಾರೆ ಎಂದು ಹೇಳಿದರು.
ಕ್ಲಿಕ್ ಮಾಡಿ ಓದಿ: ದುಬೈ ಕನ್ನಡ ರಾಜ್ಯೋತ್ಸವಕ್ಕೆ ಎಸ್.ಲಿಂಗಮೂರ್ತಿಗೆ ಆಹ್ವಾನ
ಕಾರ್ಯಕ್ರಮದಲ್ಲಿ ಶ್ರೀ ಶಿವಲಿಂಗಾನಂದ ಸ್ವಾಮೀಜಿ, ಶ್ರೀ ವಚನಾನಂದ ಸ್ವಾಮೀಜಿ, ಕೈಲಾಸಪತಿ ಶ್ರೀಗಳು, ಜ್ಯೋರ್ತಿಲಿಂಗ ಶ್ರೀಗಳು ಸಾನಿಧ್ಯ ವಹಿಸಿದ್ದರು.
ನಗರಸಭೆ ಸದಸ್ಯರಾದ ಭಾಸ್ಕರ್, ಗುತ್ತಿಗೆದಾರ ಶಿವಕುಮಾರ್, ವೀರಶೈವ ಕ್ರೆಡಿಟ್ ಕೋ-ಆಪರೇಟಿವ್ ಸೋಸೈಟಿಯ ನಿರ್ದೆಶಕ ಸಿದ್ದವ್ವನಹಳ್ಳಿ ಪರಮೇಶ್, ಜಿ.ಪಂ. ನಿವೃತ್ತ ವ್ಯವಸ್ಥಾಪಕ ನಾಗರಾಜ್ ಸಂಗಂ, ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜನಪ್ಪ, ಪಿಳ್ಳೇಕೇರನಹಳ್ಳಿ ದೇವೇಂದ್ರಪ್ಪ, ಗಣಪತಿ ಶಾಸ್ತ್ರೀ, ನಿರಂಜನ ಮೂರ್ತಿ, ತಿಪ್ಪೇಸಾಮಿ ಮತ್ತಿತರರಿದ್ದರು.