ಮುಖ್ಯ ಸುದ್ದಿ
ಕ್ಷೇಮಾಭಿವೃದ್ಧಿ ಸಂಘದಿಂದ ಸಸಿ ನೆಡುವ ಅಭಿಯಾನ | ಉಮೇಶ ಕಾರಜೋಳ ಚಾಲನೆ
CHITRADURGA NEWS | 03 JULY 2024
ಚಿತ್ರದುರ್ಗ: ನಗರದ ವಾರ್ಡ್ ನಂ.31 ರ ವ್ಯಾಪ್ತಿಯಲ್ಲಿ ಬರುವ ಬ್ಯಾಂಕ್ ಕಾಲೋನಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸಸಿ ನೆಡುವ ಅಭಿಯಾನಕ್ಕೆ ಬಿಜೆಪಿ ರಾಜ್ಯ ಎಸ್.ಸಿ.ಮೋರ್ಚಾ ಕಾರ್ಯದರ್ಶಿ ಉಮೇಶ ಕಾರಜೋಳ ಚಾಲನೆ ನೀಡಿದರು.
ಇದನ್ನೂ ಓದಿ: ವಿದ್ಯಾರ್ಥಿ ನಿಲಯ ಪ್ರವೇಶಾತಿ ವಿಳಂಬ | ಎಬಿವಿಪಿ ಜಿಲ್ಲಾ ಘಟಕ ಪ್ರತಿಭಟನೆ
ಪ್ರಧಾನಿ ನರೇಂದ್ರ ಮೋದಿಯವರು ಆಕಾಶವಾಣಿಯಲ್ಲಿ ಪ್ರಸಾರವಾಗುವ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಪರಿಸರ ಕಾಳಜಿ ಕುರಿತು ಹೇಳಿದ ಅಮ್ಮನ ಹೆಸರಿನಲ್ಲಿ ಗಿಡ ನೆಡುವ ಅಭಿಯಾನಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಇಂದು ಸಸಿ ನೆಡುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಈ ವೇಳೆ ಬಿಜೆಪಿ ರಾಜ್ಯ ಎಸ್.ಸಿ. ಮೋರ್ಚಾ ಕಾರ್ಯದರ್ಶಿ ಉಮೇಶ ಕಾರಜೋಳ ಮಾತನಾಡಿ, ನಿಸರ್ಗ ಸಹ ತಾಯಿ ಸ್ವರೂಪಿ. ಹೀಗಾಗಿ ಪರಿಸರ ರಕ್ಷಣೆ ಆದ್ಯ ಕರ್ತವ್ಯ ಹಾಗೂ ನಿತ್ಯದ ಕಾಯಕವಾಗಬೇಕು ಎಂದರು.
ಹೆತ್ತ ತಾಯಿ ಋಣ ತೀರಿಸಲು ಈ ಜನ್ಮದಲ್ಲಿ ಸಾಧ್ಯವಿಲ್ಲ, ಹೆತ್ತ ತಾಯಿಯ ಹೆಸರಿನಲ್ಲಿ ಗಿಡ ನೆಡುವ ಮೂಲಕ ನಮಗೆ ಉಸಿರು ನೀಡಿರುವ ಪರಿಸರ ರಕ್ಷಿಸುವ ಪವಿತ್ರ ಕಾಯಕ ಕೈಗೊಳ್ಳುವಂತೆ ಪ್ರಧಾನಿ ಮೋದಿಜಿ ಕರೆ ನೀಡಿದ್ದಾರೆ.
ಇದನ್ನೂ ಓದಿ: ಗಂಗಾ ಕಲ್ಯಾಣ ಯೋಜನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿ | ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ
ಕೇವಲ ಸಸಿ ನೆಟ್ಟರೆ ಸಾಲದು, ಅವುಗಳನ್ನು ಪೋಷಿಸುವುದು ಅಷ್ಟೇ ಮುಖ್ಯ, ಮಾನವನ ಪರಿಸರ ವಿರೋಧಿ ಚಟುವಟಿಕೆಗಳಿಂದ ಪರಿಸರ ಹಾನಿಯಾಗುತ್ತಿದೆ, ಸಸಿ ನೆಡುವುದು ನಮ್ಮ ದೈನಂದಿನ ಜೀವನದ ಭಾಗವಾಗಬೇಕು, ಗಿಡಗಳಿಗೆ ನೀರುಣಿಸುವುದು, ಎಲೆಗಳಿಗೆ ರೋಗ ತಾಕಿದೆಯೇ ಎಂದು ಪರೀಕ್ಷಿಸುವುದು, ಇತರರಿಗೂ ಸಸಿ ನೆಡಿ ಎಂದು ಹೇಳುವುದು ಸಹ ಪರಿಸರ ರಕ್ಷಣೆ ಭಾಗವೇ ಎಂದರು.
ಈ ಸಂದರ್ಭದಲ್ಲಿ ಡಾ.ರವಿಪ್ರಕಾಶ್ ರೆಡ್ಡಿ, ರಮೇಶ್, ಪಾಂಡುರಂಗ ರೆಡ್ಡಿ, ಬಿ.ಎಂ.ಪಾಲಯ್ಯ, ತಿಮ್ಮೇಶ. ಆದರ್ಶ, ತಿರುಮಲಕ್ಷಿ, ಅನಿತಾ, ಸುಧಾ, ಸುಮಿತ್ರಮ್ಮ ಸೇರಿದಂತೆ ಕಾಲೋನಿಯ ನಿವಾಸಿಗಳು ಇದ್ದರು.