ನಿಧನವಾರ್ತೆ
ಖ್ಯಾತ ವಾಣಿಜ್ಯೋದ್ಯಮಿ ಆರ್.ಎಸ್.ರುದ್ರಪ್ಪ ನಿಧನ
CHITRADURGA NEWS | 05 MARCH 2025
ಚಿತ್ರದುರ್ಗ: ಖ್ಯಾತ ಉದ್ಯಮಿ, ಹೊಳಲ್ಕೆರೆ ರಸ್ತೆಯ ಶಾರದಮ್ಮ ರುದ್ರಪ್ಪ ಕಲ್ಯಾಣ ಮಂಟಪದ ಮಾಲಿಕರು, ಅಡಿಕೆ ವ್ಯಾಪಾರಿಗಳೂ ಆಗಿದ್ದ, ಸಿದ್ದಾಪುರದ ಆರ್.ಎಸ್.ರುದ್ರಪ್ಪ(88) ಇಂದು(ಬುಧವಾರ) ಬೆಳಗ್ಗೆ ನಿಧನರಾಗಿದ್ದಾರೆ.
ಕೊಡುಗೈ ದಾನಿಗಳೂ ಆಗಿದ್ದ ಎಸ್.ಆರ್.ರುದ್ರಪ್ಪನವರು ಪತ್ನಿ ಹಾಗೂ ಡಾ.ವಾಗೀಶ್ ಸೇರಿದಂತೆ ನಾಲ್ವರು ಪುತ್ರರು, ಅಪಾರ ಬಂಧು, ಬಳಗ, ಸ್ನೇಹಿತರನ್ನು ಅಗಲಿದ್ದಾರೆ.
ಇದನ್ನೂ ಓದಿ: ಲೇಔಟ್ನಲ್ಲಿ ಬೆಳ್ಳಂ ಬೆಳಗ್ಗೆ ಕರಡಿಯ ವಾಕಿಂಗ್
ಅನಾರೋಗ್ಯ ನಿಮಿತ್ತ ಬಸವೇಶ್ವರ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಿದ್ದಾಗ ಬೆಳಗ್ಗೆ 8 ಗಂಟೆ ಹೊತ್ತಿಗೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಇಂದು ಸಂಜೆ 4 ಗಂಟೆಗೆ ಮೃತರ ಸ್ವಗ್ರಾಮ ಸಿದ್ದಾಪುರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.