ಮುಖ್ಯ ಸುದ್ದಿ
Rain damage; 39 ಮನೆಗಳಿಗೆ ನುಗ್ಗಿದ ಮಳೆನೀರು | 10ಕ್ಕೂ ಹೆಚ್ಚು ಮನೆ ಗೋಡೆಗಳು ಕುಸಿತ
CHITRADURGA NEWS | 18 AUGUST 2024
ಚಿತ್ರದುರ್ಗ: ಕಳೆದ ಮೂರು ನಾಲ್ಕು ದಿನಗಳಿಂದ ಸುರಿತ್ತಿರುವ ಮಳೆಗೆ ಚಿತ್ರದುರ್ಗ ತಾಲ್ಲೂಕಿನ ಓಬಣ್ಣನ ಹಳ್ಳಿ ಗ್ರಾಮದಲ್ಲಿ 39 ಮನೆಗಳಿಗೆ ಮಳೆ ನೀರು (Rain damage)ನುಗ್ಗಿದ್ದು, 10ಕ್ಕೂ ಹೆಚ್ಚು ಮನೆಯ ಗೋಡೆಗಳು ಕುಸಿತ ಗೊಂಡಿದ್ದಾವೆ.
ಕ್ಲಿಕ್ ಮಾಡಿ ಓದಿ: took charge; ಅಧಿಕಾರ ವಹಿಸಿಕೊಂಡ ನೂತನ SP ರಂಜಿತ್ ಕುಮಾರ್ ಬಂಡಾರು
ಮನೆಗಳಲ್ಲಿದ್ದ ದವಸ, ಧಾನ್ಯ, ಪಾತ್ರೆ, ಪಗಡಗಳು ನೀರು ಪಾಲುಯಾಗಿದ್ದು, ದಾಖಲೆ ಪತ್ರಗಳು ಮಳೆ ನೀರಿಗೆ ಕೊಚ್ಚಿಕೊಂಡು ಹೋಗಿದಾವೆ, ಮನೆಗಳ ತುಂಬ ಕೆಸರು ತುಂಬಿ ಜನ ಜೀವನ ಅಸ್ಥವ್ಯಸ್ಥವಾಗಿದೆ.
ನಿತ್ಯ ಅಡಿಗೆ ಮಾಡಿಕೊಳ್ಳಲು ಜಾವಿಲ್ಲದೆ ಪರದಾಡುತ್ತಿದ್ದಾರೆ ಗ್ರಾಮದ ಜನರು. ಗ್ರಾಪಂ ಅಧಿಕಾರಿಗಳು ಗ್ರಾಮಕ್ಕೆ ಕಾಟಾಚಾರಕ್ಕೆ ಭೇಟಿ ನೀಡಿ, ಕಂಡೂ ಕಾಣದಂತೆ ನಿರ್ಲಕ್ಷ ವಹಿಸಿದ್ದಾರೆ ಎಂದು ಗ್ರಾಮಸ್ಥರ ಆಕ್ರೋಶ.
ಕ್ಲಿಕ್ ಮಾಡಿ ಓದಿ: VV Sagara Inflow; ವಿವಿ ಸಾಗರಕ್ಕೆ ಭರ್ಜರಿ ನೀರು | ಇಂದಿನ ಒಳಹರಿವು ಎಷ್ಟು ಗೊತ್ತಾ…
ಗ್ರಾಮಕ್ಕೆ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರ ಅಣ್ಣ ಕೆ.ಸಿ.ನಾಗರಾಜ್ ಭೇಟಿ ನೀಡಿ ಪರಿಹಾರ ನೀಡುವುದಾಗಿ ಆಶ್ವಾಸನೆ ನೀಡಿದ್ದಾರೆ.
ಮೂರು ನಾಲ್ಕು ದಿನಗಳಿಂದ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗುತಿದ್ದು, ಗ್ರಾಮಕ್ಕೆ ಜಿಲ್ಲಾಡಳಿತ ಭೇಟಿ ನೀಡದೆ ನಿರ್ಲಕ್ಷ ವಹಿಸುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.