ಮುಖ್ಯ ಸುದ್ದಿ
Net Profit; ಟೌನ್ ಕೋ-ಆಪರೇಟಿವ್ ಸೊಸೈಟಿ | 14 ಲಕ್ಷ 38 ಸಾವಿರದ 975 ರೂ. ನಿವ್ವಳ ಲಾಭ | ಎಂ.ನಿಶಾನಿ ಜಯಣ್ಣ
CHITRADURGA NEWS | 19 AUGUST 2024
ಚಿತ್ರದುರ್ಗ: ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ(Town Co-operative Society)ಯ 2023-24 ನೇ ಸಾಲಿನಲ್ಲಿ 14 ಲಕ್ಷ 38 ಸಾವಿರದ 975 ರೂ. ನಿವ್ವಳ ಲಾಭ(Net Profit)ದಲ್ಲಿದೆ ಎಂದು ಸೊಸೈಟಿ ಅಧ್ಯಕ್ಷ ಎಂ.ನಿಶಾನಿ ಜಯಣ್ಣ ಹೇಳಿದರು.
ಕ್ಲಿಕ್ ಮಾಡಿ ಓದಿ: Rain damage; 39 ಮನೆಗಳಿಗೆ ನುಗ್ಗಿದ ಮಳೆನೀರು | 10ಕ್ಕೂ ಹೆಚ್ಚು ಮನೆ ಗೋಡೆಗಳು ಕುಸಿತ
ನಗರದ ಕಾಟಮ್ಮ ಪಟೇಲ್ ವೀರನಾಗಪ್ಪ ಕಲ್ಯಾಣ ಮಂಟಪದಲ್ಲಿ ನಡೆದ ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಯ 2023-24 ನೇ ಸಾಲಿನ 107 ನೇ ವರ್ಷದ ಸರ್ವ ಸದಸ್ಯರ ಸಾಮಾನ್ಯ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.
107 ವರ್ಷಗಳ ಇತಿಹಾಸವಿರುವ ನಮ್ಮ ಸೊಸೈಟಿಯಲ್ಲಿ ಕಂಪ್ಯೂಟರ್, ಲಾಕರ್, ಇ-ಸ್ಟಾಂಪಿಂಗ್ ಸೌಲಭ್ಯವಿದೆ. ವಾಣಿಜ್ಯ ಮಳಿಗೆಗಳಿಂದ ಸೊಸೈಟಿಗೆ ತಿಂಗಳಿಗೆ
25 ರಿಂದ 30 ಲಕ್ಷ ರೂ.ಗಳ ವರಮಾನ ಬರುತ್ತಿದೆ. ಮುಂದಿನ ದಿನಗಳಲ್ಲಿ ಸಹಕಾರ ಭವನ ನಿರ್ಮಾಣ ಮಾಡಲಾಗುವುದು. ಸದಸ್ಯರುಗಳಿಂದ deposit ಸಂಗ್ರಹಿಸಲು ಮನೆ ಮನೆಗೆ ಬರುತ್ತೇವೆ. ನಿಮ್ಮೆಲ್ಲರ ಸಹಕಾರ ಮುಖ್ಯ ಎಂದು ಹೇಳಿದರು.
ಸೊಸೈಟಿ ಸದೃಢವಾಗಿ ಬೆಳೆದಾಗ ATM ತೆರೆಯಲಾಗುವುದು, ಈಗ ಹದಿನಾರು ಪರ್ಸೆಂಟ್ ಡೆವಿಡೆಂಟ್ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ 25 ಪರ್ಸೆಂಟ್ ನೀಡಲು ಪ್ರಯತ್ನಿಸುತ್ತೇನೆ. ಬೇರೆ ಯಾವ ಸೊಸೈಟಿಗಳಲ್ಲೂ ಈ ಸೌಲಭ್ಯವಿಲ್ಲ ಎಂದು ತಿಳಿಸಿದರು.
ಕ್ಲಿಕ್ ಮಾಡಿ ಓದಿ: took charge; ಅಧಿಕಾರ ವಹಿಸಿಕೊಂಡ ನೂತನ SP ರಂಜಿತ್ ಕುಮಾರ್ ಬಂಡಾರು
ದಿನಾಂಕ 31-3-2024 ರ ಅಂತ್ಯಕ್ಕೆ 49 ಲಕ್ಷದ 48 ಸಾವಿರ ರೂ.ಗಳ ಪಾವತಿಯಾದ ಷೇರು ಬಂಡವಾಳವಿದ್ದು, 2607 ಸದಸ್ಯರುಗಳಿದ್ದಾರೆ.
ಆಪದ್ಧನ ನಿಧಿ 17 ಲಕ್ಷ 67 ಸಾವಿರದ 706 ರೂ. ಹಾಗೂ ಇತರೆ ನಿಧಿಗಳ ಬಾಬ್ತು 59 ಲಕ್ಷ 39 ಸಾವಿರದ 549 ರೂ.ಗಳಿದೆ. ಐದು ಕೋಟಿ ಮೂರು ಲಕ್ಷದ 29 ಸಾವಿರದ 167 ರೂ.ಗಳ ಠೇವಣಿಯಿದೆ. ಪ್ರತಿಯೊಬ್ಬ ಜಾಮೀನುದಾರರು ಸಾಲಗಾರನಷ್ಟೆ ಸೊಸೈಟಿ ಹಣಕ್ಕೆ ಜವಾಬ್ದಾರನಾಗಿರುತ್ತಾನೆ.
ಜಾಮೀನು ಆಗುವುದಕ್ಕೆ ಮುಂಚಿತವಾಗಿ ಸಾಲಗಾರನ ಆರ್ಥಿಕ ಸ್ಥಿತಿ, ವ್ಯವಹಾರ, ಸಾಲದ ಉದ್ದೇಶ, ಮತ್ತು ಸಾಲ ಮರುಪಾವತಿಗೆ ಸಂಬಂಧಿಸಿದಂತೆ ಕಾಲ ಕಾಲಕ್ಕೆ ಸಾಲದ ಕಂತುಗಳನ್ನು ಮರು ಪಾವತಿಸುವ ಸಾಮಥ್ರ್ಯವಿದೆಯೋ ಇಲ್ಲವೋ ಎನ್ನುವುದನ್ನು ಜಾಮೀನುದಾರರು ತಿಳಿದುಕೊಂಡಿರುಬೇಕೆಂದರು.
ದಿನಾಂಕ 31-3-2023 ರ ಅಂತ್ಯಕ್ಕೆ ಒಂದು ಕೋಟಿ 86 ಲಕ್ಷ 60 ಸಾವಿರದ 373 ರೂ.ಗಳ ಸಾಲ ಬಾಕಿಯಿದ್ದು, 2024 ರ ಅಂತ್ಯಕ್ಕೆ 2 ಕೋಟಿ 59 ಲಕ್ಷದ 94 ಸಾವಿರದ 319 ರೂ.ಗಳ ಸಾಲ ಬರಬೇಕಿದೆ. ಸದರಿ ಸಾಲಿಗೆ 73 ಲಕ್ಷ 33 ಸಾವಿರದ 946 ರೂ.ಗಳ ಸಾಲ ವೃದ್ದಿಯಾಗಿದೆ. ಈ ಪೈಕಿ 26 ಲಕ್ಷದ 56 ಸಾವಿರದ 669 ರೂ.ಗಳ ಸಾಲ ಶೇ. 10.22 ರಷ್ಟು ಸುಸ್ತಿಯಲ್ಲಿರುತ್ತದೆ ಎಂದು ಸಭೆಯಲ್ಲಿ ಸದಸ್ಯರುಗಳ ಗಮನಕ್ಕೆ ತಂದರು.
ಸೊಸೈಟಿಯ ಆರ್ಥಿಕ ಸಲಹೆಗಾರ ಮಹಮದ್ ನಯೀಮ್ ವರದಿ ಮಂಡಿಸಿದರು.
ಕ್ಲಿಕ್ ಮಾಡಿ ಓದಿ: VV Sagara Inflow; ವಿವಿ ಸಾಗರಕ್ಕೆ ಭರ್ಜರಿ ನೀರು | ಇಂದಿನ ಒಳಹರಿವು ಎಷ್ಟು ಗೊತ್ತಾ…
ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಗಳಿಸಿರುವ ಸೊಸೈಟಿ ಸದಸ್ಯರ ಮಕ್ಕಳನ್ನು ಅಭಿನಂದಿಸಲಾಯಿತು.
ಸಭೆಯಲ್ಲಿ ಟೌನ್ ಕೋ-ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಸಿ.ಹೆಚ್.ಸೂರ್ಯಪ್ರಕಾಶ್, ನಿರ್ದೇಶಕರುಗಳಾದ ಡಾ.ರಹಮತ್‍ವುಲ್ಲಾ, ಬಿ.ವಿ.ಶ್ರೀನಿವಾಸ್‍ಮೂರ್ತಿ, ಬಿ.ಎಂ.ನಾಗರಾಜ ಬೇದ್ರೆ, ಕೆ.ಚಿಕ್ಕಣ್ಣ, ಸೈಯದ್ ಮುಜೀಬ್, ಎಸ್.ವಿ.ಪ್ರಸನ್ನ, ಕೆ.ಪ್ರಕಾಶ್, ಚಂದ್ರಪ್ಪ, ಎ.ಚಂಪಕ, ಎನ್.ಎಂ.ಪುಷ್ಪವಲ್ಲಿ, ಪ್ರಭಾರ ವ್ಯವಸ್ಥಾಪಕ ಪಿ.ಮಂಜುನಾಥಗೌಡ ಹಾಗೂ ಸೊಸೈಟಿ ಸಿಬ್ಬಂದಿಗಳು ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿದ್ದರು.