ಮುಖ್ಯ ಸುದ್ದಿ
Rain..Rain: ತುಂಬಿ ತುಳುಕಿದ ತಳಕು | ಕುಸಿದವು ಮನೆ, ಹೆಕ್ಟೇರ್‌ಗಟ್ಟಲೇ ಬೆಳೆ ನಾಶ
Published on
CHITRADURGA NEWS | 21 AUGUST 2024
ಚಿತ್ರದುರ್ಗ: ಜಿಲ್ಲಾದ್ಯಂತ ಮಂಗಳವಾರ ತಡರಾತ್ರಿ ಮಳೆರಾಯ ತನ್ನ ತೀವ್ರತೆ ತೋರಿದ್ದು, ಒಂದೇ ರಾತ್ರಿಗೆ 49 ಮನೆಗಳು ಕುಸಿದಿವೆ. ಚಳ್ಳಕೆರೆ, ಮೊಳಕಾಲ್ಮರು ಭಾಗದಲ್ಲಿ ಹೆಚ್ಚು ಮಳೆಯಾಗಿದೆ.
ಚಿತ್ರದುರ್ಗದಲ್ಲಿ 26, ಚಳ್ಳಕೆರೆಯಲ್ಲಿ 15, ಹೊಸದುರ್ಗ, ಮೊಳಕಾಲ್ಮುರಿನಲ್ಲಿ ತಲಾ 2 ಹಾಗೂ ಹಿರಿಯೂರಿನಲ್ಲಿ 4 ಮನೆ ಹಾನಿಗೆ ಒಳಗಾಗಿವೆ. 8 ಹೆಕ್ಟೇರ್ ತೋಟಗಾರಿಕೆ ಹಾಗೂ 17 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ.
ಕ್ಲಿಕ್ ಮಾಡಿ ಓದಿ: ರಾತ್ರೋರಾತ್ರಿ ಕಣ್ಮುಚ್ಚಿ ಸುರಿದ ಮಳೆ | ಕೋಡಿ ಬಿದ್ದ ಕೆರೆಗಳು ಗ್ರಾಮಗಳು ಜಲಾವೃತ
ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯಲ್ಲಿ ಬರೋಬ್ಬರಿ 9 ಸೆಂ.ಮೀ ಮಳೆ ದಾಖಲಾಗಿದೆ. ಉಳಿದಂತೆ ಚಳ್ಳಕೆರೆ, ನಾಯಕನಹಟ್ಟಿ ತಲಾ 6 ಹಾಗೂ ಡಿ.ಮರಿಕುಂಟೆಯಲ್ಲಿ 3 ಸೆಂ.ಮೀ ಮಳೆ ಬಂದಿದೆ. ಗಡಿ ತಾಲ್ಲೂಕು ಮೊಳಕಾಲ್ಮುರಿನಲ್ಲಿ 5, ರಾಯಾಪುರ2, ಬಿಜಿಕೆರೆ 7, ರಾಂಪುರ 5, ದೇವಸಮುದ್ರ 6 ಸೆಂ.ಮೀ ಮಳೆಯಾಗಿದೆ.
Continue Reading
You may also like...
Related Topics:Agriculture, crop destruction, hectare, Horticulture, House, Taluku, ಕೃಷಿ, ತಳಕು, ತೋಟಗಾರಿಕೆ, ಬೆಳೆ ನಾಶ, ಮನೆ, ಹೆಕ್ಟೇರ್
Click to comment