ಮುಖ್ಯ ಸುದ್ದಿ
ದ್ವಿತೀಯ ಪಿಯುಸಿ ರಿಸಲ್ಟ್ | ಇವರೇ ನೋಡಿ ಜಿಲ್ಲೆಯ ಟಾಪರ್ಸ್ | ಜಿಲ್ಲೆಗೆ ಶೇ.59.87 ಫಲಿತಾಂಶ
CHITRADURGA NEWS | 08 APRIL 2025
ಚಿತ್ರದುರ್ಗ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಕೋಟೆನಾಡು ಚಿತ್ರದುರ್ಗ ಜಿಲ್ಲೆ ಶೇ.59.87 ರಷ್ಟು ಫಲಿತಾಂಶ ದಾಖಲಿಸಿ, 28ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
2024ನೇ ಸಾಲಿನಲ್ಲಿ ಶೇ.72.92 ರಷ್ಟು ಫಲಿತಾಂಶ ಬಂದಿದ್ದು, ೩೧ನೇ ಸ್ಥಾನದಲ್ಲಿತ್ತು. 2025ನೇ ಸಾಲಿನಲ್ಲಿ ಶೇ.59.5 ರಷ್ಟು ಫಲಿತಾಂಶ ಬಂದಿದ್ದು, 28ನೇ ಸ್ಥಾನದಲ್ಲಿತ್ತು.
ಇದನ್ನೂ ಓದಿ: 3 ದಿನ ವಿದ್ಯುತ್ ವ್ಯತ್ಯಯ | ಎಲ್ಲೆಲ್ಲಿ ಕರೆಂಟ್ ಇರಲ್ಲ?
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಚಿತ್ರದುರ್ಗ ಜಿಲ್ಲೆಯ ಫಲಿತಾಂಶ 31ನೇ ಸ್ಥಾನದಿಂದ 28ನೇ ಸ್ಥಾನಕ್ಕೆ ಜಿಗಿತ ಕಂಡಿದೆ.
ಇವರೇ ಜಿಲ್ಲೆಯ ಟಾಪರ್ಸ್:
ಡಾನ್‌ಬಾಸ್ಕೋ ಪಿಯು ಕಾಲೇಜಿನ ಎಂ.ಮಾರುತಿ 593(98.93) ಅಂಕ ಗಳಿಸುವ ಮೂಲಕ ಸೈನ್ಸ್ ವಿಭಾಗದಲ್ಲಿ ಚಿತ್ರದುರ್ಗ ಜಿಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾನೆ.
ಇದನ್ನೂ ಓದಿ: ದಿನ ಭವಿಷ್ಯ | ಏಪ್ರಿಲ್ 08 | ಅನಾರೋಗ್ಯದ ಸಮಸ್ಯೆ, ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಗೊಂದಲಮಯ ವಾತಾವರಣ
ಎಸ್‌ಆರ್‌ಎಸ್ ಪಿಯು ಕಾಲೇಜಿನ ವಿಜೇತ ರೆಡ್ಡಿ ಬಿ.ಸಿ. 589(98.16) ಅಂಕ ಗಳಿಸುವ ಮೂಲಕ ವಿಜ್ಞಾನ ವಿಭಾಗದಲ್ಲಿ ಎರಡನೇ ಟಾಪರ್ ಆಗಿದ್ದಾರೆ.
ಎಸ್‌ಆರ್‌ಎಸ್ ವಿದ್ಯಾಸಂಸ್ಥೆಯ ಅಮರೇಶ್ 587(97.83) ಅಂಕ ಪಡೆದು ಜಿಲ್ಲೆಗೆ ಮೂರನೇ ಸ್ಥಾನ ಪಡೆದುಕೊಂಡಿದ್ದಾನೆ.
ಕಾಮರ್ಸ್ ವಿಭಾಗದಲ್ಲಿ ಎಸ್‌ಆರ್‌ಎಸ್ ಪಾರಮ್ಯ:
ಚಿತ್ರದುರ್ಗ ನಗರದ ಎಸ್‌ಆರ್‌ಎಸ್ ಪಿಯು ಕಾಲೇಜು ವಿದ್ಯಾರ್ಥಿನಿ ಇಶಿತಾ ಬಿ.ಎನ್. 592(98.66) ಅಂಕ ಗಳಿಸುವ ಮೂಲಕ ಕಾಮರ್ಸ್ ವಿಭಾಗದಲ್ಲಿ ಜಿಲ್ಲೆಗೆ ಟಾಪರ್ ಆಗಿದ್ದಾರೆ.
ಇದನ್ನೂ ಓದಿ: APMC: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಸೂರ್ಯಕಾಂತಿ ರೇಟ್ ಎಷ್ಟಿದೆ?
ಎಸ್‌ಆರ್‌ಎಸ್ ಪಿಯು ಕಾಲೇಜಿನ ಸಾಕ್ಷಿ ಎಸ್.ಬಿ. 589(98.16) ಅಂಕ ಗಳಿಸಿ ಜಿಲ್ಲೆಗೆ ಎರಡನೇ ಟಾಪರ್ ಆಗಿದ್ದಾರೆ.
ಎಸ್‌ಆರ್‌ಎಸ್ ಪಿಯು ಕಾಲೇಜಿನ ರಿಯಾ ಎಸ್.ಕೊಠಾರಿ 588(98) ಅಂಕ ಗಳಿಸಿ ಜಿಲ್ಲೆಗೆ ಮೂರನೇ ಟಾಪರ್ ಆಗಿದ್ದಾರೆ.
ಸಿರಿಗೆರೆ ಬಿ. ಲಿಂಗಯ್ಯ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಪಾಂಡುರಂಗ ಆನೆಗೊಂದಿ 586 ಅಂಕ ಗಳಿಸುವ ಮೂಲಕ ಕಲಾ(ಆರ್ಟ್ಸ್) ವಿಭಾಗದಲ್ಲಿ ಜಿಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾನೆ.
ಇದನ್ನೂ ಓದಿ: ಅಬ್ಬಿನಹೊಳೆ | ಶ್ರೀ ರಂಗನಾಥಸ್ವಾಮಿ ಜಾತ್ರೆ ಏ.16ರವರೆಗೆ
ಮುತ್ತಗದೂರು ತರಳಬಾಳು ಪದವಿ ಪೂರ್ವ ಕಾಲೇಜಿನ ಅಂಜುಮ್ ಬಾನು ಎಚ್.ಎಸ್.581(96.83) ಅಂಕ ಗಳಿಸಿ ಜಿಲ್ಲೆಗೆ ಎರಡನೇ ಟಾಪರ್ ಆಗಿದ್ದಾರೆ.
ಮೊಳಕಾಲ್ಮೂರು ತಾಲೂಕು ಚಿಕ್ಕೋಬನಹಳ್ಳಿ ಆಂಜನೇಯ ಪದವಿ ಪೂರ್ವ ಕಾಲೇಜಿನ ಸಮೀನ ಜೆ 579 (96.5) ಅಂಕ ಗಳಿಸಿ ಜಿಲ್ಲೆಗೆ ಮೂರನೇ ಟಾಪರ್ ಆಗಿದ್ದಾರೆ.
8206 ವಿದ್ಯಾರ್ಥಿಗಳು ತೇರ್ಗಡೆ:
ಈ ಬಾರಿ ಜಿಲ್ಲೆಯಲ್ಲಿ ಒಟ್ಟು 14761 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು, ಇದರಲ್ಲಿ 8206 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಇದನ್ನೂ ಓದಿ: ಬೆಸ್ಕಾಂ ಎಇಇ ಸೇರಿ ಮೂರು ಜನರಿಗೆ ಜೈಲು ಶಿಕ್ಷೆ | ವಿದ್ಯುತ್ ತಗುಲಿ ಬಾಲಕ ಮೃತಪಟ್ಟಿದ್ದ ಪ್ರಕರಣ
ಇದರಲ್ಲಿ 6368 ಬಾಲಕರು ಪರೀಕ್ಷೆಗೆ ಕುಳಿತಿದ್ದು, ಇದರಲ್ಲಿ 3149 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
8393 ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ 5057 ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದಾರೆ.