ಮುಖ್ಯ ಸುದ್ದಿ
ಪರೀಕ್ಷೆಯಲ್ಲಿ ಫೇಲ್ | ವಿದ್ಯಾರ್ಥಿನಿ ಆತ್ಮಹತ್ಯೆ | ಮುಗಿಲು ಮುಟ್ಟಿದ ಹೆತ್ತವರ ಆಕ್ರಂಧನ
CHITRADURGA NEWS | 08 APRIL 2025
ಚಿತ್ರದುರ್ಗ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಅನುತ್ತೀರ್ಣವಾಗಿದ್ದಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ದ್ವಿತೀಯ ಪಿಯುಸಿ ರಿಸಲ್ಟ್ | ಇವರೇ ನೋಡಿ ಜಿಲ್ಲೆಯ ಟಾಪರ್ಸ್ | ಜಿಲ್ಲೆಗೆ ಶೇ.59.87 ಫಲಿತಾಂಶ
ಚಿತ್ರದುರ್ಗ ಜಿಲ್ಲೆ, ಹೊಳಲ್ಕೆರೆ ತಾಲೂಕು ಕುಡಿನೀರಕಟ್ಟೆ ಗ್ರಾಮದ ಕೃಪಾ ಮೃತ ವಿದ್ಯಾರ್ಥಿನಿ.
ದಾವಣಗೆರೆ ಖಾಸಗಿ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದ ಕೃಪಾ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಎರಡು ವಿಷಯಗಳಲ್ಲಿ ಫೇಲ್ ಆಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕುಡಿನೀರಕಟ್ಟೆಯ ಚಂದ್ರಶೇಖರಪ್ಪ ಹಾಗೂ ವೀಣಾ ದಂಪತಿಯ ಒಬ್ಬಳೇ ಮಗಳು ಕೃಪಾ.
ಮಗಳ ಸಾವಿನಿಂದ ಕಂಗಾಲಾಗಿರುವ ಪೋಷಕರ ಆಕ್ರಂಧನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಹೊಳಲ್ಕೆರೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ ಎಷ್ಟಿದೆ?
ಪರೀಕ್ಷೆಯ ಫಲಿತಾಂಶಕ್ಕಿಂತ ಬದುಕು ದೊಡ್ಡದು. ಮುದ್ದಿನ ಅಪ್ಪ, ಅಮ್ಮಂದಿರ ಬಗ್ಗೆ ಮಕ್ಕಳು ಯೋಚನೆ ಮಾಡಬೇಕು. ಪರೀಕ್ಷೆಯಲ್ಲಿ ಫೇಲಾದರೆ ಮತ್ತೊಮ್ಮೆ ಬರೆಯಬಹುದು. ಅದಲ್ಲದಿದ್ದರೆ ಇನ್ನೊಂದು ಇದ್ದೇ ಇರುತ್ತದೆ. ಆದರೆ, ಈ ಬದುಕು ಒಮ್ಮೆ ಮಾತ್ರ ಸಿಗುವುದು. ಈ ವಿಚಾರದಲ್ಲಿ ಮಕ್ಕಳು ದುಡುಕಬಾರದು ಎನ್ನುವುದು ಚಿತ್ರದುರ್ಗ ನ್ಯೂಸ್.ಕಾಂ ಕಳಕಳಿಯಾಗಿದೆ.