ಮುಖ್ಯ ಸುದ್ದಿ
Pushpa-2: ತಗ್ಗೋದೆ ಇಲ್ಲ ಎನ್ನುವ ತೆಲುಗಿನ ಪುಷ್ಪನಿಗೆ ವಿರೋಧ | ಕನ್ನಡ ಧೀರಭಗತ್‍ರಾಯನಿಗಾಗಿ ಪ್ರತಿಭಟನೆ
CHITRADURGA NEWS | 05 DECEMBER 2024
ಚಿತ್ರದುರ್ಗ: ರಾಜ್ಯದಲ್ಲಿ ಏಕಕಾಲಕ್ಕೆ ಹಲವು ಸಿನಿಮಾ ಬಿಡುಗಡೆ ಆಗಿವೆ. ಇದರಲ್ಲಿ ಪ್ರಮುಖವಾಗಿ ತೆಲುಗಿನ ಖ್ಯಾತನಟ ಅಲ್ಲು ಅರ್ಜುನ್ ಕನ್ನಡತಿ ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ-2 ಸಿನಿಮಾ ತೆರೆಗೆ ಬಂದಿದೆ.
ಪ್ಯಾನ್ ಇಂಡಿಯಾ ಸಿನಿಮಾ ಆಗಿ ಚಿತ್ರ ಕನ್ನಡದಲ್ಲೂ ತೆರೆ ಕಂಡಿದೆ. ಇದೇ ವೇಳೆ, ಕನ್ನಡದ ಧೀರ ಭಗತ್‍ರಾಯ್ ಚಿತ್ರ ಬಿಡುಗಡೆಯಾಗಿದೆ.
ಇದನ್ನೂ ಓದಿ: ಒನಕೆ ಓಬವ್ವ ಸ್ಟೇಡಿಯಂನಲ್ಲಿ ಕೋಟಿ ವೆಚ್ಚದಲ್ಲಿ ವಾಲ್ ಕ್ಲೈಂಬಿಂಗ್ | ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ
ಚಿತ್ರದುರ್ಗದಲ್ಲಿ ಪುಷ್ಪ-2 ಪ್ರಸನ್ನ ಹಾಗೂ ವೆಂಕಟೇಶ್ವರ ಎರಡು ಚಿತ್ರಮಂದಿರಗಳಲ್ಲಿ ತೆರೆ ಕಂಡಿದೆ. ಇದರಿಂದಾಗಿ ಧೀರ ಭಗತ್‍ರಾಯ್ ಸಿನಿಮಾಗೆ ಸ್ಥಾನ ಕಲ್ಪಿಸಿಲ್ಲ ಎಂದು ಕನ್ನಡಾಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರುನಾಡ ವಿಜಯಸೇನೆಯಿಂದ ಚಿತ್ರದುರ್ಗದಲ್ಲಿ ಪ್ರಸನ್ನ ಹಾಗೂ ವೆಂಕಟೇಶ್ವರ ಚಿತ್ರಮಂದಿರಗಳ ಬಳಿ ಪ್ರತಿಭಟಿಸಿ ಪುಷ್ಪ-2 ಸಿನಿಮಾ ಪೋಸ್ಟರ್‍ಗೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಅಡಿಕೆ ಧಾರಣೆ | ಯಾವ ಅಡಿಕೆಗೆ ಎಷ್ಟು ರೇಟ್ | ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್
ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಮಾತನಾಡಿ, ರಾಜ್ಯದಲ್ಲಿ 69ನೇ ಕನ್ನಡ ರಾಜ್ಯೋತ್ಸವ ಆಚರಿಸಿದ್ದೇವೆ. 50ನೇ ಸುವರ್ಣ ಕರ್ನಾಟಕ ಮಹೋತ್ಸವ ಆಚರಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ರಾಜ್ಯದಲ್ಲಿ ಕನ್ನಡ ಸಿನಿಮಾಗಳಿಗೆ ಅವಕಾಶ ಕಲ್ಪಿಸದೆ ತೆಲುಗು ಚಿತ್ರಗಳನ್ನು ಪ್ರದರ್ಶಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.
ಚಿತ್ರಮಂದಿರಗಳ ಮಾಲಿಕರು ಹಣ ಮಾಡುವ ಉದ್ದೇಶದಿಂದ ಕನ್ನಡ ಭಾಷೆಯ ಸಿನಿಮಾಗಳ ಬಗ್ಗೆ ಅನಾಧಾರಾ ತೋರಿಸುತ್ತಿದ್ದಾರೆ. ಕನ್ನಡ ಸಿನಿಮಾ ಬಿಡುಗಡೆ ಆಗಿದ್ದರೂ, ತೆಲುಗು ಚಿತ್ರ ಪ್ರದರ್ಶನ ಮಾಡುವ ಮೂಲಕ ಕನ್ನಡ ಭಾಷೆಗೆ ಅವಮಾನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ, ಚಿತ್ರದುರ್ಗದಲ್ಲಿ ಧೀರ ಭಗತ್‍ರಾಯ್ ಚಿತ್ರ ಪ್ರದರ್ಶನ ಮಾಡಬೇಕು ಎಂದು ಜಿಲ್ಲಾಡಳಿತಕ್ಕೂ ಒತ್ತಾಯಿಸುತ್ತಿದ್ದೇವೆ ಎಂದು ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ತಿಳಿಸಿದ್ದಾರೆ.