ಹಿರಿಯೂರು
ನೀರಿನ ನಿರ್ವಹಣೆ ಸರಿಯಾದರೆ ದಾಳಿಂಬೆ ಇಳುವರಿ ಸಾಧ್ಯ
CHITRADURGA NEWS | 06 FEBRUARY 2025
ಹಿರಿಯೂರು: ದಾಳಿಂಬೆಯು ನಮ್ಮ ಜಿಲ್ಲೆಯ ಪ್ರಮುಖ ಹಣ್ಣಿನ ಬೆಳೆಯಲ್ಲಿ ಒಂದಾಗಿದ್ದು, ಬೆಳೆಯಲ್ಲಿ ಸಮರ್ಪಕ ನೀರಿನ ನಿರ್ವಹಣೆ, ಸುಸಜ್ಜಿತ ಉತ್ಪಾದನೆ ತಾಂತ್ರಿಕತೆಗಳು ಮತ್ತು ಸಮಗ್ರ ಪೀಡೆ ನಿರ್ವಹಣೆಯ ಪದ್ದತಿ ಅಳವಡಿಕೆಯಿಂದ ಉತ್ತಮ ಇಳುವರಿ ಪಡೆಯಲು ಸಾಧ್ಯವಿದೆ ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ರಜನೀಕಾಂತ ತಿಳಿಸಿದರು.
Also Read: B.Ed ಫಲಿತಾಂಶ | SRS ಕಾಲೇಜಿಗೆ ಮೂರು ರ್ಯಾಂಕ್
ಹಿರಿಯೂರು ತಾಲ್ಲೂಕಿನ ಬಬ್ಬೂರುಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಬುಧವಾರ ಜಿಲ್ಲೆಯ ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರಿಗೆ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಕೃಷಿಯಲ್ಲಿ ವೈಜ್ಞಾನಿಕ ತುಂತುರು ಮತ್ತು ಹನಿ ನೀರಾವರಿ ಘಟಕಗಳ ಅಳವಡಿಕೆ ಮತ್ತು ನಿರ್ವಹಣೆ, ದಾಳಿಂಬೆ ಬೆಳೆಯ ಸುಸಜ್ಜಿತ ಉತ್ಪಾದನೆ ಕ್ರಮಗಳು, ನೀರಿನ ನಿರ್ವಹಣೆ, ಸಮಗ್ರರೋಗ ಮತ್ತು ಕೀಟಗಳ ನಿರ್ವಹಣೆ ಕುರಿತು ಆಯೋಜಿಸಲಾದ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭೂಮಿಯ ಮೇಲೆ ಶೇ 70 ರಷ್ಟು ನೀರಿದ್ದರೂ ಶೇ 2% ಮಾತ್ರ ಕೃಷಿ, ಕೈಗಾರಿಕೆ ಮತ್ತು ದಿನ ನಿತ್ಯ ಬಳಕೆಗೆ ಯೋಗ್ಯವಾಗಿದ್ದು ವೈಜ್ಞಾನಿಕವಾಗಿ ಈ ಶುದ್ದ ನೀರಿನ ಮಿತ ಹಾಗೂ ಸಮರ್ಥ ಬಳಕೆ ತಮ್ಮಲ್ಲೇರ ಜವಬ್ದಾರಿಯಾಗಿದೆಂದರು.
ತುಂತುರು ಮತ್ತು ಹನಿ ನೀರಾವರಿ ಪದ್ದತಿಗಳ ಅಳವಡಿಕೆಯಿಂದ ಕೃಷಿಯಲ್ಲಿ 30-40% ನೀರಿನ ಉಳಿತಾಯ, ವಿದ್ಯುಚ್ಚಕ್ತಿಯ ಉಳಿತಾಯ, ಕೂಲಿ ಆಳುಗಳ ಉಳಿತಾಯ, ಸಮಯದ ಉಳಿತಾಯ, ಕಳೆಗಳ ನಿರ್ವಹಣೆ ಮತ್ತು ರೋಗಗಳ ಹರಡುವಿಕೆಯನ್ನು ತಡೆಗಟ್ಟಬಹುದು. ಹನಿ ನೀರಾವರಿ ಪದ್ದತಿಯಲ್ಲಿ ರಸಾವರಿ ಬಳಸಿ ರಸಗೊಬ್ಬರ ನೀಡುವುದರಿಂದ ರಸಗೊಬ್ಬರದ ಸಮರ್ಪಕ ಬಳಕೆಯಿಂದ ವ್ಯವಯಸಾಯದ ಖರ್ಚು ಕಡಿಮೆಯಾಗಿ 20-30% ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವೆಂದರು.
Also Read: ವಿಜಯರಾಯ ಸಂಗಮೇಶ್ವರ ಪತ್ತಿನ ಸಹಕಾರ ಸಂಘಕ್ಕೆ ಹೊಸ ಪದಾಧಿಕಾರಿಗಳ ಆಯ್ಕೆ | ಶಾಂತವೀರ ಶ್ರೀಗಳಿಂದ ಸನ್ಮಾನ
ಮಳೆಯಾಶ್ರಿತ ಪ್ರದೇಶದಲ್ಲಿ ರೈತರು ಬಿದ್ದ ನೀರನ್ನು ಇಂಗಿಸಲು ಕಂದಕ ಬದುಗಳ ನಿರ್ಮಾಣ ಮಾಡಬೇಕು ಮತ್ತು ಕೃಷಿ ಹೊಂಡದಲ್ಲಿ ನೀರು ಸಂಗ್ರಹಣೆ ಮಾಡಿ ಬೆಳೆಯ ಸಂದಿಗ್ದ ಹಂತದಲ್ಲಿ ನೀರು ಹಾಯಿಸಲು ಅನೂಕೂಲವಾಗುತ್ತದೆ.
ಕೃಷಿ ಇಲಾಖೆಯಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿಎಲ್ಲಾ ವರ್ಗದ ರೈತರಿಗೆ ಶೇ.90 ಸಹಾಯಧನದಲ್ಲಿ ಸ್ಪ್ರಿಂಕ್ಲರ್‍ಸೆಟ್ ಪಡೆಯಲು ಸಂಬಂಧಪಟ್ಟ ರೈತಸಂಪರ್ಕ ಕೇಂದ್ರಗಳಲ್ಲಿ ಅರ್ಜಿಯನ್ನು ಸಲ್ಲಿಸಿ ಈ ಯೋಜನೆಯ ಅನುಕೂಲ ಪಡೆದು ಕೊಳ್ಳಬಹುದೆಂದರು.
ಬಬ್ಬೂರಿನ ತೋಟಗಾರಿಕೆ ಕಾಲೇಜಿನ ಸಹಾಯಕ ಪ್ರಾಧ್ಯಪಕರಾದ ಡಾ. ಶ್ರೀಧರ್ ಅವರು ದಾಳಿಂಬೆ ಬೆಳೆಯಲ್ಲಿ ಅನುಸರಿಸಬೇಕಾದ ಸುಸಜ್ಜಿತ ಉತ್ಪಾದನೆ ಕ್ರಮಗಳ ಕುರಿತು ಮಾಹಿತಿ ನೀಡಿ, ವೈಜ್ಞಾನಿಕ ನೀರಿನ ಸಮರ್ಪಕ ಹಾಗೂ ಸಮಗ್ರ ಬೆಳೆ ನಿರ್ವಹಣೆಯಿಂದ ಉತ್ತಮ ಗುಣಮಟ್ಟದ ಇಳುವರಿ ಪಡೆಯಲು ಸಾಧ್ಯವೆಂದರು.
Also Read: ನರೇಗಾ ಹಬ್ಬದಲ್ಲಿ ಚಿತ್ರದುರ್ಗ ಜಿಲ್ಲೆಗೆ ಮೂರು ಪ್ರಶಸ್ತಿ
ಕೀಟ ಶಾಸ್ತ್ರಜ್ಞರಾದ ಡಾತಾರಣ ಅವರು ದಾಳಿಂಬೆ ಬೆಳೆಯಲ್ಲಿ ಕೀಟಗಳ ನಿರ್ವಹಣೆ ಕುರಿತು ವಿಷಯ ಮಂಡನೆ ಮಾಡಿದರು. ಮುನಿರಬಾದ್‍ನ ತೋಟಗಾರಿಕೆ ಕಾಲೇಜಿನ ರೋಗಶಾಸ್ತ್ರಜ್ಞರಾದ ಡಾ, ರಾಘವೇಂದ್ರ ಆಚಾರಿ ಅವರು ಈ ಬೆಳೆಯಲ್ಲಿ ಬರುವ ರೋಗಗಳ ಸಮಗ್ರ ನಿರ್ವಹಣೆ ಕುರಿತು ಗೂಗಲ್ ಮೀಟ್ ಮೂಲಕ ವಿಷಯ ಮಂಡನೆ ಮಾಡಿದರು.
ಜೈನ್ ಇರಿಗೇಷನ್ ಸಂಸ್ಥೆಯ ಪ್ರತಿನಿಧಿಯಾದ ಕೆ.ದೇವರಾಜ್ ಅವರು ಹನಿ ನೀರಾವರಿ ಘಟಕಗಳನ್ನು ಕ್ಷೇತ್ರ ಮಟ್ಟದಲ್ಲಿ ಅಳವಡಿಸುವ ವಿನ್ಯಾಸ ಹಾಗೂ ನಿರ್ವಹಣೆಯ ವಿಧಾನವನ್ನುತಿಳಿಸಿದರು.
ಹನಿ ನೀರಾವರಿ ಪದ್ದತಿಯಲ್ಲಿ ವಿವಿಧ ಫಿಲ್ಟರ್‍ಗಳ ನಿರ್ವಹಣೆ ಬಗ್ಗೆ ಮಾಹತಿ ನೀಡಿ, ದೈನಂದಿನ ಫಿಲ್ಟರ್‍ಗಳಲ್ಲಿ ಡ್ರೈನ್ ಕವಾಟಗಳನ್ನು ತೆರೆಯುವುದು, ವಾರಕ್ಕೊಮ್ಮೆಮೆಶ್ ಮತ್ತುಡಿಶ್ ಫಿಲ್ಟರ್ ಗಾಗಿ ಫಿಲ್ಟರ್ ಎಲಿಮೆಂಟ್ ತೆರೆಯುವಿಕೆಹಾಗೂ ತಿಂಗಳಿಗೊಮ್ಮೆ ಹೈಡ್ರೋಸೈಕ್ಲೋನ್ ಫಿಲ್ಟರ್‍ನ ಸಂಗ್ರಹಕೊಠಡಿಯಲ್ಲಿ ಸೈಡ್‍ಕ್ಯಾಪ್ ತೆರೆಯುವುದು ಬಹಳ ಮುಖ್ಯವೆಂದರು.
ಎಲ್ಲಾ ಡ್ರಿಪ್ ಲ್ಯಾಟರಲ್‍ಗಳ ಫ್ಲಶಿಂಗ್‍ನ್ನು ಪ್ರತಿ15 ದಿನಗಳಿಗೊಮ್ಮೆ ಮಾಡಬೇಕು. ಹನಿ ನೀರಾವರಿಘಟಕದ ನಿರ್ದಿಷ್ಟ ಅವಧಿಯ ಕಾರ್ಯಾಚರಣೆಯ ನಂತರ ಉಪ್ಪು ಶೇಖರಣೆ ಸಂಭವಿಸುತ್ತದೆ.
Also Read: ಮಾ.4 ರಿಂದ ಮಾವಿನಹಳ್ಳಿ ಬಸವೇಶ್ವರ ಸ್ವಾಮಿ ರಥೋತ್ಸವ
ಸಾಧನದ ಹೊರಮೇಲ್ಮೈಯಲ್ಲಿಉಪ್ಪು ಶೇಖರಣೆಯನ್ನು ನಾವುಗಮನಿಸಿದಾಗ ಆಮ್ಲಚಿಕಿತ್ಸೆಯನ್ನು ಮಾಡಬೇಕಾಗುತ್ತದೆ. ಬೆಳೆಯ ಹಂತದಲ್ಲಿ ನಿಯಮಿತವಾಗಿ ಫಾಸ್ಪರಿಕ್‍ಆಮ್ಲವನ್ನು ಬಳಸುವುದರಿಂದ ಬೆಳೆಗೆ ರಂಜಕ ಪೋಷಕಾಂಶ ಪೂರೈಸಲು ಸಹಕಾರಿಯಾಗುವುದಲ್ಲದೆ, ಹನಿ ನೀರಾವರಿ ಘಟಕದಲ್ಲಿ ಉಪ್ಪು ಶೇಖರಣೆಯಾಗುವುದನ್ನು ಸಹ ತಡೆಯಬಹುದು.
ಬೆಳೆಯ ಅವಧಿ ಮುಗಿದಾಗ ಆಸಿಡ್ ಚಿಕಿತ್ಸೆಗಾಗಿ 35% ಕೇಂದ್ರೀಕೃತ ಹೈಡ್ರೋಕ್ಲೋರಿಕ್ ಆಮ್ಲವನ್ನು ಬಳಸಬೇಕು. ಆಸಿಡ್ ಚಿಕಿತ್ಸೆಯನ್ನು ಕೈಗೊಳ್ಳುವಾಗ ಕಣ್ಣುಗಳು ಮತ್ತು ಚರ್ಮದೊಂದಿಗೆ ಆಮ್ಲದ ಸಂಪರ್ಕವು ಅಪಾಯಕಾರಿಯಾದ್ದರಿಂದ ದಯವಿಟ್ಟು ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕೆಂದರು.
ಹನಿ ನೀರಾವರಿ ವ್ಯವಸ್ಥೆಯಲ್ಲಿಕೀಟ,ಅಳಿಲು ಮತ್ತು ಇಲಿಗಳ ಹಾನಿಯನ್ನುತಡೆಗಟ್ಟಲುನೀರಾವರಿ ಮುಗಿದಾಗಅಥವಾ ಬೆಳೆ ಮುಗಿದಾಗ ಅಥವಾ ಕೊಯ್ಲು ಮಾಡುವಾಗ ಹನಿನೀರಾವರಿ ಕೊಳವೆಗಳನ್ನು ಹೊಲದಲ್ಲಿ ಬೀಡದೆ ಅವುಗಳನ್ನು ಸರಿಯಾಗಿ ನೆರಳಿನಲ್ಲಿ ಸಂಗ್ರಹಿಸಿ ಮುನ್ನೇಚ್ಚರಿಕೆಯನ್ನು ತೆಗೆದುಕೊಳ್ಳಬೇಕೆಂದರು.
Also Read: ಮಾರುಕಟ್ಟೆ ಧಾರಣೆ | ಇಂದಿನ ಹತ್ತಿ ರೇಟ್ ಎಷ್ಟಿದೆ?
ಹನಿ ನೀರಾವರಿ ವ್ಯವಸ್ಥೆಯಲ್ಲಿ ನೀರಿನಗುಣಮಟ್ಟದ ಮಾನದಂಡಗಳು ಮತ್ತುಹನಿ ನೀರಾವರಿ ವ್ಯವಸ್ಥೆಯಲ್ಲಿ ಸೂಕ್ತವಾದ ನೀರಿನಲ್ಲಿ ಕರಗುವ ರಸಗೊಬ್ಬರಗಳಕುರಿತು ಮಾಹಿತಿ ನೀಡಿದರು.