ಮುಖ್ಯ ಸುದ್ದಿ
ನರೇಗಾ ಹಬ್ಬದಲ್ಲಿ ಚಿತ್ರದುರ್ಗ ಜಿಲ್ಲೆಗೆ ಮೂರು ಪ್ರಶಸ್ತಿ
CHITRADURGA NEWS | 06 FEBRUARY 2025
ಚಿತ್ರದುರ್ಗ: ಗ್ರಾಮೀಣ ಅಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆ, ಮಹಾತ್ಮ ಗಾಂಧಿ ನರೇಗಾ ಯೋಜನೆ ವತಿಯಿಂದ ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ನರೇಗಾ ಹಬ್ಬ -2025 ಕಾರ್ಯಕ್ರಮದಲ್ಲಿ ಚಿತ್ರದುರ್ಗ ಜಿಲ್ಲೆಗೆ ಮೂರು ಪ್ರಶಸ್ತಿ ದೊರೆತಿದೆ.
Also Read: ಮಾರುಕಟ್ಟೆ ಧಾರಣೆ | ಇಂದಿನ ಹತ್ತಿ ರೇಟ್ ಎಷ್ಟಿದೆ?
ಸಾಮಾಜಿಕ ಅರಣ್ಯ ಇಲಾಖೆಗೆ ಅತ್ಯುತ್ತಮ ಜಿಲ್ಲಾ ಪ್ರಶಸ್ತಿ, ಚಳ್ಳಕೆರೆ ತಾಲೂಕು ಬೆಳಗೆರೆ ಗ್ರಾಮ ಪಂಚಾಯಿತಿಗೆ ಅತ್ಯುತ್ತಮ ಗ್ರಾಮ ಪಂಚಾಯಿತಿ ಪ್ರಶಸ್ತಿ, ಚಿತ್ರದುರ್ಗ ತಾಲೂಕಿನ ದ್ಯಾಮವ್ವನಳ್ಳಿ ಗ್ರಾಮ ಪಂಚಾಯಿತಿಯ ರೇಷ್ಮೆ ಬೆಳೆಗಾರರಾದ ಧನಲಕ್ಷ್ಮಿ ಅವರಿಗೆ ವಿಶೇಷ ಪ್ರಸಂಶನಾ ಪತ್ರ ವಿತರಣೆ ಪ್ರಶಸ್ತಿ ದೊರೆತಿದೆ.
ಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ್ ಎಸ್ ಹೊರಟ್ಟಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ ಖರ್ಗೆ ಇವರು ಪ್ರಶಸ್ತಿ ವಿತರಿಸಿದರು.
Also Read: ಮಾ.4 ರಿಂದ ಮಾವಿನಹಳ್ಳಿ ಬಸವೇಶ್ವರ ಸ್ವಾಮಿ ರಥೋತ್ಸವ
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ ಸೋಮಶೇಖರ್, ಸಾಮಾಜಿಕ ಅರಣ್ಯ ಇಲಾಖೆ ಕೆ.ಹರೀಶ್, ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಕೆ.ತಿಮ್ಮಪ್ಪ, ಜಿಲ್ಲಾ ಪಂಚಾಯತಿಯ ನರೇಗಾ ಶಾಖೆಯ ಎ.ಡಿ.ಪಿ.ಸಿ ಟಿ.ಎನ್ ಮೋಹನ್ ಕುಮಾರ್, ಜಿಲ್ಲಾ ಐ.ಇ.ಸಿ ಸಂಯೋಜಕ ಎಂ.ಎಸ್. ರವೀಂದ್ರನಾಥ್, ಜಿಲ್ಲಾ ಎಂ.ಐ.ಎಸ್. ಸಂಯೋಜಕರಾದ ಡಿ.ಎಂ.ಸಹನಾ, ಬೆಳಗೆರೆ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ವಿಶಾಲಾಕ್ಷಿ, ಪಿ.ಡಿ.ಒ ಸಿ.ಎಂ.ದೇವೇಂದ್ರಪ್ಪ, ದ್ಯಾಮವ್ವನಳ್ಳಿ ಗ್ರಾಮ ಪಂಚಾಯತಿಯ ಧನಲಕ್ಷ್ಮಿ, ಅಕೌಂಟ್ ಮೆನೇಜರ್ ಸಿದ್ದಲಿಂಗ ತೇಜಸ್ವ ಸೇರಿದಂತೆ ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಶಸ್ತಿಯನ್ನು ಸ್ವೀಕರಿಸಿದರು.