ಹಿರಿಯೂರು
ಹೊಲದಲ್ಲಿ ನಾಲ್ಕು ಚಿರತೆಗಳು ಪತ್ತೆ | ಆತಂಕದಲ್ಲಿ ರೈತರು
CHITRADURGA NEWS | 31 JANUARY 2025
ಚಿತ್ರದುರ್ಗ: ಜಮೀನೊಂದರಲ್ಲಿ ಒಟ್ಟಿಗೆ ನಾಲ್ಕು ಚಿರತೆಗಳು ಪತ್ತೆಯಾಗಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ.
ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲೂಕು ಸೊಂಡೆಕೆರೆ – ರಾಮಜೋಗಿಹಳ್ಳಿ ಬಳಿ ಜಮೀನಿನಲ್ಲಿ ಒಟ್ಟಾಗಿ ನಾಲ್ಕು ಚಿರತೆಗಳು ಪತ್ತೆಯಾಗಿವೆ.
ಇದನ್ನೂ ಓದಿ: ಬೆಳ್ಳಂ ಬೆಳಗ್ಗೆ ಬಿಸಿಎಂ ಅಧಿಕಾರಿ ಮೇಲೆ ಲೋಕಾಯುಕ್ತ ದಾಳಿ
ರೈತರು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗಲೇ, ಏಕ ಕಾಲದಲ್ಲಿ ನಾಲ್ಕು ಚಿರತೆಗಳು ಬಂದಿದ್ದು, ಮೊಬೈಲ್‍ನಲ್ಲಿ ಸೆರೆಯಾಗಿವೆ.
ಏಕ ಕಾಲದಲ್ಲಿ ನಾಲ್ಕು ಚಿರತೆಗಳು ಪತ್ತೆಯಾಗಿರುವುದದರಿಂದ ಸೊಂಡೆಕೆರೆ ಸುತ್ತಮುತ್ತಲಿನ ರೈತರು ಆತಂಕಕ್ಕೀಡಾಗಿದ್ದು, ಅರಣ್ಯ ಇಲಾಖೆ ಸೆರೆ ಹಿಡಿಯಬೇಕು ಎಂದು ಒತ್ತಾಯಿಸಿದ್ದಾರೆ.