Connect with us

KV: ಕುಂಚಿಗನಾಳು ಬಳಿ ಹೊಸ ಕೇಂದ್ರೀಯ ವಿದ್ಯಾಲಯ | ಮೋದಿ ಸರ್ಕಾರದ ಕೊಡುಗೆ | ಎ.ನಾರಾಯಣಸ್ವಾಮಿ ಶ್ರಮ

Kendriya vidyalaya

ಮುಖ್ಯ ಸುದ್ದಿ

KV: ಕುಂಚಿಗನಾಳು ಬಳಿ ಹೊಸ ಕೇಂದ್ರೀಯ ವಿದ್ಯಾಲಯ | ಮೋದಿ ಸರ್ಕಾರದ ಕೊಡುಗೆ | ಎ.ನಾರಾಯಣಸ್ವಾಮಿ ಶ್ರಮ

CHITRADURGA NEWS | 07 DECEMBER 2024

ಚಿತ್ರದುರ್ಗ: ದಶಕಗಳ ಕಾಲ ಚಿತ್ರದುರ್ಗ ಜಿಲ್ಲೆಯ ಜನರ ಬೇಡಿಕೆಯಾಗಿದ್ದ ಕೇಂದ್ರೀಯ ವಿದ್ಯಾಲಯಕ್ಕೆ (KV) ಕೊನೆಗೂ ಮುಹೂರ್ತ ನಿಗಧಿಯಾಗಿದೆ.

ಡಿಸೆಂಬರ್ 06 ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರದ ಸಚಿವ ಸಂಪುಟ ಸಭೆಯಲ್ಲಿ ದೇಶಕ್ಕೆ 85 ಹೊಸ ಕೇಂದ್ರೀಯ ವಿದ್ಯಾಲಯಗಳನ್ನು ಸ್ಥಾಪಿಸಲು ಅನುಮೋದನೆ ನೀಡಲಾಗಿದೆ.

ಇದನ್ನೂ ಓದಿ: ಚಿತ್ರದುರ್ಗಕ್ಕೆ ಗುಡ್‌ನ್ಯೂಸ್‌ಕೊಟ್ಟ‌ ನರೇಂದ್ರ ಮೋದಿ | ದಶಕಗಳ ಕಾಯುವಿಕೆಗೆ ಸಿಕ್ಕ ಕೆವಿ

ಇದರಲ್ಲಿ ಕರ್ನಾಟಕ ರಾಜ್ಯಕ್ಕೂ ಮೂರು ಕೇಂದ್ರೀಯ ವಿದ್ಯಾಲಯ ಮಂಜೂರಾಗಿವೆ. ಚಿತ್ರದುರ್ಗ ಜಿಲ್ಲೆಯ ಕುಂಚಿಗನಾಳು ಬಳಿ ಹೊಸ ಕೇಂದ್ರೀಯ ವಿದ್ಯಾಲಯ ಇದರಲ್ಲಿ ಸೇರಿದೆ. ಇದರೊಟ್ಟಿಗೆ ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಿಗೂ ನೂತನ ಕೆವಿಗಳು ಮೂಜೂರಾಗಿವೆ.

ಸಾಂದರ್ಭಿಕ ಚಿತ್ರ

ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಆರಂಭ:

ಕೇಂದ್ರೀಯ ವಿದ್ಯಾಲಯದ ತರಗತಿಗಳು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಕಾರ್ಯಾರಂಭ ಮಾಡುವ ಸಾಧ್ಯತೆಯಿದ್ದು, ತಾತ್ಕಾಲಿಕವಾಗಿ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ನೂತನ ಕಟ್ಟಡದಲ್ಲಿ ಪ್ರಾರಂಭವಾಗಲಿವೆ.

ಇದನ್ನೂ ಓದಿ: ಲೋಕಸಭೆ ಅಧಿವೇಶನದಲ್ಲಿ ಕೇಂದ್ರೀಯ ವಿದ್ಯಾಲಯ ಸದ್ದು | ಮೊದಲ ದಿನ ಮೊದಲ ಪ್ರಶ್ನೆ ಕೇಳಿದ ಸಂಸದ ಗೋವಿಂದ ಎಂ.ಕಾರಜೋಳ

ಮೂರು ವರ್ಷದಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಿ ನಂತರ ಅಲ್ಲಿ ಹೊಸ ತರಗತಿಗಳನ್ನು ಪ್ರಾರಂಭಿಸುವುದು ಕೇಂದ್ರೀಯ ವಿದ್ಯಾಲಯದ ನಿಯಮ.

ಮಾಜಿ ಸಂಸದ ಎ.ನಾರಾಯಣಸ್ವಾಮಿ ಶ್ರಮ ಅಪಾರ:

ಚಿತ್ರದುರ್ಗ ಜಿಲ್ಲೆಯಲ್ಲಿ ಹೊಸ ಕೇಂದ್ರೀಯ ವಿದ್ಯಾಲಯ ಆರಂಭವಾಗುವುದರ ಹಿಂದೆ ಕೇಂದ್ರದ ಮಾಜಿ ಸಚಿವರು, ಮಾಜಿ ಸಂಸದರೂ ಆಗಿರುವ ಎ.ನಾರಾಯಣಸ್ವಾಮಿ ಅವರ ಶ್ರಮ ಅಪಾರವಾಗಿದೆ.

ಇದನ್ನೂ ಓದಿ: ಶೀಘ್ರದಲ್ಲೇ ಕೇಂದ್ರೀಯ ವಿದ್ಯಾಲಯ | ಗೋವಿಂದ ಕಾರಜೋಳ

ಎ.ನಾರಾಯಣಸ್ವಾಮಿ ಚಿತ್ರದುರ್ಗ ಸಂಸದರಾಗಿದ್ದಾಗಲೇ ಕೇಂದ್ರೀಯ ವಿದ್ಯಾಲಯ ಆರಂಭಿಸಲು ಸಾಕಷ್ಟು ಪ್ರಯತ್ನ ಮಾಡಿದ್ದರು. ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ತಾತ್ಕಾಲಿಕ ತರಗತಿ ಆರಂಭಿಸಲು ಪತ್ರ ವ್ಯವಹಾರ ನಡೆಸಿ ಕೊಠಡಿಗಳನ್ನು ಮಂಜೂರು ಮಾಡಿಸಿದ್ದರು.

ಎ.ನಾರಾಯಣಸ್ವಾಮಿ

2021ರಲ್ಲೇ ಬಹುತೇಕ ಎಲ್ಲ ಪ್ರಕ್ರಿಯೆಗಳು ಅಂತಿಮವಾಗಿ ಎರಡು ವರ್ಷದ ಹಿಂದೆಯೇ ಕೇಂದ್ರೀಯ ವಿದ್ಯಾಲಯ ಆರಂಭವಾಗಲಿದೆ ಎನ್ನಲಾಗುತ್ತಿತ್ತು.

ಇದನ್ನೂ ಓದಿ: ದಿನ ಭವಿಷ್ಯ | 07 ಡಿಸೆಂಬರ್ | ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ನಿರೀಕ್ಷಿತ ಬದಲಾವಣೆ, ಮನೆಯಲ್ಲಿ ಶುಭ ಕಾರ್ಯ

ಆದರೆ, ಕೇಂದ್ರ ಸರ್ಕಾರ ದೇಶದ ಇತರೆ ರಾಜ್ಯಗಳ ಪ್ರಸ್ತಾವನೆಯ ಜೊತೆಗೆ ಒಟ್ಟಿಗೆ ಅನುಮೋದನೆ ನೀಡುವ ಕಾರಣಕ್ಕೆ ಚಿತ್ರದುರ್ಗ ಕೆವಿಯನ್ನು ಪೆಂಡಿಂಗ್ ಇಟ್ಟಿತ್ತು. ಈ ಕಾರಣಕ್ಕೆ ಆಗ ಆರಂಭವಾಗಲಿಲ್ಲ.

ಕುಂಚಿಗನಾಳು ಬಳಿ ಕೇಂದ್ರೀಯ ವಿದ್ಯಾಲಯ:

ಕೇಂದ್ರದ ಸಂಪುಟ ಸಭೆಯಲ್ಲಿ ನಿರ್ಧರಿಸಿದಂತೆ ಕುಂಚಿಗನಾಳು ಸರ್ವೇ ನಂಬರಿನಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪನೆಗೆ ಈಗಾಗಲೇ ಭೂಮಿ ಸಿದ್ಧವಾಗಿದೆ.

ಇದನ್ನೂ ಓದಿ: ಹೊಳಲ್ಕೆರೆ ಬಿಜೆಪಿ ಘಟಕದಿಂದ ಪ್ರೆಸ್‌ಮೀಟ್ | ಮಂಡಲ ಅಧ್ಯಕ್ಷ ಸಿದ್ದೇಶ್ ಏನು ಹೇಳಿದ್ರು?

VRL ಸಮೀಪದಲ್ಲಿ ಹೊಸ ಕೇಂದ್ರೀಯ ವಿದ್ಯಾಲಯದ ಜಾಗ ಅಂತಿಮವಾಗಿದ್ದು, ಕೆಲ ದಿನಗಳಲ್ಲೇ ಕಟ್ಟಡ ನಿರ್ಮಾಣ ಕಾಮಗಾರಿಯೂ ಪ್ರಾರಂಭವಾಗಲಿದೆ.

ಮೊದಲ ದಿನವೇ ಪ್ರಶ್ನೆ ಕೇಳಿದ ಗೋವಿಂದ ಕಾರಜೋಳ:

ಎ.ನಾರಾಯಣಸ್ವಾಮಿ ಅವರ ಪ್ರಯತ್ನಕ್ಕೆ ಪೂರಕವಾಗಿ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ನೂತನ ಸಂಸದರಾಗಿ ಆಯ್ಕೆಯಾಗಿ ಬಂದ ಗೋವಿಂದ ಕಾರಜೋಳ ಅವರು ಕೇಂದ್ರೀಯ ವಿದ್ಯಾಲಯ ಕುರಿತು ಮೊದಲ ದಿನವೇ ಅಧಿವೇಶನದಲ್ಲಿ ಸದ್ದು ಮಾಡಿದ್ದರು.

ಸಂಸದ ಗೋವಿಂದ ಕಾರಜೋಳ

ಸಂಸದರಾಗಿ ದೆಹಲಿಗೆ ತೆರಳಿದ ಮೊದಲ ದಿನವೇ ಕೇಂದ್ರದ ಶಿಕ್ಷಣ ಹಾಗೂ ಕೌಶಲುಆಭಿವೃದ್ಧಿ ಸಚಿವ ಧಮೇಂದ್ರ ಪ್ರಧಾನ್ ಅವರನ್ನು ಭೇಟಿಯಾಗಿ ಹಿಂದುಳಿದ ಜಿಲ್ಲೆಗೆ ಕೇಂದ್ರೀಯ ವಿದ್ಯಾಲಯ ಮಂಜೂರಾಗಬೇಕು ಎಂದು ಮನವಿ ಮಾಡಿದ್ದರು.

ಇದನ್ನೂ ಓದಿ: ವಿಮಾನದಲ್ಲಿ ಸರ್ಕಾರಿ ಶಾಲೆ ಮಕ್ಕಳ ಪ್ರವಾಸ | ಹಕ್ಕಿಯಂತೆ ಹಾರಾಡಿದ ಹಳ್ಳಿ ಮಕ್ಕಳು

ಇದರೊಟ್ಟಿಗೆ ಮೊದಲ ದಿನವೇ ಸಂಸತ್ತಿನ ಅಧಿವೇಶನದಲ್ಲಿ ಚಿತ್ರದುರ್ಗದ ಕೇಂದ್ರೀಯ ವಿದ್ಯಾಲಯ ಆರಂಭದ ಕುರಿತು ಪ್ರಶ್ನೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version