Connect with us

ವಾರದೊಳಗೆ ಬೆಳೆವಿಮೆ ಪಾವತಿ | ರೈತರಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಭರವಸೆ

ಮುಖ್ಯ ಸುದ್ದಿ

ವಾರದೊಳಗೆ ಬೆಳೆವಿಮೆ ಪಾವತಿ | ರೈತರಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಭರವಸೆ

CHITRADURGA NEWS | 15 MARCH 2024
ಚಿತ್ರದುರ್ಗ: ಜಿಲ್ಲೆಯ ರೈತರಿಗೆ ವಾರದೊಳಗೆ ಬೆಳೆವಿಮೆ ಪಾವತಿ ಮಾಡಲಾಗುತ್ತದೆ. ಈ ವಿಚಾರದಲ್ಲಿ ಈಗಾಗಲೇ ಬೆಳೆವಿಮೆ ಕಂಪನಿಯೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ತಿಳಿಸಿದರು.

ಕ್ಲಿಕ್ ಮಾಡಿ ಓದಿ: https://chitradurganews.com/former-mp-bn-chandrappa-is-upset/

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಬೋರ್‌ವೆಲ್‌ ಕೊರೆಯುವ ಏಜೆನ್ಸಿಗಳು ಹಾಗೂ ರೈತರೊಂದಿಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿ, ‘ವಾರದೊಳಗೆ ಜಿಲ್ಲೆಯ ರೈತರಿಗೆ ಬೆಳೆವಿಮೆ ಪಾವತಿಗೆ ಕ್ರಮವಹಿಸಲಾಗಿದೆ’ ಎಂದು ಭರವಸೆ ನೀಡಿದರು.

ಕ್ಲಿಕ್ ಮಾಡಿ ಓದಿ: https://chitradurganews.com/fixation-of-uniform-rate-for-drilling-of-borewell/

‘ತಾಂತ್ರಿಕ ಕಾರಣಗಳಿಂದಾಗಿ ಬೆಳೆವಿಮೆ ಪಾವತಿ ವಿಳಂಬವಾಗಿದೆ. ವಾರದೊಳಗೆ ಬೆಳೆವಿಮೆ ಪಾವತಿ ಮಾಡುವಂತೆ ಬೆಳೆ ಕಂಪನಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಒಂದು ವೇಳೆ ಬೆಳೆವಿಮೆ ಪಾವತಿಯಾಗದಿದ್ದರೆ ಎಫ್‌ಐಆರ್ ದಾಖಲಿಸಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ’ ಎಂದು ಹೇಳಿದರು.

ಕ್ಲಿಕ್ ಮಾಡಿ ಓದಿ: https://chitradurganews.com/49259-rashi-arecanut-price-in-hosanagar-market/

ರೈತಮುಖಂಡ ಭೂತಯ್ಯ ಮಾತನಾಡಿ, ‘ಬರಗಾಲ ಹಾಗೂ ಬೆಳೆ ಇಲ್ಲದೇ ರೈತರು ಕಂಗಲಾಗಿದ್ದಾರೆ. ಬೆಳೆವಿಮೆ ಪಾವತಿಗೂ ನಿರ್ಧಿಷ್ಟ ದಿನಾಂಕ ನಿಗಧಿಪಡಿಸಬೇಕು ಎಂದು ಮನವಿ ಮಾಡಿದ ಅವರು, ಕೃಷಿ ಮತ್ತು ಕಂದಾಯ ಇಲಾಖೆಯ ಬೆಳೆ ಸಮೀಕ್ಷೆಯ ವರದಿಯನ್ನೇ ಆಧಾರಿಸಿ ಪರಿಹಾರ ನೀಡಬೇಕು. ಫಸಲ್‍ಭಿಮಾ ಯೋಜನೆಯ ಲೋಪದೋಷ ಸರಿಪಡಿಸಬೇಕು’ ಎಂದು ಹೇಳಿದರು.

ಕ್ಲಿಕ್ ಮಾಡಿ ಓದಿ: https://chitradurganews.com/davangere-daughter-in-law-of-durga-is-a-bjp-candidate/

ರೈತ ಮುಖಂಡರಾದ ಈಚಘಟ್ಟ ಸಿದ್ದವೀರಪ್ಪ, ರೆಡ್ಡಿಹಳ್ಳಿ ವೀರಣ್ಣ, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ.ಕಾಳೇಸಿಂಘೆ ಇದ್ದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version