ಮುಖ್ಯ ಸುದ್ದಿ
Onake Obavva: ಒನಕೆ ಓಬವ್ವ ಜಯಂತಿ | ಛಲವಾದಿ ಸಮುದಾಯದಿಂದ ಕರಪತ್ರ ಬಿಡುಗಡೆ

CHITRADURGA NEWS | 04 NOVEMBER 2024
ಚಿತ್ರದುರ್ಗ: ವೀರವನಿತೆ ಒನಕೆ ಓಬವ್ವ(Onake Obavva) ಜಯಂತಿಯನ್ನು ನವೆಂಬರ್ 11 ರಂದು ಅದ್ದೂರಿಯಾಗಿ ಆಚರಿಸುವ ಕುರಿತು ಛಲವಾದಿ ಸಮುದಾಯದ ಮುಖಂಡರು ಭಾನುವಾರ ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆ ನಡೆಸಿ ಕರಪತ್ರ ಬಿಡುಗಡೆ(Leaflet release)ಗೊಳಿಸಿದರು.
ಕ್ಲಿಕ್ ಮಾಡಿ ಓದಿ: ವಕ್ಫ್ ಹೆಸರಿನಲ್ಲಿ ಅಕ್ರಮ ಜಮೀನು ಒತ್ತುವರಿ | ಹೋರಾಟಕ್ಕೆ ಬಿಜೆಪಿ ನಿರ್ಧಾರ | ಕೆ.ಎಸ್.ನವೀನ್
ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಸಿ.ನಿರಂಜನಮೂರ್ತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಾ, ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಸಂಯುಕ್ತಾಶ್ರಯದಲ್ಲಿ ನಡೆಯುವ ಒನಕೆ ಓಬವ್ವ ಜಯಂತಿಗೆ ಛಲವಾದಿ ಜನಾಂಗದವರೆಲ್ಲಾ ಸೇರಿ ಕೈಜೋಡಿಸಿ ಊರಿನ ಹಬ್ಬದ ರೀತಿಯಲ್ಲಿ ಆಚರಿಸಿ ಒನಕೆ ಓಬವ್ವಳ ಸಾಹಸ, ದಿಟ್ಟತನವನ್ನು ಮುಂದಿನ ಪೀಳಿಗೆಗೆ ಪರಿಚಯಿಸೋಣ ಎಂದರು.
ಅಂದು ಬೆಳಿಗ್ಗೆ 8-30 ಕ್ಕೆ ಹೊಳಲ್ಕೆರೆ ರಸ್ತೆಯಲ್ಲಿರುವ ಒನಕೆ ಓಬವ್ವ ದೇವಸ್ಥಾನದಿಂದ ಪುಷ್ಪಾಲಂಕೃತ ಸಾರೋಟಿನಲ್ಲಿ ಓಬವ್ವಳ ಭಾವಚಿತ್ರದೊಂದಿಗೆ ವಿವಿಧ ಕಲಾತಂಡಗಳ ಮೆರವಣಿಗೆ ಹೊರಟು ರಂಗಮAದಿರ ತಲುಪಲಿದ್ದು, 11 ಗಂಟೆಗೆ ವೇದಿಕೆ ಕಾರ್ಯಕ್ರಮ ಆರಂಭವಾಗಲಿದೆ. ಛಲವಾದಿ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಜಯಂತಿಯನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಛಲವಾದಿ ಜನಾಂಗದ ಮಂಜುನಾಥ್ ಮಾತನಾಡಿ, ಒಬವ್ವಳ ಜಯಂತಿ ಮೂಲಕ ಛಲವಾದಿ ಜನಾಂಗದವರು ಒಂದೆಡೆ ಸೇರಿ ಸಂಘಟನೆಯಾಗೋಣ. ಇದರಿಂದ ಮುಂದಿನ ಪೀಳಿಗೆಗೆ ಪರಂಪರೆಯನ್ನು ಉಳಿಸಿದಂತಾಗುತ್ತದೆಂದು ಸಲಹೆ ನೀಡಿದರು.
ಕ್ಲಿಕ್ ಮಾಡಿ ಓದಿ: ಇಸ್ಪೀಟ್ ಆಡುತ್ತಿದ್ದವರ ಬಂಧನ | ಚಿಕ್ಕಜಾಜೂರು ಪೊಲೀಸರ ಕಾರ್ಯಾಚರಣೆ
ಕೃಷಿ ಇಲಾಖೆ ನಿವೃತ್ತ ಉಪ ನಿರ್ದೇಶಕ ಛಲವಾದಿ ಸಮಾಜದ ವೆಂಕಟೇಶ್ ಮಾತನಾಡಿ, ಒನಕೆ ಓಬವ್ವ ಜಯಂತಿಯಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಸಾಧಕರನ್ನು ಸನ್ಮಾನಿಸೋಣ ಎಂದು ಹೇಳಿದರು.
ಪಿ.ವಿ.ಎಸ್.ಆಸ್ಪತ್ರೆಯ ಡಾ.ಪಿ.ವಿ.ಶ್ರೀಧರಮೂರ್ತಿ, ನ್ಯಾಯವಾದಿಗಳಾದ ಹೆಚ್.ಅಣ್ಣಪ್ಪಸ್ವಾಮಿ, ಎನ್.ಶಶಾಂಕ್, ಮುಖಂಡರಾದ ಬಾಳೆಕಾಯಿ ಶ್ರೀನಿವಾಸ್, ಎಸ್.ಎನ್.ರವಿಕುಮಾರ್, ನವೀನ್, ಶಿಕ್ಷಣ ಇಲಾಖೆಯ ನಾಗರಾಜ್, ಜಯರಾಂ ಕೆ.ಪರಮೇಶ್ವರಪ್ಪ ಪೂಜಾರ್, ಪ್ರದೀಪ್, ಸೋಮಣ್ಣ, ಹನುಮಂತಪ್ಪ, ಈರಜ್ಜನಹಟ್ಟಿ ತಿಪ್ಪೇಸ್ವಾಮಿ, ಜಗ್ಗಣ್ಣ, ರಂಗಸ್ವಾಮಿ ಮತ್ತಿತರರಿದ್ದರು.
ಕ್ಲಿಕ್ ಮಾಡಿ ಓದಿ: ಮದ್ದೇರಿನಲ್ಲಿ ದೇವಸ್ಥಾನ ಉದ್ಘಾಟನೆ | ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ
