Connect with us

    Onake Obavva; ಒನಕೆ ಓಬವ್ವ ಜಯಂತಿ | ಅದ್ದೂರಿ ಆಚರಣೆಗೆ ಛಲವಾದಿ ಜನಾಂಗದಿಂದ ಪೂರ್ವಭಾವಿ ಸಭೆ

    ನಗರದ ಪ್ರವಾಸಿ ಮಂದಿರದಲ್ಲಿ ಛಲವಾದಿ ಜನಾಂಗದವರು ಪೂರ್ವಭಾವಿ ಸಭೆ ನಡೆಸಿದರು

    ಮುಖ್ಯ ಸುದ್ದಿ

    Onake Obavva; ಒನಕೆ ಓಬವ್ವ ಜಯಂತಿ | ಅದ್ದೂರಿ ಆಚರಣೆಗೆ ಛಲವಾದಿ ಜನಾಂಗದಿಂದ ಪೂರ್ವಭಾವಿ ಸಭೆ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 21 OCTOBER 2024 

    ಚಿತ್ರದುರ್ಗ: ಮುಂದಿನ ತಿಂಗಳು ನಡೆಯುವ ಒನಕೆ ಓಬವ್ವ(Onake Obavv) ಜಯಂತಿ ಅದ್ದೂರಿ ಆಚರಣೆಗೆ ನಗರದ ಪ್ರವಾಸಿ ಮಂದಿರದಲ್ಲಿ ಛಲವಾದಿ ಜನಾಂಗದವರು ಭಾನುವಾರ ಪೂರ್ವಭಾವಿ ಸಭೆ ನಡೆಸಿದರು.

    ಕ್ಲಿಕ್ ಮಾಡಿ ಓದಿ: Kannada Novel: 7. ಊರು ತೊರೆದು ಬಂದವರು | ಹಬ್ಬಿದಾ ಮಲೆಮಧ್ಯದೊಳಗೆ

    ಛಲವಾದಿ ಜನಾಂಗದ ಮುಖಂಡ ಹೆಚ್.ಸಿ.ನಿರಂಜನಮೂರ್ತಿ ಸಭೆಯಲ್ಲಿ ಮಾತನಾಡಿ, ಒನಕೆಯ ಮೂಲಕ ಶತ್ರುಗಳನ್ನು ಸದೆಬಡಿದು ಐತಿಹಾಸಿಕ ಚಿತ್ರದುರ್ಗದ ಕೋಟೆಯನ್ನು ನಾಡಿನಾದ್ಯಂತ ಪರಿಚಯಿಸಿರುವ ಒನಕೆ ಓಬವ್ವ ಜಯಂತಿಯನ್ನು ಸರ್ಕಾರದ ಜೊತೆ ನಾವುಗಳು ಕೈಜೋಡಿಸಿ ಆಚರಿಸಬೇಕಾಗಿರುವುದರಿಂದ ಛಲವಾದಿ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಯಂತಿಯನ್ನು ಯಶಸ್ವಿಗೊಳಿಸುಬೇಕು ಎಂದರು.

    ನ.3 ರಂದು ಮತ್ತೊಮ್ಮೆ ನಡೆಯುವ ಪೂವಭಾವಿ ಸಭೆಗೆ ಛಲವಾದಿ ಸಮುದಾಯದವರು ಆಗಮಿಸಿ ಸೂಕ್ತ ಸಲಹೆಗಳನ್ನು ನೀಡುವಂತೆ ಮನವಿ ಮಾಡಿದರು.

    ಡಾ.ಪಿ.ವಿ.ಶ್ರೀಧರಮೂರ್ತಿ ಮಾತನಾಡಿ, ವೀರವನಿತೆ ಒನಕೆ ಓಬವ್ವ ಜಯಂತಿ ವಿಜೃಂಭಣೆಯಿಂದ ಆಚರಿಸೋಣ. ಜನಾಂಗದ ಎಲ್ಲರ ಸಹಕಾರ ಅತಿ ಮುಖ್ಯ ಎಂದು ಹೇಳಿದರು.

    ಕ್ಲಿಕ್ ಮಾಡಿ ಓದಿ: Government; ಸರ್ಕಾರ ಬದಲಾದರೆ ಸಚಿವ ಸ್ಥಾನ‌ ನೋಡೋಣ | ಬಿ.ಜಿ.ಗೋವಿಂದಪ್ಪ

    ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ್ ಮಾತನಾಡಿ, ಮುಂದಿನ ಪೀಳಿಗೆಗೆ ಓಬವ್ವ ಸಾಹಸವನ್ನು ತಿಳಿಸುವುದರ ಜೊತೆಗೆ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕಿದೆ.

    ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಗಳಿಸಿರುವ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಜನಾಂಗದ ಇತರೆ ಮಕ್ಕಳನ್ನು ಉತ್ತೇಜಿಸಿದಂತಾಗುತ್ತದೆ. ಒನಕೆ ಓಬವ್ವ ಜಯಂತಿ

    ಹೋರಾಟ, ಸಂಘಟನೆ ಮೂಲಕ ಸರ್ಕಾರದಿಂದ ಸಿಗುವ ಸೌಲತ್ತುಗಳನ್ನು ಪಡೆದುಕೊಂಡು ಮಕ್ಕಳನ್ನು ವಿದ್ಯಾವವಂತರನ್ನಾಗಿ ಮಾಡಬೇಕಿದೆ ಎಂದು ತಿಳಿಸಿದರು.

    ಭಾರ್ಗವಿ ದ್ರಾವಿಡ್ ಮಾತನಾಡಿ, ಒನಕೆ ಓಬವ್ವ ಜಯಂತಿಯನ್ನು ಹಬ್ಬದ ರೀತಿಯಲ್ಲಿ ಆಚರಿಸೋಣ. ಛಲವಾದಿ ಜನಾಂಗದವರು ಕುಟುಂಬ ಸಮೇತ ಜಯಂತಿಯಲ್ಲಿ ಪಾಲ್ಗೊಂಡು ಚಿತ್ರದುರ್ಗದಲ್ಲಿ ಓಬವ್ವಳನ್ನು ಸ್ಮರಿಸಿಕೊಳ್ಳುವಂತಾಗಬೇಕೆಂದು ಹೇಳಿದರು.

    ಕ್ಲಿಕ್ ಮಾಡಿ ಓದಿ: BG Govindappa; ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಜನ್ಮದಿನಾಚರಣೆ | ಪತ್ನಿಯೊಂದಿಗೆ ನಾಯಕನಹಟ್ಟಿಗೆ ಭೇಟಿ

    ಸಭೆಯಲ್ಲಿ ಶಾರದಾ ಬ್ರಾಸ್‍ಬ್ಯಾಂಡ್‍ನ ಗುರುಮೂರ್ತಿ, ಎಸ್.ಎನ್.ರವಿಕುಮಾರ್, ಶಿಕ್ಷಣ ಇಲಾಖೆಯ ನಾಗರಾಜ್, ಹೆಚ್.ಅಣ್ಣಪ್ಪಸ್ವಾಮಿ, ದಯಾನಂದ್, ಚನ್ನಬಸಪ್ಪ ಮುಸ್ಟೂರು, ಮಂಜಣ್ಣ, ಜಯರಾಂ ಕೆ. ಶಶಾಂಕ್, ರಂಗಸ್ವಾಮಿ ಚಿಕ್ಕಪುರ, ರಾಮಲಿಂಗಪ್ಪ, ಪರಮೇಶ್ ಪೂಜಾರ್, ಮಂಜುನಾಥ್, ಜಯಣ್ಣ, ನಾಗರಾಜ್ ಪೈಲೆಟ್, ಉಮಾಶಂಕರ್ ಸೇರಿದಂತೆ ಛಲವಾದಿ ಸಮುದಾಯದವರು ಭಾಗವಹಿಸಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top