Connect with us

ಜಗದ್ಗುರು ಮುರುಘರಾಜೇಂದ್ರ ಶ್ರೀ ಹೆಸರಿನಲ್ಲಿ ನೂತನ ಸರ್ಕಲ್ ಅನಾವರಣ

MURUGHARAJENDRA CIRCLE

ಮುಖ್ಯ ಸುದ್ದಿ

ಜಗದ್ಗುರು ಮುರುಘರಾಜೇಂದ್ರ ಶ್ರೀ ಹೆಸರಿನಲ್ಲಿ ನೂತನ ಸರ್ಕಲ್ ಅನಾವರಣ

CHITRADURGA NEWS | 26 FEBRUARY 2025

ಚಿತ್ರದುರ್ಗ: ನಗರದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ದಾವಣಗೆರೆ ಕಡೆಯಿಂದ ಚಿತ್ರದುರ್ಗ ಪ್ರವೇಶಿಸುವ ಜೆಎಂಐಟಿ ಮುಂಭಾಗದ ವೃತ್ತಕ್ಕೆ ಬುಧವಾರ ಜಗದ್ಗುರು ಮುರುಘರಾಜೇಂದ್ರ ವೃತ್ತ ಎಂದು ನಾಮಕರಣ ಮಾಡಿ, ಫಲಕ ಅನಾವರಣ ಮಾಡಲಾಯಿತು.

ನಗರದ ವೀರಶೈವ ಸಮಾಜದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುರುಘಾ ಂಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ನಾಮಫಲಕ ಅನಾವರಣಗೊಳಿಸಿದರು.

ಇದನ್ನೂ ಓದಿ: ಮೆದೇಹಳ್ಳಿ ಅಂಡರ್‍ಪಾಸ್ ಇನ್ನುಮುಂದೆ ಜಯದೇವ ವೃತ್ತ(ಸರ್ಕಲ್)

ಈ ವೇಳೆ ಮಾತನಾಡಿದ ಶ್ರೀಗಳು, ಸತ್ಕಾರ್ಯಗಳನ್ನು ಮಾಡುವುದು ನಮ್ಮ ಸಂಸ್ಕøತಿ. ಇಂತಹ ಸತ್ಕಾರ್ಯದಿಂದ ಅವರಿಗೆ ಮುರುಘೇಶ ಒಳ್ಳೆಯದನ್ನು ಮಾಡುತ್ತಾನೆ. ಜಯದೇವ ಶ್ರೀಗಳು ಶಿಕ್ಷಣ, ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದರು. ಶ್ರೀಮಠದ ಬೆಳವಣಿಗೆಗೆ ಅಪಾರ ಕೊಡುಗೆ ಅವರದು ಎಂದು ಸ್ಮರಿಸಿದರು.

ನಾಮಫಲಕ ಉದ್ಘಾಟನೆಯಾಗಿರುವುದು ಸಂತಸ ತಂದಿದೆ. ಉತ್ತರ ಕರ್ನಾಟಕದಲ್ಲಿ ವೃತ್ತಗಳೆಂದರೆ ದೇವರ ಸಮಾನ. ಈ ಜಾಗದಲ್ಲಿ ಸುಂದರವಾದ ಉದ್ಯಾನ ಅನಾವರಣಗೊಳ್ಳಲಿ. ಇಲ್ಲಿ ನಿರ್ಮಿಸವ ಪುತ್ಥಳಿಯ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿಯನ್ನು ವೀರಶೈವ ಸಮಾಜವು ತೆಗೆದುಕೊಳ್ಳಬೇಕು. ಶ್ರೀ ಜಯವಿಭವ ಶ್ರೀಗಳ ಜಯಂತಿಯ ದಿನ ಅಂದರೆ ಮೇ ತಿಂಗಳಲ್ಲಿ ಪುತ್ಥಳಿಯ ಉದ್ಘಾಟನೆ ಆಗಬೇಕು. ಈ ಕಾರ್ಯಕ್ಕೆ ಶ್ರೀಮಠವೂ ಸಹ ಕೈಜೋಡಿಸುತ್ತದೆ ಎಂದರು.

ಇದನ್ನೂ ಓದಿ: ಜಿಲ್ಲೆಯಲ್ಲಿ ಖಾಲಿ ಇರುವ ವೈದ್ಯರ ಹುದ್ದೆಗೆ ಕ್ರಮವಹಿಸಿ | ಸಂಸದ ಗೋವಿಂದ ಕಾರಜೋಳ 

ಸಮಾಜದ ಅಧ್ಯಕ್ಷ ಎಸ್‍ಎಂಎಲ್ ತಿಪ್ಪೇಸ್ವಾಮಿ ಮಾತನಾಡಿ, ಮುಂದಿನ ದಿನಗಳಲ್ಲಿ ಪ್ರತಿಮೆ ನಿರ್ಮಾಣ ಮಾಡಿ, ಒಂದು ಸುಂದರವಾದ ವೃತ್ತವನ್ನು ಮಾಡಲು ನಮ್ಮ ಸಮಾಜ ಸಹಕಾರ ನೀಡುತ್ತದೆ ಎಂದರು.

ಉದ್ಯಮಿ ಪಟೇಲ್ ಶಿವಕುಮಾರ್ ಮಾತನಾಡಿ, ಸಮಾಜ ಬಾಂಧವರು ಒಂದಾಗಬೇಕು. ಇಂಥ ಕಾರ್ಯಕ್ರಮಗಳನ್ನು ಒಗ್ಗಟ್ಟಾಗಿ ಅದ್ಧೂರಿಯಿಂದ ಆಚರಿಸುವಂತಾಗಬೇಕು. ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ಕೆಲವು ಸಂದರ್ಭಗಳಲ್ಲಿ ಒಳ್ಳೆಯ ಕೆಲಸ ಮಾಡುವವರಿಗೆ ಬೆನ್ನೆಲುಬಾಗಿ ನಿಲ್ಲಬೇಕು. ಈ ವೃತ್ತದಲ್ಲಿ ಜಯದೇವ ಶ್ರೀಗಳವರ ಪ್ರತಿಮೆ ಸ್ಥಾಪಿಸುವ ಕಾರ್ಯಕ್ಕೆ ಧನಸಹಾಯ ನೀಡುವುದಾಗಿ ತಿಳಿಸಿದರು.

ಇದನ್ನೂ ಓದಿ: ABVPಯಿಂದ ಅರಳುವ ಪ್ರತಿಭೆ ರಾಜ್ಯಮಟ್ಟದ ಬರಹಗಾರರ ಸಮಾವೇಶ

ಮುಖಂಡರಾದ ಕೆಇಬಿ ಷಣ್ಮುಖಪ್ಪ, ಪತ್ರಕರ್ತ ಜಿ.ಎಸ್. ಉಜ್ಜಿನಪ್ಪ, ನಗರಸಭೆ ಸದಸ್ಯ ಸುರೇಶ್ ಮಾತನಾಡಿದರು. ಗುರುಸಿದ್ದಪ್ಪ, ವೀರೇಂದ್ರ, ವೀರಭದ್ರಪ್ಪ ಮತ್ತಿತರರಿದ್ದರು.

ವೀರಶೈವ ಸಮಾಜದ ನಿರ್ದೇಶಕರಾದ ಎಸ್.ವಿ.ನಾಗರಾಜಪ್ಪ, ಖಜಾಂಚಿ ತಿಪ್ಪೇಸ್ವಾಮಿ, ದೇವಿಕುಮಾರಿ, ಡಿ.ಎಸ್.ಮಲ್ಲಿಕಾರ್ಜುನ್, ದಾಳಿಂಬೆ ಮಂಜುನಾಥ್, ಜಯಪ್ಪ, ಸಿದ್ಧಣ್ಣ, ಎಸ್.ವಿ.ಕೊಟ್ರೇಶ್, ಮುರುಗೇಶ್, ಮಾಜಿ ಅಧ್ಯಕ್ಷ ಟಿಎಸ್‍ಎನ್ ಜಯಣ್ಣ, ಮಹಡಿ ಶಿವಮೂರ್ತಿ, ಎನ್.ಬಿ.ವಿಶ್ವನಾಥ್, ಉಮೇಶ್, ಸಿದ್ಧವ್ವನಹಳ್ಳಿ ಪರಮೇಶ್, ನಿರಂಜನ ದೇವರಮನೆ, ಅನಿತಾ ಮುರುಘೇಶ್, ನಿರ್ಮಲಾ ಬಸವರಾಜ್, ರೀನಾ ವೀರಭದ್ರಪ್ಪ, ನಾಗರಾಜ ಸಂಗಮ್ ಮತ್ತಿತರರಿದ್ದರು.

ಇದನ್ನೂ ಓದಿ:  ತಹಶೀಲ್ದಾರ್ ಡಾ.ನಾಗವೇಣಿ ವರ್ಗಾವಣೆ | ಚಿತ್ರದುರ್ಗಕ್ಕೆ ನೂತನ ತಹಶೀಲ್ದಾರ್

ನಿವೃತ್ತ ಪ್ರಾಚಾರ್ಯ ಎಸ್.ಷಡಾಕ್ಷರಯ್ಯ ಕಾರ್ಯಕ್ರಮ ನಿರೂಪಿಸಿದರು. ಪಿ. ವೀರೇಂದ್ರಕುಮಾರ್ ವಂದಿಸಿದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version