ಮುಖ್ಯ ಸುದ್ದಿ
Jayadeva Circle: ಮೆದೇಹಳ್ಳಿ ಅಂಡರ್‍ಪಾಸ್ ಇನ್ನುಮುಂದೆ ಜಯದೇವ ವೃತ್ತ(ಸರ್ಕಲ್)
CHITRADURGA NEWS | 22 DECEMBER 2024
ಚಿತ್ರದುರ್ಗ: ನಗರದ ಮೆದೇಹಳ್ಳಿ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಸ್ಥಳದಲ್ಲಿ ಸೃಷ್ಟಿಯಾಗಿರುವ ವೃತ್ತಕ್ಕೆ ಜಗದ್ಗುರು ಶ್ರೀ ಜಯದೇವ ವೃತ್ತ ಎಂದು ನಾಮಕರಣ ಮಾಡಲಾಗಿದೆ.
ಜಯದೇವ ಶ್ರೀಗಳ 150ನೇ ಜಯಂತ್ಯುತ್ಸವದ ಹಿನ್ನೆಲೆಯಲ್ಲಿ ಈ ವೃತ್ತಕ್ಕೆ ಜಯದೇವ ಶ್ರೀಗಳ ಹೆಸರನ್ನು ನಾಮಕರಣ ಮಾಡಲಾಗಿದೆ.
ಇದನ್ನೂ ಓದಿ; ವಾಣಿವಿಲಾಸ ಸಾಗರದಲ್ಲಿ 29.74 ಟಿಎಂಸಿ ನೀರು ಜಮಾವಣೆ
ಜಿಲ್ಲಾ ಬೇಡ ಜಂಗಮ ಸಮಾಜ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ವೃತ್ತ ನಾಮಕರಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಹೆಬ್ಬಾಳ ವಿರಕ್ತಮಠದ ಶ್ರೀ ರುದ್ರೇಶ್ವರ ಸ್ವಾಮೀಜಿ ಮಾತನಾಡುತ್ತಾ, ನಾಡಿನಲ್ಲಿ ತ್ರಿವಿಧ ದಾಸೋಹ ಮಾಡುವ ಮೂಲಕ ಜನರನ್ನು ಸನ್ಮಾರ್ಗದಲ್ಲಿ ಕರೆದೊಯ್ದ ಕೀರ್ತಿ ಜಯದೇವ ಶ್ರೀಗಳಿಗೆ ಸಲ್ಲುತ್ತದೆ ಎಂದು ಅಭಿಪ್ರಾಯಪಟ್ಟರು.
ಹಿಂದಿನ ಕಾಲದಲ್ಲಿ ಶಿಕ್ಷಣ ಇಲ್ಲದೆ ಜನತೆ ಪರದಾಡುತ್ತಿದ್ದಾಗ ನಾಡಿನ ಎಲ್ಲಡೆ ಶಾಲೆಗಳನ್ನು ತೆರೆಯುವುದರ ಮೂಲಕ ಅನ್ನದಾನ, ವಿದ್ಯಾದಾನ ಹಾಗೂ ಧರ್ಮದ ಬಗ್ಗೆ ತಿಳಿಸುವ ಕಾರ್ಯವನ್ನು ಜಯದೇವ ಶ್ರೀಗಳು ಮಾಡಿದ್ದರು ಎಂದು ಸ್ಮರಿಸಿದರು.
ಇದನ್ನೂ ಓದಿ; ಕೊಲೆ ಆರೋಪಿಗಳ ಬಂಧನ | ಪೊಲೀಸರ ಭರ್ಜರಿ ಕಾರ್ಯಾಚರಣೆ
ಶ್ರೀಗಳು ಉದಾರವಾದ ಮನಸ್ಸುನ್ನು ಹೊಂದಿದವರಾಗಿದ್ದರು ಕಷ್ಠ ಎಂದು ಬಂಧವರಿಗೆ ಸಹಾಯವನ್ನು ಮಾಡುವುದರ ಮೂಲಕ ಕೊಡುಗೈ ದಾನಿಗಳು ಎಂದು ಹೆಸರನ್ನು ಪಡೆದಿದ್ದರು. ಅವರ ಬದುಕು ಜೀವನ ಬೇರೆಯವರಿಗೆ ಅದರ್ಶವಾಗಿತ್ತು.
ಯಾವುದೇ ಜಾತಿ, ಬೇಧ ಎನ್ನುವ ತಾರತಮ್ಯ ಇಲ್ಲದೆ ಎಲ್ಲರಿಗೂ ಅನ್ನದಾನ, ವಿದ್ಯಾದಾನ ಮಾಡಿದ ಕೀರ್ತಿ ಹಾಗೂ ಶ್ರೇಯಸ್ಸು ಜಯದೇವ ಶ್ರೀಗಳಿಗೆ ಸಲ್ಲುತ್ತದೆ.
ಇದನ್ನೂ ಓದಿ; ಡಿ.25 ರಂದು ಹೊಳಲ್ಕೆರೆಯಲ್ಲಿ ನೂತನ ವಿಕಾಸ ಸೌಧ ಉದ್ಘಾಟನೆ | ಶಾಸಕ ಎಂ.ಚಂದ್ರಪ್ಪ
ಮಠದ ಕೆರೆಯ ಮುಂಭಾಗದ ಕರೆಯಲ್ಲಿ ಜಯದೇವ ಶ್ರೀಗಳ ವಿಗ್ರಹ ನಿರ್ಮಿಸಿ ಕೆರೆಯನ್ನು ಸುಂದರ ಪ್ರವಾಸಿ ತಾಣವನ್ನಾಗಿ ರೂಪಿಸಬೇಕು ಎಂದು ಶ್ರೀಗಳು ತಿಳಿಸಿದರು.
ದಾವಣಗೆರೆ ವಿರಕ್ತ ಮಠದ ಡಾ.ಬಸವಪ್ರಭು ಸ್ವಾಮೀಜಿ ಮಾತನಾಡಿ, ಇಂದು ಎಲ್ಲವೂ ಸಹಾ ಸುಲಭವಾಗಿ ಸಿಗುತ್ತದೆ. ಆದರೆ ಜಯದೇವ ಶ್ರೀಗಳು ಇದ್ದ ಕಾಲದಲ್ಲಿ ಏನು ಇರಲಿಲ್ಲ. ಇಂದಿನಂತೆ ಕಾರು, ಬಸ್ಸು ವಿಮಾನ, ಮೊಬೈಲ್ ಇರಲಿಲ್ಲ ಎಲ್ಲೆ ಹೋದರು ನಡೆದು ಅಥವಾ ಎತ್ತಿನ ಗಾಡಿ ಅಥವಾ ಕುದುರೆ ಗಾಡಿಯ ಮೇಲೆ ಹೋಗಬೇಕಿತ್ತು ಇಂತಹ ಸಮಯದಲ್ಲಿ ಜಯದೇವ ಶ್ರೀಗಳು ನಾಡನ್ನು ಸುತ್ತುವುದರ ಮೂಲಕ ಸಮಾಜವನ್ನು ಕಟ್ಟಿದ್ದಾರೆ.
ಇದನ್ನೂ ಓದಿ; ಜಿಲ್ಲಾ ಆಸ್ಪತ್ರೆಗೆ ನ್ಯಾಯಾಧೀಶರ ದಿಢೀರ್ ಭೇಟಿ | ರೋಗಿಗಳ ಜೊತೆ ಮಾತುಕತೆ
ನಾಡಿನ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ಮೂಲಕ ಬಡ ಮಕ್ಕಳಿಗೆ ಶಿಕ್ಷಣ ದೊರೆಯುವಂತೆ ಮಾಡಿದ್ದಾರೆ ಎಂದು ಸ್ಮರಿಸಿದರು.
53 ವರ್ಷ ಮುರುಘಾ ಮಠದ ಪೀಠಾಧೀಪತಿಗಳಾಗಿ ಉತ್ತಮ ಕೆಲಸ ಮಾಡಿದ್ದಾರೆ. ಶ್ರೀಗಳಿದ್ದ ಕಾಲವನ್ನು ಮಠದ ಸುವರ್ಣ ಯುಗ ಎಂದು ಕರೆಯಲಾಗುತ್ತದೆ. ಶ್ರೀಗಳು ಪೀಠಾಧ್ಯಕ್ಷರಾಗಿದ್ದ ಸಮಯದಲ್ಲಿ ಮುರುಘಾ ಮಠ ಸಾಲದಲ್ಲಿ ಇತ್ತು ಅದನ್ನು ಪೀಠಾಧ್ಯಕ್ಷರಾಗಿ ಸಾಲ ತೀರಿಸುವುದರ ಮೂಲಕ ಮಠವನ್ನು ನವ ಕೋಟಿ ನಾರಾಯಣ ಎಂಬಂತೆ ಮಾಡಿದರು.
ಕಾರ್ಯಕ್ರಮದಲ್ಲಿ ಸಂಸದ ಗೋವಿಂದ ಕಾರಜೋಳ, ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ), ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಮಾಜಿ ಶಾಸಕ ಎಸ್.ಕೆ.ಬಸವರಾಜನ್, ನಗರಸಭೆ ಅಧ್ಯಕ್ಷೆ ಸುಮಿತಾ ರಘು, ಉಪಾಧ್ಯಕ್ಷೆ ಶ್ರೀದೇವಿ ಚಕ್ರವರ್ತಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಆಯುಕ್ತ ಎಂ.ಎಸ್.ಸೋಮಶೇಖರ್, ಜಿಲ್ಲಾ ಬೇಡ ಜಂಗಮ ಸಮಾಜ ಸಂಸ್ಥೆಯ ಅಧ್ಯಕ್ಷ ಸೋಮಶೇಖರ್ ಮಂಡಿಮಠ್, ನಗರಸಭೆ ಸದಸ್ಯ ಕೆ.ಬಿ.ಸುರೇಶ್, ವೀರಶೈವ ಮಹಾಸಭಾ ಅಧ್ಯಕ್ಷ ಮಹಡಿ ಶಿವಮೂರ್ತಿ, ವೀರಶೈವ ಸಮಾಜದ ಅಧ್ಯಕ್ಷ ಹೆಚ್.ಎನ್.ತಿಪ್ಪೇಸ್ವಾಮಿ, ಮುಖಂಡರಾದ ಎಂ.ಟಿ.ಮಲ್ಲಿಕಾರ್ಜನ್, ಜ್ಞಾನಮೂರ್ತಿ, ವಿಜಯಕುಮಾರ್, ಎಸ್.ಷಣ್ಮುಖಪ್ಪ, ಶರಣಯ್ಯ, ಡಾ.ಕೆ.ಎಂ.ವೀರೇಶ್ ಮತ್ತಿತರರಿದ್ದರು.