ಮುಖ್ಯ ಸುದ್ದಿ
Jayadeva Jagadguru: ಜಯದೇವ ಜಗದ್ಗುರು ತೋರಿದ ಹಾದಿಯಲ್ಲಿ ಸಾಗೋಣ | ಡಾ. ಬಸವಕುಮಾರ ಸ್ವಾಮೀಜಿ
CHITRADURGA NEWS | 28 SEPTEMBER 2024
ಚಿತ್ರದುರ್ಗ: ಶರಣು ಎಂದರೆ ಮರಣವಿಲ್ಲ. ನಮ್ಮ ಆಲೋಚನೆಗಳೆ ಆಧ್ಯಾತ್ಮ. ಜಯದೇವ ಜಗದ್ಗುರಗಳ ಆಲೋಚನೆ ಬಹಳ ದೊಡ್ಡದು ಎಂದು ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ತಿಳಿಸಿದರು.
ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಶ್ರೀ ಜಗದ್ಗುರು ಮುರುಘಾರಾಜೇಂದ್ರ ಮಠದಲ್ಲಿ ಶನಿವಾರ ದೇಹದ ಆರೋಗ್ಯಕ್ಕೆ ಮನೆಯಲ್ಲೇ ಶುದ್ದೀಕರಣ ಮಾಡುವ ವಿಧಾನ ಕುರಿತಾದ ಪ್ರವಚನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಶ್ರೀಗಳು ಮಾತನಾಡಿದರು.
ಕ್ಲಿಕ್ ಮಾಡಿ ಓದಿ: ಶೋಭಾಯಾತ್ರೆಯಲ್ಲಿ ಖಾಕಿ ಪಡೆ ಹೈ ಆಲರ್ಟ್ | ಪ್ರಮುಖ ಸ್ಥಳಗಳಲ್ಲಿ ಡಾಗ್ ಸ್ಕ್ವಾಡ್ ಪಹರೆ
ಆಡು ಮುಟ್ಟದ ಸೊಪ್ಪಿಲ್ಲ, ಜಯದೇವ ಜಗದ್ಗುರುಗಳು ಮಾಡದ ಕೆಲಸವಿಲ್ಲ. ನಾವೆಲ್ಲ ಅವರು ಸಾಧಿಸಿ ತೋರಿದ ದಾರಿಯಲ್ಲಿ ಸಾಗುತ್ತ ಸತ್ಕಾರ್ಯ, ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಯೋಗ ಗುರರುಗಳಾದ ವೈದ್ಯಶ್ರೀ ಚನ್ನಬಸವಣ್ಣ ಮಾತನಾಡಿ, ಪ್ರಸ್ತುತ ಜೀವನದಲ್ಲಿ ಆಹಾರ ಪದ್ಧತಿ ನಮ್ಮ ಪೂರ್ವಿಕರು ಸೇವಿಸುತ್ತಿದ್ದ ಆಹಾರ ಪದ್ಧತಿಗಳ ಬಗ್ಗೆ ತಿಳಿಸುತ್ತ, ಇಂದಿನ ದಿನಮಾನಗಳಲ್ಲಿ ಹೊಸಹೊಸ ಕಾಯಿಲೆ ಬರಲು ಮುಖ್ಯ ಕಾರಣ ಆಹಾರ ಪದ್ಧತಿ ಎಂಬದನ್ನು ಮನವರಿಕೆ ಮಾಡಿದರು.
ಕ್ಲಿಕ್ ಮಾಡಿ ಓದಿ: ಶೋಭಾಯಾತ್ರೆಯಲ್ಲಿ ನಟರ ಫ್ಯಾನ್ಸ್‌ಗಳ ಅಬ್ಬರ | ರಾರಾಜಿಸುತ್ತಿವೆ ಕೇಸರಿ ಬಾವುಟ
ಪ್ರಕೃತಿಯಿಂದ ದೇಹ ರಚನೆಯಾಗಿದೆ, ದೇಹಶುದ್ಧಿಗೆ ಮದ್ದು ಶಿವಯೋಗ. ಮನಸ್ಸು ಪ್ರಸನ್ನವಾದರೆ ಮಾತ್ರ ಊಟ ರುಚಿಸುತ್ತದೆ. ನಮ್ಮ ಶರೀರದ ಕ್ರಿಯಾಶಕ್ತಿ ಹಾಳಾಗಲು ಆಧುನಿಕ ಆಹಾರ ಪದ್ಧತಿ, ವಾತ, ಪಿತ್ತ, ಕಫಾ, ಸ್ಥೂಲಕಾಯ ಹೀಗೆ ನಾನಾ ಕಾಯಿಲೆಗಳಿಂದ ಯಾವ ರೀತಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂಬುದರ ಬಗ್ಗೆ ತಿಳಿ ಹೇಳಿದರು.
ಕಾರ್ಯಕ್ರಮದಲ್ಲಿ ಬಸವ ಟಿವಿ ಮುಖ್ಯಸ್ಥ ಕೃಷ್ಣಪ್ಪ, ಬಸವೇಶ್ವರ ಆಸ್ಪತ್ರೆಯ ಮುಖ್ಯಸ್ಥರು, ಸಿಬ್ಬಂದಿ ವರ್ಗ ದವರು ಮತ್ತು ಶರಣ ಶರಣೆಯರು ಭಾಗವಹಿಸಿದ್ದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ಸಿದ್ದಗಂಗಮ್ಮ ಸ್ವಾಗತಿಸಿದರು.