ಮುಖ್ಯ ಸುದ್ದಿ
ಡಿ.25 ರಂದು ಹೊಳಲ್ಕೆರೆಯಲ್ಲಿ ನೂತನ ವಿಕಾಸ ಸೌಧ ಉದ್ಘಾಟನೆ | ಶಾಸಕ ಎಂ.ಚಂದ್ರಪ್ಪ
CHITRADURGA NEWS | 21 DECEMBER 2024
ಚಿತ್ರದುರ್ಗ: ಹೊಳಲ್ಕೆರೆ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ನ ವಿಕಾಸ ಸೌಧದ ಉದ್ಘಾಟನೆ ಹಾಗೂ ಸ್ವಸಹಾಯ ಸಂಘಗಳಿಗೆ ಲಾಭಾಂಶ ವಿತರಣಾ ಸಮಾರಂಭ ಡಿ.25 ಬುಧವಾರ ನಡೆಯಲಿದೆ ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದರು.
ಕ್ಲಿಕ್ ಮಾಡಿ ಓದಿ: ಹೊಳಲ್ಕೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಹೆಚ್ಚಳ
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪುರಸಭೆಯವತಿಯಿಂದ ಧರ್ಮಸ್ಥಳ ಸಂಸ್ಥೆಗೆ ಜಾಗ ನೀಡಲಾಗಿತ್ತು. ಇದರಲ್ಲಿ ಸರ್ಕಾರದ ಸಹಾಯಧನ ಇಲ್ಲದೆ, ಸ್ವಂತ ಹಣದಲ್ಲಿ ಕಟ್ಟಡ ನಿರ್ಮಾಣ ಮಾಡಿದ್ದಾರೆ ಎಂದರು.
ಹೊಳಲ್ಕೆರೆಯಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 4518 ಸ್ವಸಹಾಯ ಸಂಘಗಳನ್ನು ರಚನೆ ಮಾಡಿ, ಇದರಲ್ಲಿ 40265 ಜನರನ್ನು ಸದಸ್ಯರನ್ನು ಮಾಡಿಕೊಂಡಿದ್ದಾರೆ. ಇವರ ಉಳಿತಾಯ ಈವರೆಗೆ 24.46 ಕೋಟಿ ಆಗಿದೆ. ಉತ್ತಮ ನಿರ್ವಹಣೆ ಮಾಡಿದ ಸಂಘಗಳಿಗೆ ಬ್ಯಾಂಕುಗಳಿಂದ 204.16 ಕೋಟಿ ರೂ. ಸಾಲ ಕೊಡಿಸಲಾಗಿದೆ. ಉತ್ತಮ ಆರ್ಥಿಕ ವ್ಯವಹಾರ ನಡೆಸಿದ ಸಂಘಗಳಿಗೆ ಲಾಭಾಂಶ ವಿತರಣೆ ಮಾಡಲಗುತ್ತಿದ್ದು, ಈಗ ಮೂರನೇ ಸಲ ಲಾಭಾಂಶ ವಿತರಿಸಲಾಗುತ್ತಿದೆ ಎಂದು ವಿವರಿಸಿದರು.
2703 ಸಂಘಗಳಿಗೆ 11 ಕೋಟಿ ರೂ.ಗಳನ್ನು ವಿತರಣೆ ಮಾಡಲಾಗುತ್ತಿದೆ. ಇದರೊಂದಿಗೆ ಸಂಘದ ಸದಸ್ಯರ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ 1788 ವಿದ್ಯಾರ್ಥಿಗಳಿಗೆ 1.60 ಕೋಟಿ ಶಿಷ್ಯ ವೇತನವನ್ನು ನೀಡಲಾಗಿದೆ. 5 ಬಡ ಕುಟುಂಬಗಳಿಗೆ ವಾತ್ಸಾಲ್ಯ ಮನೆ ಯೋಜನೆಯಡಿ ಮನೆಗಳನ್ನು ನಿರ್ಮಾಣ ಮಾಡಿ ಕೊಡಲಾಗಿದೆ.
ಕ್ಲಿಕ್ ಮಾಡಿ ಓದಿ: ಜಿಲ್ಲಾ ಆಸ್ಪತ್ರೆಗೆ ನ್ಯಾಯಾಧೀಶರ ದಿಢೀರ್ ಭೇಟಿ | ರೋಗಿಗಳ ಜೊತೆ ಮಾತುಕತೆ
75 ಜನರಿಗೆ ತಲಾ ಮಾಸಿಕವಾಗಿ 1 ಸಾವಿರ ರೂ.ಗಳನ್ನು ದುರ್ಬಲ ವರ್ಗದವರಿಗೆ ನೀಡಲಾಗುತ್ತಿದೆ. 239 ವಿಕಲ ಚೇತನರಿಗೆ ಅಗತ್ಯ ಉಪಕರಣಗಳನ್ನು ನೀಡಲಾಗಿದೆ. ತಾಲ್ಲೂಕಿನಲ್ಲಿ 8 ಕೆರೆಗಳಲ್ಲಿ 55.99 ಲಕ್ಷ ರೂ. ವೆಚ್ಚದಲ್ಲಿ ಹೂಳು ತೆಗೆಯಲಾಗಿದೆ ಎಂದರು.
ಡಿ.25 ಬುಧವಾರ ನಡೆಯುವ ಕಾರ್ಯಕ್ರಮಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಆಗಮಿಸಲಿದ್ದು, ವಿಕಾಸ ಸೌಧ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಲಾಭಾಂಶ ಪಡೆದ ಸ್ವ-ಸಹಾಯ ಸಂಘಗಳಿಗೆ ವಿತರಣೆ ಮಾಡುವರು.
ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದ ಪುನಶ್ವೇತನಗೊಂಡ ಕೆರೆಯ ಹಸ್ತಾಂತರ ಪ್ರಮಾಣ ಪತ್ರ ವಿತರಣೆಯನ್ನು ಸಂಸದ ಗೋವಿಂದ ಕಾರಜೋಳ ಕೆರೆ ಸಮಿತಿಯವರಿಗೆ ಹಸ್ತಾಂತರಿಸುವರು. ನಿರಾಶ್ರಿತ ಕುಟುಂಬಕ್ಕೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ವಾತ್ಸಲ್ಯ ಮನೆ ನಿರ್ಮಾಣವಾಗಿದ್ದು ಇದರ ಹಸ್ತಾಂತರವನ್ನು ಮಾಡಲಿದ್ದಾರೆ ಎಂದರು.
ಕ್ಲಿಕ್ ಮಾಡಿ ಓದಿ: ಇಂಡಿಯನ್ ಇಂಟರ್ನ್ಯಾಷನಲ್ ಶಾಲೆ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ | ಶಾಸಕ ಚಂದ್ರಪ್ಪ ಅಭಿನಂದನೆ
ವಿದ್ಯಾರ್ಥಿಗಳಿಗೆ ಕ್ಷೇತ್ರದ ಮೂಲಕ ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣೆಯನ್ನು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ವಿತರಿಸುವರು.
ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಎಸ್.ಅನಿಲ್‌ಕುಮಾರ್ ಭಾಗವಹಿಸುವರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಪುರಸಭೆಯ ಅಧ್ಯಕ್ಷ ವಿಜಯಸಿಂಹ ಖಾಟ್ರೋತ್, ಉಪಾಧ್ಯಕ್ಷೆ ನಾಗರತ್ನ, ಬ್ರಹ್ಮಕುಮಾರಿ ಸುಮಿತ್ರಕ್ಕ ಸೇರಿದಂತೆ ಪುರಸಭೆಯ ಸದಸ್ಯರು ಭಾಗವಹಿಸಲಿದ್ದಾರೆ.
ಕ್ಲಿಕ್ ಮಾಡಿ ಓದಿ: ಸಿ.ಟಿ.ರವಿ ವಿರುದ್ಧ ಚಿತ್ರದುರ್ಗದ ಲಕ್ಷ್ಮೀ ಹೆಬ್ಬಾಳ್ಕರ್ ಅಭಿಮಾನಿಗಳ ಪ್ರತಿಭಟನೆ | ಪಂಚಮಸಾಲಿ ಸಮಾಜದ ಅಧ್ಯಕ್ಷ ಹೆಚ್.ಎಂ.ಮಂಜುನಾಥ್ ವಾಗ್ದಾಳಿ
ಸುದ್ದಿಗೋಷ್ಠಿಯಲ್ಲಿ ಯೋಜನೆಯ ಜಿಲ್ಲಾ ನಿರ್ದೇಶಕದಿನೇಶ್ ಪೂಜಾರ್, ಯೋಜನಾಧಿಕಾರಿ ಸುರೇಂದ್ರ ಆಚಾರ್, ಪ್ರಭಾಕರ್ ವಸಂತ್, ಮುಖಂಡರಾದ ರುದ್ರಪ್ಪ, ಪುರಸಭೆಯ ಮಾಜಿ ಅಧ್ಯಕ್ಷ ಅಶೋಕ್, ಗ್ರಾಪಂ ಮಾಜಿ ಅಧ್ಯಕ್ಷ ಡಿ.ಸಿ.ಮೋಹನ್, ರಮೇಶ್ ಗೌಡ್ರ ದುಮ್ಮಿ, ಸರಸ್ವತಿ, ಅಶೋಕ್ ಗಂಗಾಧರಪ್ಪ, ದೇವರಾಜ್ ಸಾಸಲು ಮತ್ತಿತರರಿದ್ದರು.