ಮುಖ್ಯ ಸುದ್ದಿ
ಮುರುಗಿ ಶಾಂತವೀರ ಸ್ವಾಮಿಗಳ ಹೊಸ ಕಂಚಿನ ಪ್ರತಿಮೆ ಅನಾವರಣ

ಚಿತ್ರದುರ್ಗ ನ್ಯೂಸ್.ಕಾಂ: ಮಧ್ಯ ಕರ್ನಾಟಕದ ದಸರ ಎಂದೇ ಹೆಸರಾಗಿರುವ ಚಿತ್ರದುರ್ಗ ಮುರುಘಾ ಮಠದ ಶರಣ ಸಂಸ್ಕøತಿ ಉತ್ಸವ ನಿಧಾನವಾಗಿ ಕಳೆಗಟ್ಟಿದೆ.
ಮುರುಘಾ ಶರಣರ ಪ್ರಕರಣದ ನಂತರ ಮಠದಲ್ಲಿ ಅಷ್ಟಾಗಿ ಚಟುವಟಿಕೆಗಳು ಕಾಣಿಸುತ್ತಿರಲಿಲ್ಲ. ಶರಣ ಸಂಸ್ಕøತಿ ಉತ್ಸವ ನಡೆದರೂ ಹೇಗೆ ನಡೆಸಲಾಗುತ್ತದೆ ಎಂಬೆಲ್ಲಾ ಪ್ರಶ್ನೆಗಳು ಅನೇಕರನ್ನು ಕಾಡುತ್ತಿದ್ದವು.
ವಿಶೇಷವಾಗಿ ಶೂನ್ಯಪೀಠಾರೋಹಣ ಯಾರು ಮಾಡುತ್ತಾರೆ ಎನ್ನುವ ಪ್ರಶ್ನೆಗಳು ಸಹಜ. ಆದರೆ, ಉತ್ಸವ ಸಮಿತಿ ಇದಕ್ಕೆ ಕಳೆದ ವರ್ಷವೇ ಉತ್ತರ ಕೊಟ್ಟಿದ್ದು, ಮಠದ ಕರ್ತೃಗಳಾದ ಮುರುಗಿ ಶಾಂತವೀರ ಸ್ವಾಮಿಗಳ ಭಾವಚಿತ್ರ ಇಟ್ಟು ಶೂನ್ಯಪೀಠಾರೋಹಣ ನೆರವೇರಿಸಿತ್ತು.

ಮುರುಗಿ ಶಾಂತವೀರ ಸ್ವಾಮಿಗಳ ಹೊಸ ಕಂಚಿನ ಪ್ರತಿಮೆ
ಇದನ್ನೂ ಓದಿ: ಶರಣ ಸಂಸ್ಕøತಿ ಉತ್ಸವದಲ್ಲಿ ಝಗಮಗಿಸುತ್ತಿದೆ ಮುರುಘಾ ಮಠ
ಈ ವರ್ಷದ ಶೂನ್ಯಪೀಠಾರೋಹಣಕ್ಕಾಗಿ ಶ್ರೀ ಮುರುಗಿ ಶಾಂತವೀರ ಸ್ವಾಮಿಗಳ ವಿಶೇಷ ಕಂಚಿನ ಪ್ರತಿಮೆ ರೂಪಿಸಲಾಗಿದೆ. ಅ.25 ರಂದು ಶೂನ್ಯಪೀಠಾರೋಹಣ ಕಾರ್ಯಕ್ರಮ ನಡೆಯಲಿದೆ.
ಮಠದ ಆಡಳಿತಾಧಿಕಾರಿಗಳು ಹಾಗೂ ಪ್ರಧಾನ ಸತ್ರ ಮತ್ತು ಜಿಲ್ಲಾ ನ್ಯಾಯಾಧೀಶರಾದ ಬಿ.ಎಸ್.ರೇಖಾ ಭಾನುವಾರ ಶ್ರೀ ಮುರುಗಿ ಶಾಂತವೀರ ಸ್ವಾಮಿಗಳ ಕಂಚಿನ ಪ್ರತಿಮೆಯನ್ನು ಅನಾವರಣ ಮಾಡಿದರು.
ಈ ಸಂದರ್ಭದಲ್ಲಿ ಶರಣ ಸಂಸ್ಕøತಿ ಉತ್ಸವ-2023ರ ಗೌರವಾಧ್ಯಕ್ಷರಾದ ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಮಹಾಸ್ವಾಮಿಗಳು, ಡಾ.ಬಸವಕುಮಾರ ಸ್ವಾಮಿಗಳು, ಶ್ರೀ ಬಸವ ಮಾಚಿದೇವ ಸ್ವಾಮಿಗಳು, ಶರಣಸಂಸ್ಕøತಿ ಉತ್ಸವ-2023ರ ಕಾರ್ಯಾಧ್ಯಕ್ಷ ಕೆ.ಸಿ.ನಾಗರಾಜ್, ಬಿಜೆಪಿ ಯುವ ಮುಖಂಡ ಜಿ.ಎಸ್.ಅನಿತ್ ಕುಮಾರ್ ಮತ್ತಿತರರಿದ್ದರು.
