ಕ್ರೈಂ ಸುದ್ದಿ
Murder case: ಅತ್ತೆ ಮಾವನ ಕೊಲೆ ಮಾಡಿದ್ದ ಅಳಿಯನ ಬಂಧನ | ತೆಲಂಗಾಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯ ತಲಾಶ್..!

CHITRADURGA NEWS | 28 OCTOBER 2024
ಚಿತ್ರದುರ್ಗ: ಹೆಣ್ಣು ಕೊಟ್ಟ ಅತ್ತೆ ಮಾವ ಅಂದ್ರೆ ಕಣ್ಣು ಕೊಟ್ಟ ತಂದೆ ತಾಯಿ ಇದ್ದಂತೆ ಎಂಬ ಮಾತೇ ಇದೆ. ಆದರೆ, ಇಲ್ಲೊಬ್ಬ ಆರೋಪಿ ಕೌಟುಂಬಿಕ ದ್ವೇಷಕ್ಕಾಗಿ ಹೆಣ್ಣು ಕೊಟ್ಟ ಅತ್ತೆ ಮಾವನನ್ನೇ ಬರ್ಭರವಾಗಿ ಕೊಲೆ ಮಾಡಿ(Murder case) ಎಸ್ಕೇಪ್ ಆಗಿದ್ದ.
ಜೋಡಿ ಕೊಲೆ ಮಾಡಿದ್ದ ಆರೋಪಿಗಾಗಿ ಬಲೆ ಬೀಸಿದ್ದ ಪೊಲೀಸರು ತಿಂಗಳೊಪ್ಪತ್ತು ಕಳೆಯುವುದರಲ್ಲಿ ಎಡೆಮುರಿ ಕಟ್ಟಿ ಕರೆತಂದಿದ್ದಾರೆ.
ಇದನ್ನೂ ಓದಿ: ವಿವಿ ಸಾಗರ ಜಲಾಶಯ ಬಹುತೇಕ ಭರ್ತಿ | ಕೋಡಿಯಲ್ಲಿ ಜಮಾವಣೆಯಾದ ನೀರು
ಚಿತ್ರದುರ್ಗ ಜಿಲ್ಲೆಯ ತುರುವನೂರು ಪೊಲೀಸ್ ಠಾಣೆ ವ್ಯಾಪ್ತಿಯ ಬೊಮ್ಮಕ್ಕನಹಳ್ಳಿ ಗ್ರಾಮದ ಹನುಮಂತಪ್ಪ ಹಾಗೂ ತಿಪ್ಪಮ್ಮ ದಂಪತಿಗಳನ್ನು 2024 ಸೆಪ್ಟಂಬರ್ 19 ರಂದು ಜಮೀನಿನಲ್ಲಿ ಈರುಳ್ಳಿಗೆ ನೀರು ಹಾಯಿಸುವಾಗ ಬರ್ಭರವಾಗಿ ಕೊಲೆ ಮಾಡಲಾಗಿತ್ತು.
ಹನುಮಂತಪ್ಪ ಹಾಗೂ ತಿಪ್ಪಮ್ಮ ದಂಪತಿಯ ಪುತ್ರಿ ಹರ್ಷಿತಾರನ್ನು ಮದುವೆಯಾಗಿದ್ದ ಮಂಜುನಾಥ ಪದೇ ಪದೇ ಮನೆಯಲ್ಲಿ ಜಗಳ ಮಾಡುತ್ತಿದ್ದ. ಕೌಟುಂಬಿಕ ದ್ವೇಷ ಕೊಲೆಯ ಹಂತಕ್ಕೆ ತೆಗೆದುಕೊಂಡು ಹೋಗಿದೆ.
ಇದನ್ನೂ ಓದಿ: ಅಡಿಕೆ ಧಾರಣೆ | ಚನ್ನಗಿರಿ, ಶಿವಮೊಗ್ಗ ಮಾರುಕಟ್ಟೆಗಳಲ್ಲಿ ರಾಶಿ ಬೆಲೆ ಜಿಗಿತ
ಈ ಘಟನೆ ಸಂಬಂಧ ಕೊಲೆಗೆ ಕುಮ್ಮಕ್ಕು ನೀಡಿದ ಆರೋಪದಡಿ ರಘು, ಮಲ್ಲಿಕಾರ್ಜುನ ಮತ್ತು ಚಂದ್ರಪ್ಪನನ್ನು ಸೆಪ್ಟಂಬರ್ 23 ರಂದೇ ಬಂಧಿಸಲಾಗಿತ್ತು.
ಕೊಲೆಯ ಪ್ರಮುಖ ಆರೋಪಿ ಮಂಜುನಾಥನ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‍ಕುಮಾರ್ ಬಂಡಾರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್.ಜೆ.ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ತಂಡ ರಚನೆ ಮಾಡಲಾಗಿತ್ತು.
ಇದನ್ನೂ ಓದಿ: ಹೆತ್ತ ತಂದೆಯನ್ನೇ ಕೊಂದ ಪಾಪಿ ಪುತ್ರ
ಸದರಿ ಪೊಲೀಸರ ತಂಡದಲ್ಲಿ ಚಿತ್ರದುರ್ಗ ಸಂಚಾರಿ ಠಾಣೆ ಪಿಎಸ್‍ಐ ರಾಜು, ಭರಮಸಾಗರ ಠಾಣೆ ಪಿಎಸ್‍ಐ ಸುರೇಶ್, ಹೊಳಲ್ಕೆರೆ ಠಾಣೆ ಪಿಎಸ್‍ಐ ಸಚಿನ್ ಪಾಟೀಲ್ ಇದ್ದರು.
ಕಾರ್ಯಾಚರಣೆಗಿಳಿದ ಅನುಭವಿ ಪೊಲೀಸರ ಈ ತಂಡ ತೆಲಂಗಾಣದ ವಿಜಯವಾಡ ಜಿಲ್ಲೆ ಭದ್ರಾದ್ರಿ ಕೊತ್ತೆಗೋಡೆಂನಲ್ಲಿ ಆರೋಪಿ ಮಂಜುನಾಥ ಇರುವುದನ್ನು ಪತ್ತೆ ಮಾಡಿ ಅ.27 ರಂದು ಬಂಧಿಸಿ ಕರೆತಂದಿದೆ.
ಇದನ್ನೂ ಓದಿ: ಅತ್ತೆ, ಮಾವನ ಕೊಲೆ ಪ್ರಕರಣ | ಅಳಿಯ ಎಸ್ಕೇಪ್ | ಇಬ್ಬರ ಬಂಧನ
ಕಾರ್ಯಚರಣೆಯಲ್ಲಿ ಭಾಗವಹಿಸಿದ್ದ ಪಿಐ ಮುದ್ದುರಾಜ್, ಟಿ.ರಾಜು, ಸುರೇಶ್, ಸಚಿನ್ ಪಾಟೀಲ್, ಸಿಬ್ಬಂದಿಗಳಾದ ಮಹೇಶ್ ರೆಡ್ಡಿ, ರಂಗನಾಥ ಕುಮಾರ್, ರುದ್ರೇಶ್, ಅವಿನಾಶ್, ತಿಮ್ಮೇಶ್, ನಿರಂಜನ, ಮಂಜುನಾಥ್, ಎಸ್ಪಿ ಕಚೇರಿ ಗಣಕ ಯಂತ್ರ ವಿಭಾಗದ ರಾಘವೇಂದ್ರ ಹಾಗೂ ಪಿಎಸ್‍ಐ ಸತೀಶ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಶ್ಲಾಘಿಸಿ ಬಹುಮಾನ ನೀಡಿದ್ದಾರೆ.
ಸೋಮವಾರ ಸಂಜೆ ಎಸ್ಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾರ್ಯಚರಣೆ ನಡೆಸಿದ ತಂಡಕ್ಕೆ ಅಭಿನಂಧನೆ ಸಲ್ಲಿಸಿ, ಬಹುಮಾನವನ್ನೂ ವಿತರಿಸಲಾಯಿತು. ಈ ವೇಳೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್.ಜೆ.ಕುಮಾರಸ್ವಾಮಿ, ಡಿವೈಎಸ್‍ಪಿ ದಿನಕರ್ ಇದ್ದರು.
