ಮುಖ್ಯ ಸುದ್ದಿ
ಕೋಟೆನಾಡಿಗೆ ಕಾಲಿಟ್ಟ ಮುಂಗಾರು ಮಳೆ | ಕೃತಿಕೆಯ ನಂತರ ರೋಹಿಣಿಯ ಪ್ರೀತಿ | ಶನಿವಾರ ಎಲ್ಲೆಲ್ಲಿ ಎಷ್ಟು ಮಳೆ
CHITRADURGA NEWS | 02 JUNE 2024
ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಜಿಲ್ಲೆಗೆ ಈಗಾಗಲೇ ಮುಂಗಾರು ಪೂರ್ವದಲ್ಲಿ ಕೃತಿಕಾ ಮಳೆ ಭರ್ಜರಿ ಪ್ರೀತಿ ಕೊಟ್ಟಿದ್ದು, ಕೆರೆ,, ಕಟ್ಟೆ, ಹಳ್ಳ, ಕೊಳ್ಳಗಳಲ್ಲಿ ನೀರು ಹರಿದಿದೆ.
ಬರದ ದವಡೆಗೆ ಸಿಲುಕಿ ನಜ್ಜುಗುಜ್ಜಾಗಿದ್ದ ರೈತರಲ್ಲಿ ಸಂತಸ ಮೂಡಿಸಿ, ಈ ವರ್ಷದ ಕೃಷಿ ಚಟುವಟಿಕೆಗಳಿಗೆ ಉತ್ಸಾಹ ತುಂಬಿತ್ತು ಕಳೆದ ಮಳೆ.
ಇದನ್ನೂ ಓದಿ: ಚಿತ್ರದುರ್ಗಕ್ಕೆ ಯೆಲ್ಲೊ ಅಲರ್ಟ್ | ಭಾರಿ ಮಳೆ ಸಾಧ್ಯತೆ
ಈಗ ಅಧಿಕೃತವಾಗಿ ಮುಂಗಾರು ಆರಂಭವಾಗಿದ್ದು, ಮುಂಗಾರಿನ ಮೊದಲ ದಿನವೇ ಕೋಟೆನಾಡು ಚಿತ್ರದುರ್ಗ ಜಿಲ್ಲೆಗೆ ಮಳೆಯ ಆಗಮನವಾಗಿದೆ
ಹಿರಿಯೂರು, ಹೊಸದುರ್ಗ, ಚಳ್ಳಕೆರೆ, ಚಿತ್ರದುರ್ಗದ ಹಲವೆಡೆ ಉತ್ತಮ ಮಳೆ ಸುರಿದಿದೆ.
ಶನಿವಾರ ಸಂಜೆ, ರಾತ್ರಿ ಸುರಿದ ಮಳೆ;
ಹೊಳಲ್ಕೆರೆ ತಾಲೂಕಿನ ಹೊರಕೆರೆದೇವರಪುರ(ಎಚ್.ಡಿ.ಪುರ)ದಲ್ಲಿ ಅತೀ ಹೆಚ್ಚು 37.4 ಮಿ.ಮೀ ಮಳೆಯಾಗಿದೆ.
ಚಿಕ್ಕಜಾಜೂರಿನಲ್ಲಿ 14.2 ಮಿ.ಮೀ, ಬಿ.ದುರ್ಗದಲ್ಲಿ 6.2 ಮಿ.ಮೀ, ತಾಳ್ಯದಲ್ಲಿ 6.2 ಮಿ.ಮೀ ಮಳೆ ಸುರಿದಿದೆ.
ಇದನ್ನೂ ಓದಿ: NEP ವಿರೋಧಿ ಸರ್ಕಾರಕ್ಕೆ ಶಿಕ್ಷಕರು ಪಾಠ ಕಲಿಸಿ | MLC ಕೆ.ಎಸ್.ನವೀನ್
ಹೊಸದುರ್ಗ ತಾಲೂಕಿನ ಮತ್ತೋಡಿನಲ್ಲಿ 28.4 ಮಿ.ಮೀ ಮಳೆಯಾಗಿದ್ದರೆ, ಮಾಡದಕೆರೆಯಲ್ಲಿ 20 ಮಿ.ಮೀ ಮಳೆ ಸುರಿದಿದೆ. ಶ್ರೀರಾಂಪುರ ವ್ಯಾಪ್ತಿಯಲ್ಲಿ 8.2 ಮಿ.ಮೀ, ಹೊಸದುರ್ಗದಲ್ಲಿ 5.4 ಮಿ.ಮೀ ಮಳೆಯಾಗಿದೆ.
ಚಳ್ಳಕೆರೆಯಲ್ಲಿ 2 ಮಿ.ಮೀ, ಪರಶುರಾಂಪುರದಲ್ಲಿ 18.2 ಮಿ.ಮೀ, ನಾಯಕನಹಟ್ಟಿ 2.6 ಮಿ.ಮೀ, ತಳುಕಿನಲ್ಲಿ 1.2 ಮಿ.ಮೀ ಮಳೆಯಾಗಿದೆ.
ಇದನ್ನೂ ಓದಿ: ಹೊಳಲ್ಕೆರೆಯಲ್ಲಿ ಇಂದು ವಿದ್ಯುತ್ ವ್ಯತ್ಯಯ
ಹಿರಿಯೂರು ತಾಲೂಕಿನ ಇಕ್ಕನೂರು ವ್ಯಾಪ್ತಿಯಲ್ಲಿ 12 ಮಿ.ಮೀ, ಈಶ್ವರಗೆರೆಯಲ್ಲಿ 16.2 ಮಿ.ಮೀ, ಸೂಗೂರು 3.2, ಬಬ್ಬೂರು 1.2 ಮಿ.ಮೀ ಮಳೆಯಾಗಿದೆ.