ಹೊಸದುರ್ಗ
MLC KS NAVEEN: ಹೊಸದುರ್ಗ ನನ್ನ ಕಾಯಕ ಕ್ಷೇತ್ರ | ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ | 50ನೇ ವರ್ಷದ ಜನ್ಮದಿನಾಚರಣೆ ಸಂಭ್ರಮ
CHITRADURGA NEWS | 01 OCTOBER 2024
ಚಿತ್ರದುರ್ಗ: ಮುಂದಿನ ದಿನಗಳಲ್ಲಿ ಹೊಸದುರ್ಗದಲ್ಲಿ ಗಟ್ಟಿಯಾಗಿ ನಿಂತು ನಿಮ್ಮೆಲ್ಲರ ಪರವಾಗಿ ಕೆಲಸ ಮಾಡುತ್ತೇನೆ. ಇದನ್ನು ನನ್ನ ಕಾಯಕ ಕ್ಷೇತ್ರವನ್ನಾಗಿ ಮಾಡುವೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ತಿಳಿಸಿದರು.
ಹೊಸದುರ್ಗ ಪಟ್ಟಣದ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಅಭಿಮಾನಿಗಳು ಸೋಮವಾರ ಆಯೋಜಿಸಿದ್ದ ಅವರ 50ನೇ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ವಾರದ 3 ದಿನ ತಾಲ್ಲೂಕಿನ ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿ, ಜನರ ಕಷ್ಟ ಸುಖಗಳನ್ನು ಆಲಿಸುವೆ ಎಂದರು.
ಮೊದಲು ಈ ತಾಲ್ಲೂಕಿನ ಜನರ ಮನಸ್ಸನ್ನು ಗೆದ್ದು ಪ್ರೀತಿ ಗಳಿಸುವ ಕೆಲಸ ಮಾಡುವೆ. ಆ ಮೇಲೆ ಈ ನಿಮ್ಮ ನವೀನ್ ನಿಮಗೆ ಬೇಕಾ ಅಥವಾ ಬೇಡವಾ ಎಂದು ನೀವೇ ನಿರ್ಧರಿಸಿ. ನಾನು ಎಂದಿಗೂ ಅಧಿಕಾರದ ಬೆನ್ನ ಹಿಂದೆ ಬಿದ್ದವನಲ್ಲ, ಜನರ ಸೇವೆ ಮಾಡಲು ರಾಜಕಾರಣಕ್ಕೆ ಬಂದವನು ಎಂದು ತಿಳಿಸಿದರು.
ಕ್ಲಿಕ್ ಮಾಡಿ ಓದಿ: ದಿನ ಭವಿಷ್ಯ | 01 ಅಕ್ಟೋಬರ್ | ಆರ್ಥಿಕ ಪ್ರಗತಿ , ಸಕಾಲದಲ್ಲಿ ಕೆಲಸಗಳು ಪೂರ್ಣ, ಶುಭ ಕಾರ್ಯ
ನನ್ನ ತಂದೆಯ ಊರು ಪಕ್ಕದ ತಾಲೂಕಿನ ಎನ್.ಜಿ.ಹಳ್ಳಿ. ಆದರೆ, ನನ್ನೆಲ್ಲಾ ಆಸ್ತಿ ಜಮೀನು, ತೋಟ, ಮನೆ ಎಲ್ಲ ಇರುವುದು ಹೊಸದುರ್ಗ ತಾಲ್ಲೂಕಿನಲ್ಲಿಯೇ. ನಾನು ಹೊಸದುರ್ಗ ತಾಲ್ಲೂಕಿನವನು. ಈ ತಾಲ್ಲೂಕಿನ ಬಗ್ಗೆ ನನಗೆ ವಿಶೇಷವಾದ ಕನಸಿದೆ. ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಸಹಕಾರ ಹಾಗೂ ಮಾರ್ಗದರ್ಶನದಿಂದ ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದರು.
ಕ್ಲಿಕ್ ಮಾಡಿ ಓದಿ: ಆಕಾಶದಲ್ಲಿ ವಿಸ್ಮಯ | ಬರಿಗಣ್ಣಿಗೆ ಗೋಚರಿಸಲಿದೆ ಅಟ್ಲಾಸ್ ಧೂಮಕೇತು
ಪುರಸಭೆ ಅಧ್ಯಕ್ಷೆ ರಾಜೇಶ್ವರಿ ಆನಂದ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮಂಜುನಾಥ್, ರೈತ ಮೋರ್ಚಾ ಕಾರ್ಯದರ್ಶಿ ಬುರುಡೇಕಟ್ಟೆ ರಾಜೇಶ್, ರೈತ ಸಂಘದ ಅಧ್ಯಕ್ಷ ಬೋರೇಶ್, ಪುರಸಭೆ ಸದಸ್ಯರಾದ ರಾಮಚಂದ್ರಪ್ಪ, ದೊಡ್ಡಯ್ಯ, ಸ್ವಾತಿ ಪ್ರದೀಪ್, ಉದ್ಯಮಿ ಪ್ರದೀಪ್, ಮುಖಂಡರಾದ ವೆಂಕಟೇಶ್ ಯಾದವ್, ರಂಗಸ್ವಾಮಿ, ಪಾಲಯ್ಯ, ಬಾಳೇಕಾಯಿ ರಾಮದಾಸ್, ತುಂಬಿನಕೆರೆ ಬಸವರಾಜ್, ಗೂಳಿಹಟ್ಟಿ ಕೃಷ್ಣಮೂರ್ತಿ, ಎನ್.ಆರ್.ಜಗದೀಶ್, ಪಂಪ, ಕಲ್ಲೇಶ್, ಸಿಂಧು ಅಶೋಕ್, ಅನಸೂಯಮ್ಮ, ಕೆ.ಟಿ.ಕುಮಾರಸ್ವಾಮಿ, ಡಿ. ಪರಶುರಾಮಪ್ಪ, ಕೆ. ಮಲ್ಲಿಕಾರ್ಜುನ್, ಹನುಮಂತೇಗೌಡ, ಮಂಜುನಾಥ್ ಮೊಳಕಾಲ್ಮೂರು, ಹೆಗ್ಗೆರೆ ಶಂಕರಪ್ಪ, ದೊಡ್ಡಘಟ್ಟದ ದ್ಯಾಮಣ್ಣ, ಡಿ.ಮಂಜುನಾಥ್, ದೇವಿಗೆರೆ ಮಲ್ಲಿಕಾರ್ಜುನ್ ಭಾಗವಹಿಸಿದ್ದರು.