ಮುಖ್ಯ ಸುದ್ದಿ
ನೂತನ AC ಯಾಗಿ ಮೆಹಬೂಬ್ ಜಿಲಾನ್ ಅಧಿಕಾರ ಸ್ವೀಕಾರ
CHITRADURGA NEWS | 28 FEBRUARY 2025
ಚಿತ್ರದುರ್ಗ: ಚಿತ್ರದುರ್ಗ ನೂತನ ಉಪವಿಭಾಗಾಧಿಕಾರಿಯಾಗಿ ಮೆಹಬೂಬ್ ಜಿಲಾನ್ ಅವರು ಶುಕ್ರವಾರ ಅಧಿಕಾರ ವಹಿಸಿಕೊಂಡರು.
Also Read: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಸೂರ್ಯಕಾಂತಿ ರೇಟ್ ಎಷ್ಟಿದೆ?
ಉಪವಿಭಾಗಾಧಿಕಾರಿಯಾಗಿದ್ದ ಕಾರ್ತಿಕ್ ಅವರ ವರ್ಗಾವಣೆ ಬಳಿಕ, ಭೂಸ್ವಾಧೀನ ಅಧಿಕಾರಿಯಾಗಿದ್ದ ವೆಂಕಟೇಶ್ ನಾಯಕ್ ಅವರು ಉಪವಿಭಾಗಾಧಿಕಾರಿ ಹುದ್ದೆಯ ಪ್ರಭಾರ ವಹಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದರು.
ಇದೀಗ ಮೆಹಬೂಬ್ ಜಿಲಾನ್ ಅವರನ್ನು ಚಿತ್ರದುರ್ಗ ಉಪವಿಭಾಗಾಧಿಕಾರಿಯಾಗಿ ಸರ್ಕಾರ ನೇಮಿಸಿದ ಹಿನ್ನೆಲೆಯಲ್ಲಿ, ಅವರು ಶುಕ್ರವಾರ ಇಲ್ಲಿನ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು.
Also Read: ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಪ್ರೊ.ಜಿ.ಪರಮೇಶ್ವರಪ್ಪ ಆಯ್ಕೆ
ಮೆಹಬೂಬ್ ಜಿಲಾನ್ ಅವರು ಇಲ್ಲಿಗೆ ಬರುವ ಪೂರ್ವದಲ್ಲಿ ರಾಯಚೂರು ಮಹಾನಗರಪಾಲಿಕೆ ಹಿರಿಯ ಶ್ರೇಣಿ ವಲಯ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.