Connect with us

ಮಂಜುನಾಥ್ ಕಳ್ಳಿಹಟ್ಟಿ | “ನೆನಪಿರಲಿ ನಾವೆಲ್ಲಾ ಪ್ರೇಮ ಜೀವಿಗಳು” ಕೃತಿ ಲೋಕಾರ್ಪಣೆ

ಮಂಜುನಾಥ್ ಕಳ್ಳಿಹಟ್ಟಿ ನೆನಪಿರಲಿ ನಾವೆಲ್ಲಾ ಪ್ರೇಮ ಜೀವಿಗಳು ಕೃತಿ ಲೋಕಾರ್ಪಣೆ

ಮುಖ್ಯ ಸುದ್ದಿ

ಮಂಜುನಾಥ್ ಕಳ್ಳಿಹಟ್ಟಿ | “ನೆನಪಿರಲಿ ನಾವೆಲ್ಲಾ ಪ್ರೇಮ ಜೀವಿಗಳು” ಕೃತಿ ಲೋಕಾರ್ಪಣೆ

CHITRADURGA NEWS | 14 JULY 2024

ಚಿತ್ರದುರ್ಗ: ರೈನ್ ಟ್ರಸ್ಟ್, ಶೋಭಿತೆ ಪೌಂಡೇಷನ್ , ವಾಸ್ತವ ವೇದಿಕೆ ವ್ಯಾಟ್ಸಪ್ ಬಳಗ, ಜಿಬಿಟಿ ಪಬ್ಲಿಕೇಷನ್ಸ್ ಇವರ ಸಂಯುಕ್ತಾಶ್ರಯದಲ್ಲಿ ಎಂ.ಮಂಜುನಾಥ್ ಕಳ್ಳಿಹಟ್ಟಿ ಅವರ “ನೆನಪಿರಲಿ ನಾವೆಲ್ಲಾ ಪ್ರೇಮ ಜೀವಿಗಳು” ಕೃತಿಯನ್ನು ಲೋಕಾರ್ಪಣೆ ಗೊಳಿಸಿಲಾಯಿತು.

ಇದನ್ನೂ ಓದಿ: ROAD WORKS; ರಸ್ತೆ ಕಾಮಗಾರಿಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೂಮಿ ಪೂಜೆ 

ಈ ವೇಳೆ ಖ್ಯಾತ ಸಾಹಿತಿ ಡಾ.ಲೊಕೇಶ್ ಅಗಸನಕಟ್ಟೆ ಮಾತನಾಡಿ, ನೆನಪಿರಲಿ ನಾವೆಲ್ಲಾ ಪ್ರೇಮ ಜೀವಿಗಳು ಕೃತಿ ಪ್ರೇಮವನ್ನು ನೆನಪಿಸುತ್ತದೆ, ಮಾನವನ ಜೀವನ ಎಷ್ಟೆಲ್ಲಾ ಭಿನ್ನತೆಯನ್ನು ಗಳಿಸಿಕೊಳ್ಳಬಹುದು ಮತ್ತು ಅರಿವಿನ ಪಯಣವನ್ನು ಹೇಗೆ ಕೈಗೊಳ್ಳಬಹುದೆಂದು ತಿಳಿಸುತ್ತದೆ.

ಮಂಜುನಾಥ್ ಕಳ್ಳಿಹಟ್ಟಿ ಒಬ್ಬ ಫಕೀರ, ನಮ್ಮೊಳಗಿನ ಪೂರ್ವಾಗ್ರಹಪೀಡಿತ ಮೌಢ್ಯಗಳನ್ನು, ಸಂಪ್ರಾದಾಯಗಳನ್ನು ನಿರ್ನಾಮ ಮಾಡುವ ಮುಕ್ತ ಯೋಚನೆಯನ್ನು ಹೊಂದಿದವರು, ಧರ್ಮ, ಜಾತಿಯಾಧಾರಿತ ವ್ಯವಸ್ಥೆ, ಮೇಲು-ಕೀಳು, ತಾರತಮ್ಯದಂಥ ದಿನಗಳನ್ನು ಎಲ್ಲಿಯವರೆಗೆ ಸಹಿಸಲು ಸಾಧ್ಯ?

ಭಿನ್ನತೆಯನ್ನು ಹೊರ ತರುವ ಯತ್ನಗಳಲ್ಲಿ ಮಂಜುನಾಥ್ ಕಳ್ಳಿಹಟ್ಟಿ ಮುಂದೆ ನಿಂತಿದ್ದಾರೆ, ಅರಿವು ಮಾತ್ರ ಮಾನವನ ಅತ್ಯಂತ ಕಟ್ಟಕಡೆಯ ಅಸ್ತ್ರ, ಮಾನವನು ಅರಿವಿನಿಂದ ಮಾತ್ರ ಬದುಕನ್ನು ಸುಂದರಗೊಳಿಸಿಕೊಳ್ಳಬಲ್ಲ ಮತ್ತು ಜೀವಂತಿಕೆಯನ್ನು ಹಿಡಿದಿಟ್ಟುಕೊಳ್ಳಬಲ್ಲ ಎಂದು ಹೇಳಿದರು.

ಇದನ್ನೂ ಓದಿ: Ravi Hegde; ಇದು ಪತ್ರಕರ್ತರು ಆತ್ಮಾವಲೋಕನ ಮಾಡಿಕೊಳ್ಳುವ ಸಮಯ | ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ

ಬಸವರಾಜು ಪಡುಕೋಟೆ ಮಾತನಾಡಿ, ಪುಸ್ತಕಗಳು ಬಾಳಿಗೆ ಬೆಳಕಾಗುತ್ತದೆ, ಎಲ್ಲವನ್ನೂ, ಎಲ್ಲರನ್ನೂ ಅರಿಯುವಂತೆ ಮಾಡುತ್ತವೆ ಎಂದರು.

ಅಪರಾಧಶಾಸ್ತ್ರದ ವಿಶ್ರಾಂತ ಪ್ರಾಧ್ಯಾಪಕ ಡಾ.ನಟರಾಜ್ ಮಾತನಾಡಿ, ಮಂಜುನಾಥ್ ಕಳ್ಳಿಹಟ್ಟಿ ಶಿಕ್ಷಣ ಕ್ಷೇತ್ರದಲ್ಲಿ ಇದ್ದಿದ್ದರೆ ಅವರ ಸದ್ಬಳಕೆ ಚೆನ್ನಾಗಿ ಆಗುತ್ತಿತ್ತು, ಮಂಜುನಾಥ್ ಕಳ್ಳಿಹಟ್ಟಿ ಈಗಾಗಲೆ ಹಲವಾರು ಕೃತಿಗಳನ್ನು ರಚಿಸಿದ್ದು ಇದು ಅವರ ನಾಲ್ಕನೆ ಕೃತಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಬಿಟಿ ಪಬ್ಲಿಕೇಷನ್ ನ ಮೋಹನ್ ಕುಮಾರ್, ಸಾಹಿತಿಗಳಾದ ಡಾ.ದೊಡ್ಡ ಮಲ್ಲಯ್ಯ, ಡಾ.ಎನ್.ಮಮತಾ, ಕರ್ನಾಟಕ ಲೇಖಕಿಯರ ಸಂಘದ ಲಲಿತ ಕೃಷ್ಣಮೂರ್ತಿ ಸೇರಿದಂತೆ ಇತರರು ಭಾಗವಹಿಸಿದ್ದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version