Connect with us

    VEERASHAIVA MAHASABHA; ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷರಾಗಿ ಮಹಡಿ ಶಿವಮೂರ್ತಿ ಅವಿರೋಧ ಆಯ್ಕೆ

    Mahadi Shivamurthy Veerashaiva mahasabha President

    ಮುಖ್ಯ ಸುದ್ದಿ

    VEERASHAIVA MAHASABHA; ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷರಾಗಿ ಮಹಡಿ ಶಿವಮೂರ್ತಿ ಅವಿರೋಧ ಆಯ್ಕೆ

    CHITRADURGA NEWS | 08 JULY 2024

    ಚಿತ್ರದುರ್ಗ: ಭಾರೀ ಕುತೂಹಲ ಮೂಡಿಸಿದ್ದ ಅಖಿಲ ಭಾರತ ವೀರಶೈವ ಮಹಾಸಭಾ ಚಿತ್ರದುರ್ಗ ಜಿಲ್ಲಾಧ್ಯಕ್ಷ ಸ್ಥಾನದ ಚುನಾವಣೆ ಅವಿರೋಧ ಆಯ್ಕೆ ಮೂಲಕ ಸುಗಮವಾಗಿ ಮುಕ್ತಾಯವಾಗಿದೆ.

    ಕಳೆದ ಅವಧಿಗೆ ಅಧ್ಯಕ್ಷರಾಗಿದ್ದ ಮಹಡಿ ಶಿವಮೂರ್ತಿ ಮತ್ತೊಂದು ಅವಧಿಗೆ ಅವಿರೋಧವಾಗಿ ಪುನರಾಯ್ಕೆ ಆಗಿದ್ದಾರೆ ಎಂದು ಚುನಾವಣಾಧಿಕಾರಿ ಟಿ.ಪಿ.ಜ್ಞಾನಮೂರ್ತಿ ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ: ಕಳೆದುಕೊಂಡಿದ್ದ 80 ಮೊಬೈಲ್ ಹುಡುಕಿಕೊಟ್ಟ ಪೊಲೀಸರು

    ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಬಯಸಿ ಮಹಡಿ ಶಿವಮೂರ್ತಿ ಸೇರಿದಂತೆ ಒಟ್ಟು 9 ಮಂದಿ ನಾಮಪತ್ರ ಸಲ್ಲಿಸಿದ್ದರು. ಇಂದು ಮಧ್ಯಾಹ್ನ 3 ಗಂಟೆವರೆಗೆ ನಾಮಪತ್ರ ಹಿಂಪಡೆಯಲು ಕಾಲಾವಕಾಶವಿತ್ತು.

    ನಗರದ ಶ್ರೀ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಬೆಳಗ್ಗೆ ನಡೆದ ವೀರಶೈವ, ಲಿಂಗಾಯತ ಮುಖಂಡರ ಸಭೆಯಲ್ಲಿ ಒಮ್ಮತದ ತೀರ್ಮಾನಕ್ಕೆ ಬಂದು ಮಹಡಿ ಶಿವಮೂರ್ತಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

    ಇದನ್ನೂ ಓದಿ: ಬಸವಮಯವಾಗಿದ್ದ ಅಥಣಿ ಮುರುಘೇಂದ್ರ ಶಿವಯೋಗಿಗಳ ಬದುಕು | ಡಾ.ಬಸವಕುಮಾರ ಸ್ವಾಮೀಜಿ

    ಈ ಅವಧಿಯನ್ನು ಇಬ್ಬರಿಗೆ ಹಂಚಿಕೆ ಮಾಡಿದ್ದು, ಮೊದಲ ಅವಧಿಯ 2 ವರ್ಷ 4 ತಿಂಗಳ ಅವಧಿಗೆ ಮಹಡಿ ಶಿವಮೂರ್ತಿ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. ನಂತರದ ಅವಧಿಗೆ ಆನಂತರ ತೀರ್ಮಾನವಾಗಲಿದೆ ಎನ್ನಲಾಗಿದೆ.

    ಇನ್ನೂ 30 ನಿರ್ದೇಶಕರ ಹುದ್ದೆಗಳ ಪೈಕಿ ಮಹಿಳೆಯರಿಗೆ ಮೀಸಲಾಗಿದ್ದ 10 ಸ್ಥಾನಗಳಿಗೆ 9 ಅವಿರೋಧವಾಗಿ ಆಯ್ಕೆಯಾಗಿದ್ದವು. ಒಂದು ನಾಮಪತ್ರ ತಿರಸ್ಕøತಗೊಂಡಿತ್ತು. ಪುರುಷರಿಗೆ ಮೀಸಲಾದ 20 ಸ್ಥಾನಗಳಿಗೆ 32 ನಾಮಪತ್ರ ಸಲ್ಲಿಕೆಯಾಗಿದ್ದವು.

    ಇದನ್ನೂ ಓದಿ: ವೀರಶೈವ ಮಹಾಸಭಾ ಜಿಲ್ಲಾ ಘಟಕದ ಚುನಾವಣೆ | 9 ಜನರಿಂದ ನಾಮಪತ್ರ ಸಲ್ಲಿಕೆ | ನಾಮಪತ್ರ ಹಿಂಪಡೆಯಲು ಇಂದು ಕೊನೆ ದಿನ | ಜು.21 ರಂದು ಮತದಾನ

    ಇಂದು ನಾಮಪತ್ರ ಹಿಂಪಡೆದು ಅವಿರೋಧ ಆಯ್ಕೆ ನಡೆಯದಿದ್ದರೆ ಜು.21 ರಂದು ಚುನಾವಣೆ ನಡೆಯಬೇಕಿತ್ತು.
    ಅಧ್ಯಕ್ಷ ಸ್ಥಾನಕ್ಕೆ ಹಾಲಿ ಅಧ್ಯಕ್ಷರಾಗಿದ್ದ ಮಹಡಿ ಶಿವಮೂರ್ತಿ, ಪ್ರಧಾನ ಕಾರ್ಯದರ್ಶಿಯಾಗಿದ್ದ ಜಿ.ಎನ್.ಮಹೇಶ್, ಶ್ಯಾಮಲಾ ಶಿವಪ್ರಕಾಶ್, ಮೋಕ್ಷಾ ರುದ್ರಸ್ವಾಮಿ, ಪಿ.ವೀರೇಂದ್ರಕುಮಾರ್, ಎಂ.ಎನ್.ವಿಜಯಕುಮಾರ್, ಕೆ.ಎಸ್.ವಿಜಯ, ಎ.ವಿ.ಮಂಜುನಾಥ್, ಕೆ.ಎಸ್.ನಾಗರಾಜ್ ನಾಮಪತ್ರ ಸಲ್ಲಿಸಿದ್ದರು.

    ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಸ್ಥಾನದ ಚುನಾವಣಾಧಿಕಾರಿಗಳಾಗಿ ಟಿ.ಪಿ.ಜ್ಞಾನಮೂರ್ತಿ, ಟಿ.ದಯಾನಂದ ಪಾಟೀಲ್ ಹಾಗೂ ನಾಗಭಷಣ್ ಕಾರ್ಯನಿರ್ವಹಿಸಿದ್ದರು.

    ಇದನ್ನೂ ಓದಿ: ಅನಾರೋಗ್ಯದಿಂದ ನರಳುತ್ತಿದೆ ಆಸ್ಪತ್ರೆ ಮುಂದಿರುವ ಪಾರ್ಕ್ | ಡೆಂಘಿ ಸೊಳ್ಳೆ ಇಲ್ಲಿಲ್ಲ ಅಂತಿರಾ..!

    ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಮಾದರಿಯಾಗಿರುವ ವೀರಶೈವ ಮಹಾಸಭಾ ಹಾಗೂ ವೀರಶೈವ ಲಿಂಗಾಯತ ಸಮುದಾಯಕ್ಕೆ ಚುನಾವಣಾಧಿಕಾರಿಗಳು ಅಭಿನಂದಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top