Connect with us

    ಬಯಲು ಸೀಮೆ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ | ಲಂಚದ ಹಣದ ಸಮೇತ ಎಸ್.ವೈ.ಬಸವರಾಜಪ್ಪ ಬಂಧನ

    ಬಯಲು ಸೀಮೆ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ

    ಕ್ರೈಂ ಸುದ್ದಿ

    ಬಯಲು ಸೀಮೆ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ | ಲಂಚದ ಹಣದ ಸಮೇತ ಎಸ್.ವೈ.ಬಸವರಾಜಪ್ಪ ಬಂಧನ

    CHITRADURGA NEWS | 06 MAY 2024

    ಚಿತ್ರದುರ್ಗ: ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲು ಬರೋಬ್ಬರಿ 4 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು, ಗುತ್ತಿಗೆದಾರರಿಂದ ಹಣ ಪಡೆಯುವಾಗ ಬಯಲು ಸೀಮೆ ಮಂಡಳಿ ಕಾರ್ಯದರ್ಶಿ ಎಸ್.ವೈ.ಬಸವರಾಜಪ ಲೋಕಾಯುಕ್ತ ದಾಳಿಗೆ ಸಿಲುಕಿದ್ದಾರೆ.

    ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲು 4 ಲಕ್ಷ ರೂ. ಹಣ ಪಡೆಯುತ್ತಿದ್ದ ಮಂಡಳಿ ಕಾರ್ಯದರ್ಶಿ ಎಸ್.ವೈ.ಬಸವರಾಜಪ್ಪ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

    ಇದನ್ನೂ ಓದಿ: ಬೆಳೆ ಸಮೀಕ್ಷೆ ಕ್ರಮಬದ್ಧವಾಗಿಲ್ಲ | ಅಚಾತುರ್ಯ ನಡೆಸಿದ ಪಿಡಿಓಗಳಿಗೆ ನೋಟೀಸ್ | ಜಿಲ್ಲಾಧಿಕಾರಿ ಟಿ.ವೆಂಕಟೇಶ್

    ಚಿತ್ರದುರ್ಗದಲ್ಲಿರುವ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಕಚೇರಿಯಲ್ಲಿ ಸೋಮವಾರ 4 ಲಕ್ಷ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಬಸವರಾಜಪ್ಪನನ್ನು ಬಂದಿಸಿ ವಿಚಾರಣೆ ನಡೆಸಲಾಗುತ್ತಿದೆ.

    ಜಗಳೂರು ತಾಲೂಕಿನ ವೈ.ಪಿ.ಸಿದ್ಧನಗೌಡ ಎನ್ನುವ ಗುತ್ತಿಗೆದಾರ ಗೌರಿಪುರ ಹಾಗೂ ಖಲಾಕಣಕುಪ್ಪೆ ಗ್ರಾಮಗಳಲ್ಲಿ 15 ತುಂಡು ಗುತ್ತಿಗೆ ಕಾಮಗಾರಿಗಳನ್ನು ನಿರ್ವಹಿಸಲು ಆಡಳಿತಾತ್ಮಕ ಅನುಮೋದನೆಗೆ ಕಳೆದ ಒಂದು ವರ್ಷದಿಂದ ಓಡಾಡುತ್ತಿದ್ದರು.

    ಇದನ್ನೂ ಓದಿ: ಉದ್ಯೋಗ ಮಾಡುವ ಆಸೆಯೇ, ಏನು ಮಾಡಬೇಕೆಂಬ ಐಡಿಯಾ ಇಲ್ಲವೇ.. ಹಾಗಿದ್ದರೆ ಈ ಸುದ್ದಿ ಓದಿ, ನಿಮಗೊಂದು ಒಳ್ಳೆಯ ದಾರಿ ಸಿಗುತ್ತೆ..

    2024 ಏಪ್ರಿಲ್ 30 ರಂದು ನೇರವಾಗಿ ಮಂಡಳಿಯ ಕಾರ್ಯದರ್ಶಿ ಎಸ್.ವೈ.ಬಸವರಾಜಪ್ಪ ಅವರನ್ನು ಭೇಟಿಯಾಗಿ ವಿಚಾರಿಸಿದಾಗ 4 ಲಕ್ಷ ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಸಂಬಂಧ ಸಿದ್ಧನಗೌಡ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

    ಲೋಕಾಯುಕ್ತ ದಾಳಿ ನಂತರ ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಕಾರ್ಯದರ್ಶಿ ಎಸ್.ವೈ.ಬಸವರಾಜಪ್ಪ ಅವರ ಮನೆಯಲ್ಲಿ, ಲೋಕಾಯುಕ್ತ ಅಧಿಕಾರಿಗಳು ತಪಾಸಣೆ ನಡೆಸಿದ ವೇಳೆ 28 ಲಕ್ಷ ನಗದು ಪತ್ತೆಯಾಗಿದೆ ಎನ್ನಲಾಗಿದೆ.

    ಅದರಂತೆ ಸೋಮವಾರ ಮಂಡಳಿಯ ಕಚೇರಿಯಲ್ಲಿ 4 ಲಕ್ಷ ರೂ. ಲಂಚ ಪಡೆಯುವಾಗಲೇ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿ, ಹಣವನ್ನು ಜಪ್ತಿ ಮಾಡಿದ್ದಾರೆ.

    ಇದನ್ನೂ ಓದಿ: ರಾಶಿ ಅಡಿಕೆ ಬೆಲೆಯಲ್ಲಿ ಮತ್ತೆ ಚೇತರಿಕೆ | ಚನ್ನಗಿರಿ, ಶಿವಮೊಗ್ಗ ಮಾರುಕಟ್ಟೆಗಳಲ್ಲಿ ಏರಿಕೆ

    ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಪೊಲೀಸ್ ನಿರೀಕ್ಷಕರಾದ ಸುಮಾ ರಂಗನಾಥ್ ಎಚ್.ಹೊಸಮನಿ ನಡೆಸುತ್ತಿದ್ದು, ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎನ್.ವಾಸುದೇವರಾಮ ಮಾರ್ಗದರ್ಶನದಲ್ಲಿ ಪ್ರಕರಣ ದಾಖಲಾಗಿದೆ.

    ಸದರಿ ಕಾರ್ಯಾಚರಣೆ ನೇತೃತ್ವವನ್ನು ಡಿವೈಎಸ್‍ಪಿ ಎನ್.ಮೃತ್ಯಂಜಯ ವಹಿಸಿಕೊಂಡಿದ್ದು, ಇನ್‍ಸ್ಪೆಕ್ಟರ್‍ಗಳಾದ ಬಿ.ಮಂಜುನಾಥ್, ವೈ.ಎಸ್.ಶಿಲ್ಪಾ, ಸಿಬ್ಬಂದಿಗಳಾದ ಜಿ.ಎಂ.ತಿಪ್ಪೇಸ್ವಾಮಿ, ಎಚ್.ಶ್ರೀನಿವಾಸ್, ಎಸ್.ಆರ್.ಪುಷ್ಪಾ, ಎಲ್.ಜಿ.ಸತೀಶ್, ಜಿ.ಎನ್.ಸಂತೋಷ್ ಕುಮಾರ್, ಮಂಜುನಾಥ್, ಮಹಾಲಿಂಗಪ್ಪ, ಕೆ.ಟಿ.ಮಾರುತಿ, ಎಂ.ವೀರೇಶ್, ರಾಜೇಶ್, ಆರ್.ವೆಂಕಟೇಶ್ ಕುಮಾರ್, ಟಿ.ವಿ.ಸಂತೋಷ್, ಡಿ.ಮಾರುತಿ, ಎನ್.ಎಲ್.ಶ್ರೀಪತಿ ಭಾಗವಹಿಸಿದ್ದರು.

    Click to comment

    Leave a Reply

    Your email address will not be published. Required fields are marked *

    More in ಕ್ರೈಂ ಸುದ್ದಿ

    To Top