Connect with us

    Temples; ದೇವಸ್ಥಾನಗಳ ನಿರ್ವಹಣೆ ಭಕ್ತರಿಗೆ ಬಿಡಿ | ಸರ್ಕಾರಕ್ಕೆ VHP ಆಗ್ರಹ 

    ಹಿಂದೂ ದೇವಸ್ಥಾನಗಳಲ್ಲಿ ಭಕ್ತರ ನಿರ್ವಹಣೆಗೆ ಬಿಡಲು ಒತ್ತಾಯಿಸಿ ವಿಶ್ವಹಿಂದೂ ಪರಿಷತ್‌ನಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು

    ಮುಖ್ಯ ಸುದ್ದಿ

    Temples; ದೇವಸ್ಥಾನಗಳ ನಿರ್ವಹಣೆ ಭಕ್ತರಿಗೆ ಬಿಡಿ | ಸರ್ಕಾರಕ್ಕೆ VHP ಆಗ್ರಹ 

    CHITRADURGA NEWS | 26 SEPTEMBER 2024

    ಚಿತ್ರದುರ್ಗ: ಹಿಂದುಗಳ ಶ್ರದ್ಧಾ ಕೇಂದ್ರಗಳಾದ ತೀರ್ಥ ಕ್ಷೇತ್ರಗಳನ್ನು ಸರ್ಕಾರ(Govt)ದ ದಬ್ಬಾಳಿಕೆ ಹಾಗೂ ನಿಯಂತ್ರಣದಿಂದ ಮುಕ್ತಗೊಳಿಸಿ ಭಕ್ತರ ನಿದೇವಸ್ಥಾನರ್ವಹಣೆಗೆ ನೀಡಲು ಆಗ್ರಹಿಸಿ ವಿಶ್ವಹಿಂದೂ ಪರಿಷತ್((Vishwa Hindu Parishat) ಕಾರ್ಯಕರ್ತರು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ಕ್ಲಿಕ್ ಮಾಡಿ ಓದಿ: Audition; ZEE ಕನ್ನಡದಿಂದ ‌ಸರಿಗಮಪ ಆಡಿಷನ್‌ ಚಿತ್ರದುರ್ಗದಲ್ಲಿ | ಯಾರೆಲ್ಲಾ ಭಾಗವಹಿಸಬಹುದು ಗೊತ್ತಾ

    ವಿಶ್ವಹಿಂದೂ ಪರಿಷತ್ ರಾಜ್ಯ ಕಾರ್ಯದರ್ಶಿ ಜಗನ್ನಾಥ ಶಾಸ್ತ್ರೀ ಮಾತನಾಡಿ, ತಿರುಪತಿ ಪ್ರಸಾದದಲ್ಲಿ ಮೀನಿನ ಎಣ್ಣೆ ಬೆರೆಸಿ ನಮ್ಮ ಶ್ರದ್ದೆ ಮತ್ತು ಭಕ್ತಿಗೆ ಘಾಸಿ ಮಾಡಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಇಂಥದೊಂದು ಬೇಡಿಕೆ ಬರುತ್ತಿದೆ.

    ದೇಶದ ಕೋಟ್ಯಂತರ ಹಿಂದೂಗಳಿಗೆ ತಿರುಮಲ ತಿರುಪತಿ ದೇವಸ್ಥಾನ, ಅಲ್ಲಿನ ಶ್ರೀವೆಂಕಟೇಶ್ವರ ಸ್ವಾಮಿಯ ಬಗ್ಗೆ ಮತ್ತು ಅಲ್ಲಿ ಭಕ್ತರಿಗೆ ಪ್ರಸಾದ ರೂಪವಾಗಿ ನೀಡುವ ಲಾಡುಗಳ ಬಗ್ಗೆ ಹಾಗೂ ಆ ಮಹಾಪ್ರಸಾದದ ಬಗ್ಗೆ ಅನಾದಿ ಕಾಲದಿಂದಲೂ ನಂಬಿಕೆಯಿದೆ.

    ಇತ್ತೀಚೆಗೆ ಮಾಧ್ಯಮಗಳ ಮೂಲಕ ತಿಳಿದು ಬಂದಿರುವಂತೆ, ಅಂದ್ರಪ್ರದೇಶದ ಸರ್ಕಾರದ ಅಧೀನದಲ್ಲಿರುವ ತಿರುಪತಿಯಲ್ಲಿ ನೀಡಲಾಗುತ್ತಿರುವ ಲಾಡು ಪ್ರಸಾದದ ತಯಾರಿಕೆಯಲ್ಲಿ ಸಾಂಪ್ರದಾಯಿಕವಾಗಿ ಬಳಸಲಾಗುವ ಶುದ್ಧ ಹಾಗೂ ಪೋಷಕಾಂಶಗಳಲ್ಲಿ ಶ್ರೀಮಂತವಾದ ಹಸುವಿನ ತುಪ್ಪದ ಬದಲು ಗೋಮಾಂಸದ ಕೊಬ್ಬು, ಹಂದಿಯ ಚರ್ಮದ ಕೊಬ್ಬು ಮತ್ತು ಮೀನಿನ ಎಣ್ಣೆ ಸೇರಿಸುತ್ತಿದ್ದರೆಂಬ ವಿಷಯ ಆತಂಕಕಾರಿಯಾಗಿದೆ. ಇದು ವೈಷ್ಣವ ಪರಂಪರೆಯಲ್ಲಿ ಸಂಪೂರ್ಣವಾಗಿ ನಿಷೇಧಿತವಾಗಿದೆ ಎಂದರು.

    ಕ್ಲಿಕ್ ಮಾಡಿ ಓದಿ: Bike Rally; ಹಿಂದೂ ಮಹಾಗಣಪತಿ ಶೊಭಾಯಾತ್ರೆ ಅಂಗವಾಗಿ ಭರ್ಜರಿ ಬೈಕ್ ರ್ಯಾಲಿ

    ಧರ್ಮದ್ರೋಹಿಗಳು ಮತ್ತು ಸರ್ಕಾರಿ ಲಂಚಕೋರರು ದುರುದ್ದೇಶದಿಂದ ಮತ್ತು ಸ್ವಾರ್ಥದಿಂದ ತಮ್ಮ ಧರ್ಮಕ್ಕೇ ದ್ರೋಹ ಬಗೆದಿರುವುದಲ್ಲದೆ ಕೋಟ್ಯಾಂತರ ಹಿಂದು ಭಕ್ತಾದಿಗಳು ಮತ್ತು ವಿಶ್ವದ 1/6ನೇ ಜನಸಂಖ್ಯೆಯನ್ನು ಹೊಂದಿರುವ ಅವಿಭಜಿತ ಹಿಂದೂಗಳ ಮನಸ್ಸಿಗೆ ಘಾಸಿಯನ್ನುಂಟುಮಾಡಿದ್ದಾರೆ.

    ಈ ಧರ್ಮದ್ರೋಹಿ ಕಾರ್ಯದಲ್ಲಿ ಭಾಗಿಯಾಗಿರುವವರು ಇಸ್ಲಾಂ ಅಥವಾ ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಸಲು ಹುನ್ನಾರ ನಡೆಸುತ್ತಿದ್ದಾರೆ ಎಂಬ ಅನುಮಾನವಿದೆ ಎಂದರು.

    ಈ ದೇವಸ್ಥಾನದಲ್ಲಿ ಭಕ್ತಾದಿಗಳು ಭಕ್ತಿಯಿಂದ ದೇವರಿಗೆ ಅರ್ಪಿಸುವ ದೇಣಿಗೆ ಮತ್ತು ಕಾಣಿಕೆಗಳ ದುರುಪಯೋಗ ಆಗುತ್ತಿದ್ದು, ಸರ್ಕಾರದ ಅಧಿಕಾರಿಗಳು ಮತ್ತು ರಾಜಕಾರಣಿಗಳು ಈ ಹುಂಡಿ ಹಣವನ್ನು ಧರ್ಮದ ವಿರುದ್ಧ ಬಳಸುತ್ತಿರುವುದು ಭಕ್ತರಿಗೆ ಅಪಾರವಾದ ನೋವು ತಂದಿದೆ ಎಂದು ದೂರಿದರು.

    ನಮ್ಮ ದೇಶದ ಸಂವಿಧಾನದಲ್ಲಿ ಮೌಲ್ಯಗಳು ಸದಾ ಎತ್ತಿಹಿಡಿಯಲ್ಪಟ್ಟಿವೆ. ಅದರೆ ಸರ್ಕಾರಗಳು ಚರ್ಚ್ ಮತ್ತು ಮಸೀದಿಗಳನ್ನು ಬಿಟ್ಟು ಕೇವಲ ಹಿಂದೂ ದೇವಾಲಯಗಳ ಮೇಲೆ ಮಾತ್ರ ತಾವೇ ನಿಯಂತ್ರಣ ಇಡುವುದನ್ನು ಒಪ್ಪುವುದಿಲ್ಲ. ಆದ್ದರಿಂದ ಭಕ್ತರೇ ದೇವಸ್ಥಾನಗಳ ನಿರ್ವಹಣೆ ಮಾಡುವ ವಾತಾವರಣ ಬೇಕು ಎಂದರು.

    ಕ್ಲಿಕ್ ಮಾಡಿ ಓದಿ: VA protest: ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರ ಆರಂಭ | ಕೆಲಸದ ಒತ್ತಡ ತಗ್ಗಿಸಲು ಆಗ್ರಹ | ಮೂಲ ಸೌಲಭ್ಯ ಕಲ್ಪಿಸಲು ಒತ್ತಾಯ

    ನಮ್ಮ ರಾಜ್ಯ ಸರ್ಕಾರವು ತಕ್ಷಣವೇ ಎಲ್ಲಾ ಹಿಂದೂ ದೇವಾಲಯಗಳನ್ನು ತಮ್ಮ ನಿಯಂತ್ರಣದಿಂದ ಬಿಡುಗಡೆ ಮಾಡಿ, ಪ್ರಾದೇಶಿಕ ವ್ಯವಸ್ಥೆಯಡಿಯಲ್ಲಿ ಹಿಂದೂ ಸಂತರು ಮತ್ತು ಭಕ್ತರಿಗೆ ಒಪ್ಪಿಸಬೇಕು. ಪವಿತ್ರ ಸಂತರು ಹಲವಾರು ವರ್ಷಗಳ ಅನುಭವ ಮತ್ತು ಸತ್ಯಾಸತ್ಯತೆಗಳನ್ನು ಅರಿತು, ಚರ್ಚಿಸಿದ ನಂತರ ಇದನ್ನು ನಿರ್ಧರಿಸಿದ್ದಾರೆ ಎಂದು ಹೇಳಿದರು.

    ಈ ವೇಳೆ ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ), ಬಜರಂಗದಳ ರಾಜ್ಯ ಸಂಯೋಜಕ ಪ್ರಭಂಜನ್, ಬಿಜೆಪಿ ಮುಖಂಡರಾದ ಅನಿತ್‌ಕುಮಾರ್, ಉಮೇಶ್ ಕಾರಜೋಳ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ.ಬದರಿನಾಥ್, ಹಿಂದೂ ಮಹಾಗಣಪತಿ ಸಮಿತಿ ಅಧ್ಯಕ್ಷ ನಯನ್ ಸೇರಿದಂತೆ ಹಲವು ಕಾರ್ಯಕರ್ತರಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top