ಮುಖ್ಯ ಸುದ್ದಿ
ಚರ್ಮದ ಬ್ರಾಂಡೆಡ್ ಉತ್ಪನ್ನ| ರಿಯಾಯಿತಿ ದರದಲ್ಲಿ ಮಾರಾಟ

CHITRADURGA NEWS | 06 MARCH 2024
ಚಿತ್ರದುರ್ಗ: ನಗರದ ಡಾ. ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ಲಿಡ್‍ಕರ್ ಲೆದರ್ ಎಂಪೋರಿಯಂ ಮಾರಾಟ ಮಳಿಗೆಯಲ್ಲಿ ಶೇ.10, ಶೇ.20 ಹಾಗೂ ಶೇ.30 ರಷ್ಟು ರಿಯಾಯಿತಿ ದರದಲ್ಲಿ ಅತ್ಯುತ್ತಮ ಗುಣಮಟ್ಟದ ಅಪ್ಪಟ ಚರ್ಮದ ಬ್ರಾಂಡೆಡ್ ಉತ್ಪನ್ನಗಳು ಈಗಾಗಲೇ ಇದೇ ಮಾರ್ಚ್ 03 ರಿಂದ ಮಾರಾಟ ಪ್ರಾರಂಭವಾಗಿದ್ದು, ಮಾರ್ಚ್ 27ರವರೆಗೆ ರಿಯಾಯಿತಿ ದರದಲ್ಲಿ ದೊರೆಯುತ್ತವೆ.
ಇದನ್ನೂ ಓದಿ: ಟೀಕೆ-ಟಿಪ್ಪಣಿಗಳಿಗೆ ಉತ್ತರವಾಗಿ ಗ್ಯಾರೆಂಟಿ ಯೋಜನೆಗಳು ಜಾರಿ
ಚಿತ್ರದುರ್ಗ ನಗರದ ಬಿ.ಡಿ.ರಸ್ತೆಯ ಪ್ರವಾಸಿ ಮಂದಿರ ಹತ್ತಿರದ ಜಿಲ್ಲಾ ಸ್ತ್ರೀ ಶಕ್ತಿ ಶಾಪಿಂಗ್ ಕಾಂಪ್ಲೇಕ್ಸ್ ನಂ.8ರ ಲಿಡ್ಕರ್ ಮಾರಾಟ ಮಳಿಗೆಗೆ ಗ್ರಾಹಕರು ಭೇಟಿ ನೀಡಿ, ಇದರ ಸದುಪಯೋಗ ಪಡಿಸಿಕೊಳ್ಳಬಹದು.
ಇದನ್ನೂ ಓದಿ: ಚಿತ್ರದುರ್ಗ ರೈಲ್ವೆ ಯೋಜನೆಗಳಿಗೆ ಶುಕ್ರದೆಸೆ | ನೇರ, ಮಾರ್ಗಕ್ಕೆ ಅನುದಾನ ಬಿಡುಗಡೆ
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08194-226651 ಗೆ ಸಂಪರ್ಕಿಸಬಹುದು ಎಂದು ಲಿಡ್‍ಕರ್ ಲೆದರ್ ಎಂಪೋರಿಯಂ ವ್ಯವಸ್ಥಾಪಕರು ತಿಳಿಸಿದ್ದಾರೆ.
